ಸುರಪುರ: ಮಾನವರೆಲ್ಲ ಒಂದೆ ಮನುಷ್ಯರಲ್ಲಿ ಮೇಲು ಕೀಳೆಂಬುದಿಲ್ಲ,ಎಲ್ಲರು ಒಂದೆ ಎಂದು ಬದುಕಿದೆ ಸಮಾಜದಲ್ಲಿ ಸಾಮರಸ್ಯ ಸಾಧ್ಯ ಎಂದು ಸಮಾನತೆಗಾಗಿ ಮೊದಲು ಧ್ವನಿ ಎತ್ತಿದ ಮಾಹಾ ಮಾನವತಾಅವಾದಿ ಜಗಜ್ಯೋತಿ ಬಸವಣ್ಣನವರು ಎಂದು ತಹಸೀಲ್ದಾರ ಸುರೇಶ ಅಂಕಲಗಿ ಮಾತನಾಡಿದರು.
ನಗರದ ತಹಸೀಲ್ ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಪ್ರತಿಯೊಬ್ಬ ಮನುಷ್ಯನಿಗೆ ಕಾಯಕ ಮುಖ್ಯವಾದುದು,ಸತ್ಯ ಶುಧ್ಧ ಕಾಯಕ ಮಾಡುವ ಮನುಷ್ಯನಿಗೆ ನೆಮ್ಮದಿಯ ಜೀವನವಿದೆ,ಅಲ್ಲದೆ ಸತ್ಯವ ನುಡಿವುದೆ ದೇವ ಲೋಕ,ಮಿಥ್ಯವ ನುಡಿವುದೆ ಮರ್ತ್ಯ ಲೋಕ ಆಚಾರವೆ ಸ್ವರ್ಗ ಅನಾಚಾರವೆ ನರಕ ಎಂದು ಸ್ವರ್ಗ ನರಕಗಳ ಬಗ್ಗೆ ಸುಂದರವಾಗಿ ತಿಳಿಸಿಕೊಟ್ಟ ಮಹಾನ್ ಪುರುಷ ಎಂದರು.
ಕಾರ್ಯಕ್ರಮದಲ್ಲಿ ಬಸವಣ್ಣನವರ ಕುರಿತು ನ್ಯಾಯವಾದಿ ಅಪ್ಪಾಸಾಹೇಬ ಪಾಟೀಲ ಉಪನ್ಯಾಸ ನೀಡಿ,ಬಸವಣ್ಣನವರು ಜಾತಿ ಮತ ಭೇದಗಲ ಅಳಿದು ಬಾಳಿದವರು,ಕಲ್ಯಾಣದಲ್ಲಿ ನಡೆಸಿದ ಅಂತರ್ಜಾತಿ ವಿವಾಹದಿಂದ ಕ್ರಾಂತಿಯನ್ನು ನಡೆಸಿ ಜನರಲ್ಲಿದ್ದ ಮೇಲು ಕೀಳು ಎಂಬ ಭಾವನೆಯನ್ನು ತೊಲಗಿಸಿ ಜಗಜ್ಯೋತಿ ಯಾದರು.ಇಂದಿನ ಸಂವಿಧಾನದಲ್ಲಿನ ಎಲ್ಲಾ ವಿಚಾರಗಳು ಹನ್ನೆರಡನೆ ಶತಮಾನದಲ್ಲಿಯೆ ತಮ್ಮ ವಚನಗಳ ಮೂಲಕ ಸಾರಿದ ಶರಣರಲ್ಲಿ ಬಸವಣ್ಣ ಅಗ್ರಗಣ್ಯರಾಗಿದ್ದರು ಎಂದರು.ಇದೇ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಮುಖಂಡ ಸುರೇಶ ಸಜ್ಜನ ಮಾತನಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಲಾಯಿತು.ಬಸವರಾಜ ಜಮದ್ರಖಾನಿ, ಬಸವರಾಜಪ್ಪ ನಿಷ್ಠಿ ದೇಶಮುಖ, ಮಾನಪ್ಪ ಕಟ್ಟಿಮನಿ ವೇದಿಕೆ ಮೇಲಿದ್ದರು. ಮಂಜುನಾಥ ಜಾಲಹಳ್ಳಿ, ವೀರೇಶ ದೇಶಮುಖ, ಶಾಂತರಾಜ ಬಾರಿ, ಮಹೇಶ ಪಾಟೀಲ, ಚಂದ್ರಶೇಖರ ಡೊಣುರ, ಧರ್ಮರಾಜ ಬಡಿಗೇರ, ಜಗದೀಶ ಪಾಟೀಲ, ಶಿವರಾಜ ಕಲಕೇರಿ ಸೇರಿದಂತೆಸ ತಾಲ್ಲುಕಿನ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಹಾಗು ಹಲವಾರು ಜನ ಬಸವಾಭಿಮಾನಿಗಳು ಕಾರ್ಯಕ್ರಮದಲ್ಲಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…