ಸುರಪುರ: ಸಹಕಾರ ರಂಗ ಇಂದು ದೊಡ್ಡ ಮಟ್ಟದಲ್ಲಿ ಬೆಳೆದಿದೆ,ತಾವು ಸಹಕಾರ ರಂಗದ ಭಾಗವಾಗಿ ಇಂದು ಬಸವೇಶ್ವರ ಪತ್ತಿನ ಸಹಕಾರ ಸಂಘಕ್ಕೆ ನೂತನ ನಿರ್ದೇಶಕರಾಗಿ ನೇಮಕಗೊಂಡಿರುವುದು ಸಂತೋಷದ ಸಂಗತಿ ತಾವೆಲ್ಲರು ಬಸವೇಶ್ವರ ಪತ್ತಿನ ಸಹಕಾರ ಸಂಘವನ್ನು ಎತ್ತರಕ್ಕೆ ಬೆಳೆಸುವಂತೆ ಯಾದಗಿರಿಯ ದಾಸಬಾಳ ಮಠದ ವಿರೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ನಗರದ ತಿಮ್ಮಾಪುರದಲ್ಲಿ ಆರಂಭಗೊಂಡಿರುವ ಶರಣಬಸವೇಶ್ವರರ ಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು ಬಸವೇಶ್ವರ ಪತ್ತಿನ ಸಹಕಾರ ಸಂಘದ ನೂತನ ನಿರ್ದೇಶಕ ಸೂಗುರೇಶ ವಾರದವರ ಮನೆಯಲ್ಲಿ ಎಲ್ಲಾ ನಿರ್ದೇಶಕರಿಗೆ ಸನ್ಮಾನಿಸಿ ಮಾತನಾಡಿ,ತಾವೆಲ್ಲ ನಿರ್ದೇಶಕರು ಸೇರಿ ಸಮಾಜದಲ್ಲಿನ ಜನರ ಆರ್ಥಿಕ ಸಂಕಷ್ಟಕ್ಕೆ ನೆರವಾಗಿ ಎಲ್ಲರನ್ನು ಮೇಲೆತ್ತುವ ಕಾರ್ಯಕ್ಕೆ ಮುಂದಾಗುವಂತೆ ತಿಳಿಸಿ ಎಲ್ಲರನ್ನು ಸನ್ಮಾನಿಸಿ ಗೌರವಿಸಿದರು.
ಶ್ರೀಗಳಿಂದ ಆಶೀರ್ವಾದ ಪಡೆದ ನೂತನ ನಿರ್ದೇಶಕರಾದ ಮನೋಹರ ಎಂ.ಜಾಲಹಳ್ಳಿ,ಸೂಗುರೇಶ ವಾರದ,ಜಯಲಲಿತ ಪಾಟೀಲ,ಶ್ವೇತಾ ಎಂ ಗುಳಗಿ,ಶರಣಪ್ಪ ಕಳ್ಳಿಮನಿ ಹಾಗು ಜಗದೀಶ ಪಾಟೀಲ ಸೂಗುರು ಇವರು ಶ್ರೀಗಳಿಗೆ ಫಲ ತಾಂಬುಲ ನೀಡಿ ಗೌರವಿಸಿದರು.ಈ ಸಂದರ್ಭದಲ್ಲಿ ಷಡಕ್ಷರಿ ಹಿರೇಮಠ,ಪ್ರಕಾಶ ಅಂಗಡಿ ಹೆಮ್ಮಡಗಿ,ಮಹೇಶ ಪಾಟೀಲ,ಮಹಾಂತೇಶ ದೇಸಾಯಿ,ರಾಜೇಶ್ ಯರಮಸಾಳ,ರಾಜು ದೇವರಗೋನಾಲ,ಬಸವರಾಜ ವಾರದ,ಸತೀಶ ವಾರದ ಸೇರಿದಂತೆ ವಾರದ ಕುಟುಂಬದ ಸದಸ್ಯರುಗಳಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…