ನಾಗಮಂಗಲ: ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯೊಂದಿಗೆ ಇತರೆ ಭಾಷೆಗಳನ್ನು ಕಲಿಯುವ ಅನಿವಾರ್ಯತೆ ನಿರ್ಮಾಣವಾಗಿದೆ. ಅದು ತಪ್ಪಲ್ಲ .ಆದರೆ ನಮ್ಮ ಕನ್ನಡ ಭಾಷೆಯನ್ನು ಮರೆಯದೇ ಇತರೆ ಭಾಷೆಗಳಿಂದ ಜ್ಞಾನ ಪಡೆದುಕೊಳ್ಳಿ ಎಂದು ಗ್ರಾ,ಪಂ.ಅಧ್ಯಕ್ಷ ಬಸವರಾಜ ಹೇಳಿದರು.
ದೇವಲಾಪುರದ ಹೋಬಳಿ ಕೇಂದ್ರದ ಕರ್ನಾಟಕ ಪಬ್ಲಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು ಪೋಷಕರು ಮತ್ತು ವಿದ್ಯಾರ್ಥಿಗಳು ಕೇವಲ ಅಂಕ ಪಟ್ಟಿಯಲ್ಲಿ ಅಂಕಗಳಿಸುವುದೇ ಅಂತಿಮ ಗುರಿಯಾಗಿಸಿಕೊಂಡರೆ ಮಗುವಿನ ವ್ಯಕ್ತಿತ್ವವನ್ನು ನಿರ್ಲಕ್ಷಿಸಿದಂತೆ ಆಗುತ್ತದೆ.ಪೋಷಕರು ಶಾಲೆಗಳಲ್ಲಿ ಭಾಗವಹಿಸುವಿಕೆ ಮುಖ್ಯವಾಗುತ್ತದೆ. ಮಕ್ಕಳನ್ನು ಬೆಳಸಿ ಸಮಾಜಕ್ಕೆ ಕೊಡುಗೆ ಕೊಟ್ಟ ನಂತರ ಅವರು ಸಮಾಜಕ್ಕೆ ಪರಿಮಳವನ್ನು ಪಸರಿಸುವಂತೆ ಮಾಡುವ ಪುಷ್ಪಗಳಾಗಬೇಕು.ಅಲ್ಲದೇ ಪೋಷಕರು ಮಕ್ಕಳ ಮನಸ್ಸನ್ನು ಅರಿಯದೇ ಒತ್ತಡ ಹೇರುವುದು ಮಗುವಿನ ಎಳೆಯ ಮನಸ್ಸನ್ನು ಚುಚ್ಚಿಕೊಲ್ಲುತ್ತದೆ.ಅವರು ನಮ್ಮ ಮಾತಾನ್ನು ಕೆಳದಿರಬಹುದು. ಆದರೆ ಮಕ್ಕಳು ನಮ್ಮ ನಡೆನುಡಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ ಎಂದು ಮಾತನಾಡಿದರು.
ಮಕ್ಕಳು ಸಂಕುಚಿತ ಮನೋಭಾವನೆಯನ್ನು ದೂರ ಮಾಡುವ ಮೂಲಕ ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸೃಷ್ಟಿಯಲ್ಲಿ ಪ್ರತಿಯೊಂದು ಜೀವಿಯೂ ಸಹ ವಿಶೇಷವಾದದ್ದು,ಅಂತಹ ವಿಶೇಷ ಹಾದಿಯಲ್ಲಿ ಮಕ್ಕಳು ಸಾಗುವಾಗ ನೀವು ಉತ್ತಮ ರೀತಿಯಲ್ಲಿ ಬೆಳೆಸುವ ಕೆಲಸವನ್ನು ತಂದೆತಾಯಿ ಮಾಡಬೇಕು.ನಮ್ನ ಮಕ್ಕಳಿಗೆ ಜ್ಞಾನ ಕೊಡುವ ಶಿಕ್ಷಕರನ್ನು ದೇವರು ಎಂದು ಭಾವಿಸಿ.ಏಕೆಂದರೆ ನೀವು ಕೊಡುವುದು ಅನ್ನ,ಆದರೆ ಶಿಕ್ಷಕರು ಕೊಡುವುದು ಜ್ಞಾನವಾಗಿದೆ.ಆದ್ದರಿಂದ ಪ್ರತಿಯೊಬ್ಬರೂ ಶಿಕ್ಷಕರನ್ನು ಗೌರವಿಸುವ ಕೆಲಸ ಮಾಡಬೇಕು ಎಂದು ಅಂಬೇಡಕರವಸತಿ ಶಾಲೆಯ ಮೂಖಶಿಕ್ಷಕರಾದ ಸಂತೋಷ್ ತಿಳಿಸಿದರು.
ಮಕ್ಕಳ ಉತ್ಸಾಹ ಕಲಿಕೆಯ ನಿರಂತರ ಸಾಕ್ಷಿಗೆ ಇಂತಹ ಕಾರ್ಯಕ್ರಮಗಳಿಂದ ಸರಕಾರಿ ಶಾಲೆಗಳ ಬೆಳವಣಿಗೆ ಸಾದ್ಯವೆಂದು ಶಿಕ್ಷಣ ಸಂಯೋಜಕರಾದ ಡಿ ಪಿ.ಗಿರೀಶ್ ಅಬಿಪ್ರಾಯಪಟ್ಟರು ಶಾಲಾ ಆಡಳಿತ ಮಂಡಳಿಯ ಅದ್ಯಕ್ಷರಾದ ತಿಮೇಗೌಡ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು ಗ್ರಾ .ಪಂ .ಸದಸ್ಯರಾದ ಡಿಕೆ ಸುರೇಶ್ ಪಾಶುವೈದ್ಯದಿಕಾರಿಗಳಾದ ಹರೀಶ್ ಸಿ ಆರ್ ಪಿ ವನಾಜಾಕ್ಷಿಗಣ್ಯರು.ಪೋಷಕರು ಹಾಜರಿದ್ದರು .
ಸಬೆಯಲ್ಲಿಪತ್ರಕರ್ತದೇ ರಾ ಜಗದೀಶ್ ,ದೇವಲಾಪುರ ಕಾಲೇಜಿನ ಪ್ರಾಂಶುಪಾಲರಾದ ನಂಜಮಣಿ.ಪ್ರೌಢವಿಬಾಗದಶಿಕ್ಷಕರಾದ ಅಯ್ಯಪ್ಪ. ವಸತಿಶಾಲೆಯ ಶಿಕ್ಷಕರು.ಶಾಲಾ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು ಶಾಲಾಶಿಕ್ಷಕರಾದ ನಾಗೇಗೌಡ ಸ್ವಾಗತಿಸಿದರೆ ಶಿಕ್ಷಕರಾದ ಪರಮೇಶ್ ವಂದಿಸಿದರು