ಸುರಪುರ: ವಿದ್ಯಾರ್ಥಿಗಳು ನಿಮ್ಮ ಒದಿಗಾಗಿ ಸಾಕಷ್ಟು ಸವಲತ್ತುಗಳನ್ನು ಸರ್ಕಾರವು ಮತ್ತು ನಿಮ್ಮ ಪೋಷಕರು ವದಗಿಸುತ್ತಿದ್ದಾರೆ ಅವಗಳನ್ನು ಸದೂಪಯೋಗಿಸಿಕೊಂಡು ಉನ್ನತ್ತ ಫಲಿತಾಂಶದಿಂದ ತೇರ್ಗೆಡೆಹೊಂದುವತ್ತ ನಿಮ್ಮ ದಿನಚರಿಗಳನ್ನು ರೊಪಿಸಿಕೊಂಡು ಕಾಲೇಜಿಗೆ ಕಿರ್ತಿ ತರಬೇಕು ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ತಿಳಿಸಿದರು.
ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಗಂಣದಲ್ಲಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಲ್ಯಾಪಟಾಪ್ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಿಮಗೆ ಲ್ಯಾಪ್ಟಾಪ್ ವಿತರಿಸುವುದು ನಿಮ್ಮ ಅಭ್ಯಾಸಕ್ಕೆ ಸಹಾಯವಾಗಲೆಂದು ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಅಬ್ಯಾಸಮಾಡಬೇಕು ಮತ್ತು ಇದರಿಂದ ವಿದ್ಯಾರ್ಥಿಗಳು ವಾಮಮಾರ್ಗಹಿಡಿದು ದಾರಿತಪ್ಪುವುದು ಬೇಡ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಚಾರ್ಯ ವೆಂಕೋಬ ಬಿರಾದರ್ ಮಾತನಾಡಿ ವಿದ್ಯಾರ್ಥಿಗಳು ನಿಮಗೆ ಸಿಗುವ ಸವಲತ್ತುಗಳನ್ನು ಸದೂಪಯೋಗ ಪಡಿಸಿಕೊಳ್ಳಬೇಕು ಮುಖ್ಯಮಂತ್ರಿಗಳ ಉಚಿತಲ್ಯಾಪಟಾಪ್ ವಿತರಣೆ ಯೋಜನೆಯನ್ನು ಈ ಬಾರಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿಸ್ತರಿಸಲಾಗಿದೆ ಒಟ್ಟು ನಮ್ಮ ಕಾಲೇಜಿಗೆ ೨೧೦ ಲ್ಯಾಪಟಾಪ್‌ಗಳು ವಿತರಣೆಗೆ ಸಿದ್ದವಾಗಿವೆ ಸರ್ಕಾರದ ನಿಯಮದಂತೆ ಆಯಾ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ನಿಮಗೆ ಸಿಗುವ ಅವಕಾಶಗಳನ್ನು ಸದಬಳಕೆಮಾಡಿಕೊಂಡು ನಿಮ್ಮ ಕಾಲೇಜಿಗೆ ಕೀರ್ತಿತಂದು ನಿಮ್ಮ ತಂದೆ ತಾಯಿ ರುಣ ತೀರಸಬೇಕು ಎಂದು ಹೇಳಿದರು.
ಈ ಸಮಯದಲ್ಲಿ ಸಾಂಕೇತಿಕವಾಗಿ ೬ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್‌ಗಳನ್ನು ವಿತರಿಸಲಾಯಿತು.
ಮುಖಂಡರಾದ ಸುರೇಶ ಸಜ್ಜನ್, ಹೆಚ್.ಸಿ.ಪಾಟೀಲ್, ಉಪನ್ಯಾಸಕರಾದ ಭೀಮಣ್ಣ ಮಾಲಿಪಾಟಿಲ್, ಎಸ್.ಎಸ್ ರಾಮಪುರೆ, ಬಲಭೀಮ ದೇಸಾಯಿ ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಇನ್ನಿತರರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…