ಕಲಬುರಗಿ: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವೀರಶೈವ ಸಮಾಜದ ಸರ್ವಸದಸ್ಯರ ಸಭೆ ನಡೆಯಿತು.
ಈ ಸಭೆಯಲ್ಲಿ ಪ್ರಮುಖವಾಗಿ ಸಮಾಜ ಸಂಘಟನೆ ಮಾಡುವ ಕುರಿತು ಹಿರಿಯರಾದ ಸಮಾಜದ ಉಪಾಧ್ಯಕ್ಷ ಕಲ್ಯಾಣಪ್ಪ ಮಳಖೇಡ ಅವರು ಮಾತನಾಡುತ್ತಾ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಬಲಿಷ್ಠ ಸಂಘಟನೆ ಕಟ್ಟುವುದು ಅನಿವಾರ್ಯವಾಗಿದೆ ಎಂದರು.
ಗೌರವಾಧ್ಯಕ್ಷ ಜಿ.ಡಿ. ಅಣಕಲ ಅವರು ಮಾತನಾಡುತ್ತಾ ಸಮಾಜಕ್ಕಾಗಿ ನಮ್ಮನ್ನು ಕೊಡುಗೆ ಕೊಟ್ಟಿದ್ದೇವೆ ಎಂದರು. ಎಸ್.ವಿ.ಮಠಪತಿ ಮಾತನಾಡಿ ಸಮಾಜ ಸಂಘಟನೆ ಬಲವರ್ಧನೆ ಮಾಡಲು ಮನವಿ ಮಾಡಿದರು. ಈ ಸಭೆಯ ಅಧ್ಯಕ್ಷತೆ ವಹಿಸಿದ ಅರುಣಕುಮಾರ ಪಾಟೀಲ್ ಮಾತನಾಡುತ್ತಾ ಸಮಾಜ ಬಲಿಷ್ಠವಾಗಿದ್ದರೂ ರಾಜಕೀಯವಾಗಿ ಸಂಘಟನಾತ್ಮಕವಾಗಿ ನಾವು ಬಹಳಷ್ಟು ದುರ್ಬಲವಾಗಿರುವುದು ಅತ್ಯಂತ ಖೇದನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಲ್ಲರ ಸಮ್ಮುಖದಲ್ಲಿ ಸರ್ವಾನುಮತದಿಂದ ಸಚಿನ ಸ್ವಂತ ಅವರನ್ನು ಯುವ ಘಟಕದ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಲಾಯಿತು. ಹಾಗೂ ಶಾಂತಕುಮಾರ ವಾಡೆದ ಅವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ಸಭೆಯಲ್ಲಿ ಕಾರ್ಯಧ್ಯಕ್ಷ ಸುಭಾಷ ಬಿಜಾಪುರೆ, ಕಲ್ಯಾಣಪ್ಪ ಗೋದಿ, ಬಸವರಾಜ ಮಾಡಗಿ, ಡಾ. ಶ್ರೀಶೈಲ ಗೊಳಿ, ವಿಜಂಯಕುಮಾರ ಸಾತನೂರ, ಚಂದ್ರಶೇಖರ ತಳ್ಳಳ್ಳಿ, ಸಾತಪ್ಪ ಪಟ್ಟಣಕರ್, ಶರಣಗೌಡ ಪಾಟೀಲ್, ಬಸವರಾಜ ಮಂಗಲಗಿ, ಸಂಗನಗೌಡ ಪಾಟೀಲ್, ಹನುಮಂತ್ರಾಯ ಪಾಟೀಲ್, ರಾಜಶೇಖರ ಅಲ್ಲದ, ರಮೇಶ ಪಾಟೀಲ್, ಮಹಾಂತೇಶ ಪಾಟೀಲ್, ಪ್ರಶಾಂತ ಗುಡ್ಡ, ಸಂತೋಷ ಪಾಟೀಲ್, ವೀರು ಪಾಟೀಲ್ ರಾಯಕೋಡ, ಶಿವಶರಣಪ್ಪ ಮಣಕಂಟಿ, ವಿ.ಸಿ ಪಾಟೀಲ್, ಶಿವಕುಮಾರ ಧರಪ್ಪಗೋಳ, ಸಿದ್ದಣ್ಣಪ್ಪ ಹೊದಲೂರ, ಶರಣು ಭೂಸನೂರ, ಪರಮೇಶ್ವರ ಗುಡ್ಡ ಮತ್ತಿತರು ಇದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…