ಕಲಬುರಗಿ: ಇಂದು ಕೇಂದ್ರದ ಎನ್.ಡಿ.ಎ ನೇತೃತ್ವದ ಬಿಜೆಪಿ ಸರಕಾರ 2ನೇ ಬಾರಿ ಅಧಿಕಾರಿಕ್ಕೆ ಬಂದ ಮೊದಲನೆ ಬಜೆಟೆ ಬಗ್ಗೆ ಚಿತ್ತಾಪುರ ಕ್ಷೇತ್ರದ ಶಾಸಕ, ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿ ಕೇವಲ ನಾಮಕಾವಸ್ಥೆ( ಹೆಸರಿಗೆ ಮಾತ್ರ) ಬಜೆಟ್ ಮಂಡನೆ ಎಂದು ತಮ್ಮ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯೆ ಹಂಚಿಕೊಂಡಿದ್ದಾರೆ.
ಅವರ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ಅಂವಶ ಮತ್ತು ಬರ ಈ ಕೇಳಗಿನಂತಿದೆ.
ಬಜೆಟ್ 2020 : ಕೇವಲ ನಾಮಕಾವಸ್ಥೆಯ ಬಜೆಟ್
- ಹಿಂದುಳಿದವರು, ಶೋಷಿತರು, ಕಾರ್ಮಿಕರು ಹಾಗೂ ಗ್ರಾಮೀಣ ಭಾಗದ ಜನತೆಯ ಜೀವನಮಟ್ಟ ಸುಧಾರಿಸುವ ಯಾವುದೇ ಅಂಶಗಳು, ದೂರದೃಷ್ಟಿಯ ಯೋಜನೆಗಳು ಈ ಬಾರಿಯ ಬಜೆಟ್‌ನಲ್ಲಿ ಇಲ್ಲ.
- ನಿರುದ್ಯೋಗ ಸಮಸ್ಯೆಗೆ ಪರಿಹಾರ ಒದಗಿಸುವ ಯೋಜನೆಗಳಿಲ್ಲ.
ನವೋದ್ಯಮಗಳಿಗೆ ಪ್ರೋತ್ಸಾಹ ನೀಡುವ ಬಗ್ಗೆ ಸರ್ಕಾರವು ಗಂಭೀರ ಚಿಂತನೆ ನಡೆಸಿದಂತಿಲ್ಲ - 371ಜೆ ಮೂಲಕ ಸಾಂವಿಧಾನಕವಾಗಿ ವಿಶೇಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಭಾಗವನ್ನು ಮೋದಿ ಸರ್ಕಾರ ಮತ್ತೊಮ್ಮೆ ನಿರ್ಲಕ್ಷಿಸಿದೆ.
ಈ ಭಾಗಕ್ಕೆ ರೈಲ್ವೆ, ಬಂಡವಾಳ ಹೂಡಿಕೆ ಹಾಗೂ ವಿಶೇಷ ಅನುದಾನ ವಿಚಾರಗಳಲ್ಲೂ ಮೋಸ ಮುಂದುವರೆದಿದೆ.
2014ರಲ್ಲೇ ಘೋಷಣೆಯಾಗಿರುವ ಕಲಬುರಗಿ ಪ್ರತ್ಯೇಕ ರೈಲ್ವೆ ವಿಭಾಗದ ಅನುಷ್ಠಾನದ ಬಗ್ಗೆ ಈ ಬಾರಿಯ ಬಜೆಟ್‌ನಲ್ಲೂ ಸೊಲ್ಲೆತ್ತಿಲ್ಲ.
- ಅಂದಾಜು 18,600 ಕೋಟಿ ವೆಚ್ಚದ ಬೆಂಗಳೂರು ಸಬ್ ಅರ್ಬನ್ ರೈಲ್ವೆ ಕಾಮಗಾರಿಗೆ ಕೇವಲ 20% ಅನುದಾನ ನೀಡಲಾಗಿದೆ. ರಾಜ್ಯಗಳಿಗೆ ಕೇಂದ್ರವೇ ಜಿಎಸ್ ಟಿ ಬಾಕಿ ಹಣವನ್ನೇ ಎರಡು ಹಂತದಲ್ಲಿ ಮರು ಪಾವತಿ ಮಾಡುತ್ತೇವೆ ಎನ್ನುವಾಗ, ಸರಿಸುಮಾರು ₹15 ಸಾವಿರ ಕೋಟಿ ಹಣವನ್ನ ರಾಜ್ಯ ಎಲ್ಲಿಂದ ತರಬೇಕು?
ಕೇಂದ್ರವು ರಾಜ್ಯದ ಪಾಲಿನ ಜಿಎಸ್‌ಟಿ ಹಾಗೂ ನರೇಗಾ ಅನುದಾನವನ್ನೂ ನೀಡದ ಕಾರಣ, ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ರಾಜ್ಯ ಬಿಜೆಪಿ ಸರ್ಕಾರವು, ಇಷ್ಟೊಂದು ಮೊತ್ತವನ್ನು ಹೊಂದಿಸುವುದು ಎಲ್ಲಿಂದ?
ಅಷ್ಟಕ್ಕೂ 25 ಸಂಸದರನ್ನು ನೀಡಿದ ಕರ್ನಾಟಕಕ್ಕೆ ಕೇಂದ್ರ ಬಿಜೆಪಿ ಸರ್ಕಾರದಿಂದ ದಕ್ಕಿದ್ದೇನು..?