ಚಿಂಚೋಳಿ: ಇಂದಿನ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ನಾನು, ನನ್ನಿಂದ ಎನ್ನುವ ಸ್ವಾರ್ಥ ಭಾವನೆಯನ್ನು ತೊರೆದು ನಾವು, ನಮ್ಮವರು ಎಂದು ಬದುಕು ರೂಪಿಸಿಕೊಳ್ಳಬೇಕು ಎಂದು ಕಲಬುರ್ಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನದ ಪೂಜ್ಯ ಶ್ರೀ ಡಾ. ಶರಣಬಸವಪ್ಪ ಅಪ್ಪಾ ನುಡಿದರು.
ಮತಕ್ಷೇತ್ರದ ತೇಗಲತಿಪ್ಪಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ದೇವಾಲಯದಲ್ಲಿ ಶರಣಬಸವೇಶ್ವರರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿಯಲ್ಲಿ ನಿಸ್ವಾರ್ಥ ಭಾವನೆಯಿಂದ ದುಡಿಯುವವನೇ ನಿಜವಾದ ಕಾಯಕಜೀವಿ ಎಂಬುದು ಪ್ರತಿಯೊಬ್ಬರು ಅರಿಯಬೇಕು ಎಂದರು.
೧೨ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಹಾಗೂ ಶರಣಬಸವೇಶ್ವರರು ದೇಶದಲ್ಲಿನ ಅಂಧಕಾರ, ಅಜ್ಞಾನ, ಮೂಢನಂಬಿಕೆ, ಸಮಾಜದ ಸುಧಾರಣೆಗೆ ದುಡಿದ ಮಹಾನ್ ಚೇತನಮೂರ್ತಿಗಳು, ಅವರ ತತ್ವ ಆದರ್ಶಗಳು ಜೀವನದಲ್ಲಿ ಮೈಗೂಡಿಸಿಕೊಂಡು ಬದುಕಬೇಕು. ಗ್ರಾಮದಲ್ಲಿ ಶರಣಬಸವೇಶ್ವರರ ಮೂರ್ತಿ ಪ್ರತಿಷ್ಠಾಪಿಸಿ ಆರಾಧಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ಸಾಗಬೇಕು ಎಂದು ಮಾತನಾಡಿದರು.
ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಮಾತನಾಡಿ, ಹೃದಯವಂತರು, ಭಕ್ತಿವಂತರ ಪುಣ್ಯ ಕ್ಷೇತ್ರ ತೇಗಲತಿಪ್ಪಿ ಗ್ರಾಮವಾಗಿದೆ. ತೇಗಲತಿಪ್ಪಿ ಗ್ರಾಮದಲ್ಲಿ ಶರಣರ ಆರಾಧಕರು ಹೆಚ್ಚಿಗೆ ಇದ್ದು, ಪ್ರತಿಯೊಬ್ಬರೂ ಸಮಾನತೆಯಿಂದ ಉತ್ತಮ ಬದುಕು ರೂಪಿಸಿಕೊಂಡು ಸಾಗಬೇಕು ಎಂದು ಮಾತನಾಡಿದರು. ಇದಕ್ಕೂ ಮುಂಚೆ ಗ್ರಾಮದಲ್ಲಿ ಮುತೈದೆಯರು ತಂಬಿಗೆ ಹೊತ್ತು ಡೊಳ್ಳು ವಾದ್ಯಗಳೊಂದಿಗೆ ದೇವಾಲಯದವರೆಗೆ ಕಳಶ ಮೆರವಣಿಗೆಯು ಅದ್ಧೂರಿಯಿಂದ ನೆರವೇರಿಸಲಾಯಿತು. ೧೧ ದಿನಗಳ ಕಾಲ ನಿರಂತರವಾಗಿ ಮಹಾದಾಸೋಹಿ ಶರಣಬಸವೇಶ್ವರರ ಪುರಾಣ ನೆರವೇರಿತು.
ಈ ಸಂದರ್ಭದಲ್ಲಿ ಭರತನೂರಿನ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿ, ರಟಕಲನ ಶ್ರೀ ಸಿದ್ಧರಾಮ ಮಹಾಸ್ವಾಮಿ, ಸಂಸದ ಡಾ. ಉಮೇಶ ಜಾಧವ್, ಕಾಂಗ್ರೇಸ್ ವಕ್ತಾರ ಸುಭಾಷ ರಾಠೋಡ, ಸಾಂಸತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಮುಕುಂದ ದೇಶಪಾಂಡೆ, ವಿಜಯಕುಮಾರ ಚೇಂಗಟಾ, ಗೌತಮ ಪಾಟೀಲ್, ಅಬ್ದುಲ್ ಬಾಸೀದ್, ಭೀಮರಾವ ತೇಗಲತಿಪ್ಪಿ, ಸಂತೋಷ ಗಡಂತಿ, ಲಕ್ಷ್ಮಣ ಆವಂಟಿ, ಮಾರುತಿ ಗಾಂವ್ಕರ್, ಜಗನ್ನಾಥ ಪೂಜಾರಿ, ಚಂದ್ರಶೇಖರ ಹರಸೂರ್, ಅನೀಲಕುಮಾರ ಜಮಾದಾರ, ಹಣಮಂತರಾವ ಪೊಲೀಸ್ ಪಾಟೀಲ್, ಜಗನ್ನಾಥ ಪೂಜಾರಿ, ಗುಂಡಪ್ಪ ರೆಡ್ಡಿ, ದಯಾನಂದ ಪೆಂಚನಪೆಳ್ಳಿ, ಬಸವರಾಜ ವಠಾರ, ರವಿರಾಜ ಕೊರವಿ, ಮಲ್ಲಿಕಾರ್ಜುನ ಪಾಟೀಲ್, ಸೋಮಶೇಖರ ಪಾಟೀಲ್, ಪ್ರಭು ಪಾಟೀಲ್, ಸಿದ್ದರಾಮ ತೇಗಲತಿಪ್ಪಿ, ಪ್ರವೀಣ ತೇಗಲತಿಪ್ಪಿ, ಶಿವರಾಜ ಪಾಟೀಲ್, ನಾಗೀಂದ್ರಪ್ಪ ಪಾಟೀಲ್ ಸೇರಿದಂತೆ ಅನೇಕರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…