ಬಿಸಿ ಬಿಸಿ ಸುದ್ದಿ

ಕನ್ನಡ ಭಾಷೆಯನ್ನು ಮರೆಯದೇ ಇತರೆ ಭಾಷೆಗಳಿಂದ ಜ್ಞಾನ ಪಡೆದುಕೊಳ್ಳಿ: ಗ್ರಾ,ಪಂ.ಅಧ್ಯಕ್ಷ ಬಸವರಾಜ

ನಾಗಮಂಗಲ: ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯೊಂದಿಗೆ ಇತರೆ ಭಾಷೆಗಳನ್ನು ಕಲಿಯುವ  ಅನಿವಾರ್ಯತೆ ನಿರ್ಮಾಣವಾಗಿದೆ. ಅದು ತಪ್ಪಲ್ಲ .ಆದರೆ ನಮ್ಮ‌ ಕನ್ನಡ ಭಾಷೆಯನ್ನು ಮರೆಯದೇ ಇತರೆ ಭಾಷೆಗಳಿಂದ ಜ್ಞಾನ ಪಡೆದುಕೊಳ್ಳಿ ಎಂದು ಗ್ರಾ,ಪಂ.ಅಧ್ಯಕ್ಷ ಬಸವರಾಜ ಹೇಳಿದರು.

ದೇವಲಾಪುರದ ಹೋಬಳಿ ಕೇಂದ್ರದ ಕರ್ನಾಟಕ ಪಬ್ಲಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಪೋಷಕರು ಮತ್ತು ವಿದ್ಯಾರ್ಥಿಗಳು ಕೇವಲ ಅಂಕ ಪಟ್ಟಿಯಲ್ಲಿ ಅಂಕಗಳಿಸುವುದೇ ಅಂತಿಮ ಗುರಿಯಾಗಿಸಿಕೊಂಡರೆ ಮಗುವಿನ ವ್ಯಕ್ತಿತ್ವವನ್ನು ನಿರ್ಲಕ್ಷಿಸಿದಂತೆ ಆಗುತ್ತದೆ.ಪೋಷಕರು ಶಾಲೆಗಳಲ್ಲಿ ಭಾಗವಹಿಸುವಿಕೆ ಮುಖ್ಯವಾಗುತ್ತದೆ. ಮಕ್ಕಳನ್ನು ಬೆಳಸಿ ಸಮಾಜಕ್ಕೆ ಕೊಡುಗೆ ಕೊಟ್ಟ ನಂತರ ಅವರು ಸಮಾಜಕ್ಕೆ ಪರಿಮಳವನ್ನು ಪಸರಿಸುವಂತೆ ಮಾಡುವ ಪುಷ್ಪಗಳಾಗಬೇಕು.ಅಲ್ಲದೇ ಪೋಷಕರು ಮಕ್ಕಳ ಮನಸ್ಸನ್ನು ಅರಿಯದೇ ಒತ್ತಡ ಹೇರುವುದು ಮಗುವಿನ ಎಳೆಯ ಮನಸ್ಸನ್ನು ಚುಚ್ಚಿಕೊಲ್ಲುತ್ತದೆ.ಅವರು ನಮ್ಮ ಮಾತಾನ್ನು ಕೆಳದಿರಬಹುದು. ಆದರೆ ಮಕ್ಕಳು‌ ನಮ್ಮ ನಡೆನುಡಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದು ಮಾತನಾಡಿದರು.

ಮಕ್ಕಳು ಸಂಕುಚಿತ ಮನೋಭಾವನೆಯನ್ನು ದೂರ ಮಾಡುವ ಮೂಲಕ ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಯೂ ಸಹ ವಿಶೇಷವಾದದ್ದು,ಅಂತಹ ವಿಶೇಷ ಹಾದಿಯಲ್ಲಿ ಮಕ್ಕಳು ಸಾಗುವಾಗ ನೀವು ಉತ್ತಮ ರೀತಿಯಲ್ಲಿ ಬೆಳೆಸುವ ಕೆಲಸವನ್ನು ತಂದೆತಾಯಿ‌ ಮಾಡಬೇಕು.ನಮ್ನ ಮಕ್ಕಳಿಗೆ ಜ್ಞಾನ‌ ಕೊಡುವ ಶಿಕ್ಷಕರನ್ನು ದೇವರು ಎಂದು ಭಾವಿಸಿ.ಏಕೆಂದರೆ ನೀವು ಕೊಡುವುದು ಅನ್ನ,ಆದರೆ ಶಿಕ್ಷಕರು ಕೊಡುವುದು ಜ್ಞಾನವಾಗಿದೆ.ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಕರನ್ನು ಗೌರವಿಸುವ ಕೆಲಸ ಮಾಡಬೇಕು ಎಂದು ಅಂಬೇಡಕರವಸತಿ ಶಾಲೆಯ ಮೂಖಶಿಕ್ಷಕರಾದ ಸಂತೋಷ್ ತಿಳಿಸಿದರು.

ಮಕ್ಕಳ ಉತ್ಸಾಹ ಕಲಿಕೆಯ ನಿರಂತರ ಸಾಕ್ಷಿಗೆ ಇಂತಹ ಕಾರ್ಯಕ್ರಮಗಳಿಂದ ಸರಕಾರಿ ಶಾಲೆಗಳ ಬೆಳವಣಿಗೆ ಸಾದ್ಯವೆಂದು ಶಿಕ್ಷಣ ಸಂಯೋಜಕರಾದ ಡಿ ಪಿ.ಗಿರೀಶ್ ಅಬಿಪ್ರಾಯಪಟ್ಟರು ಶಾಲಾ ಆಡಳಿತ ಮಂಡಳಿಯ ಅದ್ಯಕ್ಷರಾದ ತಿಮೇಗೌಡ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು ಗ್ರಾ .ಪಂ .ಸದಸ್ಯರಾದ ಡಿಕೆ ಸುರೇಶ್ ಪಾಶುವೈದ್ಯದಿಕಾರಿಗಳಾದ ಹರೀಶ್ ಸಿ ಆರ್ ಪಿ ವನಾಜಾಕ್ಷಿಗಣ್ಯರು.ಪೋಷಕರು ಹಾಜರಿದ್ದರು .

ಸಬೆಯಲ್ಲಿಪತ್ರಕರ್ತದೇ ರಾ  ಜಗದೀಶ್  ,ದೇವಲಾಪುರ ಕಾಲೇಜಿನ ಪ್ರಾಂಶುಪಾಲರಾದ ನಂಜಮಣಿ.ಪ್ರೌಢವಿಬಾಗದಶಿಕ್ಷಕರಾದ ಅಯ್ಯಪ್ಪ. ವಸತಿಶಾಲೆಯ ಶಿಕ್ಷಕರು.ಶಾಲಾ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು ಶಾಲಾಶಿಕ್ಷಕರಾದ ನಾಗೇಗೌಡ ಸ್ವಾಗತಿಸಿದರೆ ಶಿಕ್ಷಕರಾದ ಪರಮೇಶ್ ವಂದಿಸಿದರು

emedialine

Recent Posts

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

3 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

3 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

5 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

5 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

6 hours ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

6 hours ago