ಬಿಸಿ ಬಿಸಿ ಸುದ್ದಿ

ನಗರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳಿಂದ ೨೦೦ ಕೋಟಿ ರೂ.ಗಳ ಪ್ಯಾಕೇಜ್‌ಗೆ ಸ್ಮಾರ್ಟ್ ಸಿಟಿ ಕ್ಲಬ್ ಆಗ್ರಹ

ಕಲಬುರಗಿ:ನಗರದ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈ ಹಿಂದೆ ನಗರಕ್ಕೆ ಪ್ರತಿ ವರ್ಷ ಘೋಷಿಸುತ್ತಿದ್ದಂತೆಯೇ ೨೦೦ ಕೋಟಿ ರೂ.ಗಳ ಪ್ಯಾಕೇಜ್ ಈ ಬಾರಿಯೂ ಘೋಷಿಸಬೇಕೆಂದು ಆಗ್ರಹಿಸಿ ಸರ್ವಾನುಮತದ ನಿರ್ಣಯವನ್ನು ಕಲಬುರ್ಗಿ ಸ್ಮಾರ್ಟ್ ಸಿಟಿ ಕ್ಲಬ್‌ನ ವಿಶೇಷ ಸಭೆಯಲ್ಲಿ ಭಾನುವಾರ ಕೈಗೊಳ್ಳಲಾಯಿತು.

ಕ್ಲಬ್‌ನ ಶಕ್ತಿನಗರದ ಗೃಹ ಕಚೇರಿಯಲ್ಲಿ ಕ್ಲಬ್ ಅಧ್ಯಕ್ಷ ಪ್ರಭುಲಿಂಗ್ ಎಸ್. ಮಹಾಗಾಂವಕರ್ ಅವರ ಅಧ್ಯಕ್ಷತೆಯಲ್ಲಿ ಜರುಗಿದ ವಿಶೇಷ ಸಭೆಯಲ್ಲಿ ನಗರದಲ್ಲಿ ರಸ್ತೆ, ಒಳಚರಂಡಿ, ಸಾರ್ವಜನಿಕ ಉದ್ಯಾನವನ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳ ಕೊರತೆಯುಂಟಾಗಿದ್ದು, ಆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ನಗರದ ಅಭಿವೃದ್ಧಿಗೆ ೨೦೦ ಕೋಟಿ ರೂ.ಗಳ ಪ್ಯಾಕೆಜ್ ಮುಂದುವರೆಸಬೇಕು ಎಂದು ಒತ್ತಾಯಿಸಲಾಯಿತು.

ಮಹಾನಗರ ಪಾಲಿಕೆಯ ಆಯುಕ್ತ ರಾಹುಲ್ ಪಾಂಡ್ವೆ ಅವರು ಸಮಸ್ಯಾತ್ಮಕ ಬಡಾವಣೆಗಳಿಗೆ ಅಖಿಲ ಭಾರತ ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಂತರ ಭೇಟಿ ನೀಡುವುದಾಗಿ ನೀಡಿದ ಭರವಸೆ ಹುಸಿಯಾದ ಕುರಿತು ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು. ಈ ಹಿಂದೆ ಪಾಲಿಕೆಯ ಅಭಿಯಂತರೆ ಸುಷ್ಮಾ ಸಾಗರ್ ಅವರು ಶಕ್ತಿನಗರ್ ಸೇರಿದಂತೆ ವಿವಿಧೆಡೆ ಉದ್ಯಾನವನದ ಸ್ವಚ್ಛತೆ, ಗಿಡಗಂಟಿಗಳನ್ನು ತೆರವುಗೊಳಿಸುವುದು, ತ್ಯಾಜ್ಯ ವಿಲೇವಾರಿ ಸೇರಿದಂತೆ ಅನೇಕ ರೀತಿಯ ಕೆಲಸಗಳನ್ನು ಮಾಡಿದ್ದರಿಂದ ಮುಂದೊಂದು ದಿನ ಮಾದರಿ ಬಡಾವಣೆ ಆಗುವ ರೀತಿಯಲ್ಲಿ ಕಾರ್ಯಗಳು ಆಗುತ್ತಿದ್ದವು. ಈಗ ಚೇತನ್ ಎಂಬ ಪರಿಸರ ಅಭಿಯಂತರ ಬಂದಿದ್ದು, ಅವರು ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದರ ಕುರಿತು ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು.

ಸಾರ್ವಜನಿಕ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವ ದಿಸೆಯಲ್ಲಿ ಪ್ರಸ್ತುತ ಪಾಲಿಕೆಯ ಬಜೆಟ್‌ನಲ್ಲಿ ತಲಾ ಉದ್ಯಾನವನಕ್ಕೆ ಐದು ಲಕ್ಷ ರೂ.ಗಳನ್ನು ಮೀಸಲಿಡುವ ಕುರಿತು ಮನವಿ ಮಾಡಲು ಸಭೆ ತೀರ್ಮಾನಿಸಿತು.
ಶಕ್ತಿನಗರದಿಂದ ದತ್ತನಗಕ್ಕೆ ಹೋಗುವ ರೈಲ್ವೆ ಚಿಕ್ಕ ಒಳಸೇತುವೆಯೊಳಗಿನ ರಸ್ತೆಯ ದುರಸ್ತಿಯನ್ನು ಕೇವಲ ಕಾಟಾಚಾರಕ್ಕಾಗಿ ಕೈಗೊಳ್ಳಲಾಗಿದೆ. ಡಾಂಬರು ಇಲ್ಲವೇ ಸಿಮೆಂಟ್ ರಸ್ತೆಯನ್ನು ನಿರ್ಮಿಸುವ ಬೇಡಿಕೆಯನ್ನು ಇಟ್ಟರೆ ಪಾಲಿಕೆಯವರು ಕ್ರಮ ಕೈಗೊಳ್ಳುತ್ತಿಲ್ಲ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಸಲ್ಲಿಸಲು ಸಭೆ ನಿರ್ಧರಿಸಿತು.

ಇನ್ನು ಶಕ್ತಿನಗರ್, ಘಾಟಗೆ ಲೇಔಟ್, ಸಿಐಬಿ ಕಾಲೋನಿ, ಗೋದುತಾಯಿ ನಗರ ಸೇರಿದಂತೆ ಒಳಬಡಾವಣೆಗಳಿಗೆ ನಗರ ಸಾರಿಗೆ ಬಸ್‌ಗಳನ್ನು ಓಡಿಸಲು ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿರುವ ಕುರಿತು ಚರ್ಚಿಸಿದ ಸಭೆಯು ಪೂಜ್ಯ ದೊಡ್ಡಪ್ಪ ಅಪ್ಪಾ ತಾಂತ್ರಿಕ ಕಾಲೇಜು ಪ್ರದೇಶದಲ್ಲಿ ಮಹಿಳಾ ಪದವಿ ಕಾಲೇಜು, ಕಾನೂನು ಮಹಾವಿದ್ಯಾಲಯ ಸೇರಿದಂತೆ ಆರೇಳು ಪ್ರತಿಷ್ಠಿತ ಕಾಲೇಜುಗಳಿದ್ದು, ದಿನನಿತ್ಯ ಸುಮಾರು ೨೦,೦೦೦ ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಆದಾಗ್ಯೂ, ಆ ಪ್ರದೇಶಕ್ಕೆ ನಗರ ಸಾರಿಗೆ ವ್ಯವಸ್ಥೆ ಇಲ್ಲ. ಆ ಪ್ರದೇಶದಲ್ಲಿ ನಗರ ಸಾರಿಗೆ ಬಸ್ ಸೌಲಭ್ಯ ಕಲ್ಪಿಸಲು ಒತ್ತಾಯಿಸಲಾಯಿತು.

ಬೇಸಿಗೆ ಸಮೀಪಿಸುತ್ತಿದ್ದು, ಗಿಡ, ಮರಗಳಿಗೆ ನೀರು ಹಾಕುವ ಕುರಿತು ಮತ್ತೆ ಸಂಬಂಧಿಸಿದ ಇಲಾಖೆಗೆ ಒತ್ತಡ ತರುವುದು ಹಾಗೂ ನಲ್ಲಿ ನೀರು ಕಲುಷಿತವಾಗುತ್ತಿದ್ದು, ಶುದ್ಧ ಕುಡಿಯುವ ನೀರು ಪೂರೈಸುವ ಸಂಬಂಧ ದೂರು ಸಲ್ಲಿಸಲು ಸಹ ಸಭೆ ನಿರ್ಧರಿಸಿತು.

ಕ್ಲಬ್‌ನ್ನು ನಗರದ ೫೫ ವಾರ್ಡ್‌ಗಳಿಗೂ ವಿಸ್ತರಿಸುವ ಸಂಬಂಧ ಪ್ರತಿ ಬಡಾವಣೆಗೆ ಓರ್ವ ಸಂಘಟನಾ ಸದಸ್ಯರನ್ನು ನೇಮಕ ಮಾಡುವ ಕುರಿತು ಮುಂದಿನ ಸಭೆಯಲ್ಲಿ ಅಧಿಕೃತವಾಗಿ ನಿರ್ಣಯ ಕೈಗೊಳ್ಳಲು ಸಭೆ ತೀರ್ಮಾನಿಸಿತು.
ನಗರದ ಕೇಂದ್ರ ಬಸ್ ನಿಲ್ದಾಣದ ಹಿಂದುಗಡೆ ಇರುವ ೧೩೪ರ ಪಡಿತರ ಅಂಗಡಿಯಲ್ಲಿ ಫಲಾನುಭವಿಯೊಬ್ಬರಿಗೆ ಪಡಿತರ ವಿತರಿಸಲು ತೊಂದರೆಕೊಟ್ಟಿದ್ದರಿಂದ ಆ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ದೂರು ಹಿಂಪಡೆಯುವಂತೆ ಒತ್ತಡ ತರುತ್ತಿರುವ ಕುರಿತು ಕ್ಲಬ್ ಅಧ್ಯಕ್ಷ ಪಿ.ಎಸ್. ಮಹಾಗಾಂವಕರ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಆ ಪಡಿತರ ಅಂಗಡಿಯ ಪರವಾನಿಗೆಯನ್ನು ಕೇವಲ ಒಂದೇ ಕುಟುಂಬದವರಿಗೆ ಕೊಡುತ್ತ ಬರಲಾಗುತ್ತಿದೆ. ಅದು ಬದಲಾವಣೆ ಆಗಬೇಕು. ಯಾವುದೇ ಕಾರಣಕ್ಕೂ ದೂರು ಹಿಂಪಡೆಯದಂತೆ ಸಭೆಯಲ್ಲಿ ಹಲವರು ಒತ್ತಾಯಿಸಿದರು.

ಸಭೆಯಲ್ಲಿ ಕ್ಲಬ್ ಉಪಾಧ್ಯಕ್ಷ ಯಶವಂತರಾವ್ ಸಿಂಧೆ, ಕ್ಲಬ್ ಪ್ರಧಾನ ಕಾರ್ಯದರ್ಶಿ ಹಾಗೂ ನ್ಯಾಯವಾದಿ ರಾಜಶೇಖರ್ ಡೊಂಗರಗಾಂವ್, ಜಂಟಿ ಕಾರ್ಯದರ್ಶಿ ನ್ಯಾಯವಾದಿ ಅನಿತಾ ರೆಡ್ಡಿ, ಖಜಾಂಚಿಗಳಾದ ನ್ಯಾಯವಾದಿ ಎಂ.ಎಂ.ಎಲ್. ಅಲಂಕಾರ್, ಕಾರ್ಯನಿರ್ವಾಹಕ ಸದಸ್ಯರಾದ ಎಸ್.ಆರ್. ಚಿಗೋನ್, ಸಿ.ಎಸ್. ಬಗಲಿ, ಸಿ.ಎ. ಗಡವಾಲ್, ಕೆ.ಬಿ. ಭಂಕೂರ್, ಬಸವರಾಜ್ ಬಿರಾದಾರ್, ಕಮಲಾಕರ್ ಎಲಕಪಳ್ಳಿ, ಶಿವಪ್ಪ ದೊಡ್ಡಮನಿ, ಶಿವಶರಣಪ್ಪ, ಶ್ರೀಮತಿ ನಳಿನಿ ಮಹಾಗಾಂವಕರ್, ಪ್ರೊ. ಶರಣ್ ಪಡಶೆಟ್ಟಿ, ಪ್ರೊ. ಎಸ್.ಎಸ್. ಗಲಗಲಿ, ನಿವೃತ್ತ ಅಧಿಕಾರಿ ಜೆ.ಎಸ್. ಕಟ್ಟಿಮನಿ, ಶಿವಕುಮಾರ್ ಎಲ್. ಅಪರಂಜಿ ಮುಂತಾದವರು ಉಪಸ್ಥಿತರಿದ್ದರು.
———————————————————————————————————–

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

3 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

13 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

13 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

13 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago