ಸುರಪುರ: ನಾವು ಈ ಹಿಂದೆ ಹತ್ತು ವರ್ಷಗಳಿಂದ ಸಹಕಾರ ಸಂಘದ ಅಭೀವೃಧ್ಧಿಗಾಗಿ ಮಾಡಿದ ಸೇವೆ ಇಂದು ನಮ್ಮ ಕೈ ಹಿಡಿದಿದ್ದು,ನಮ್ಮನ್ನು ಗೆಲ್ಲಿಸಿದ ಎಲ್ಲಾ ಷೇರುದಾರ ಮತದಾರರಿಗೆ ಅಭಿನಂಧನೆ ಸಲ್ಲಿಸುವುದಾಗಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಮೂರನೇ ಬಾರಿ ಆಯ್ಕೆಯಾಗಿರುವ ಸುರೇಶ ಸಜ್ಜನ್ ಮಾತನಾಡಿದರು.
ನಗರದ ಬಸವೇಶ್ವರ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಆಕಷ್ಮಿಕವಾಗಿ ಚುನಾವಣೆ ನಡೆಯಿತು,ಅದು ಅಂದಿಗೆ ಮುಗಿದಿರುವುದರಿಂದ ಎಲ್ಲರು ನಮ್ಮ ಸಮಾಜದ ಬಂಧುಗಳೆ ಇರುವುದರಿಂದ ಯಾರ ಬಗ್ಗೆಯೂ ಅಸಮಧಾನ ಪಟ್ಟುಕೊಳ್ಳದೆ ಸಂಘದ ಅಭೀವೃಧ್ಧಿಗೆ ಗಮನಹರಿಸುವುದಾಗಿ ತಿಳಿಸಿದರು.ಸಂಘದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು,ಭ್ರಷ್ಟಾಚಾರ ಎಂಬುದು ಸತ್ಯಕ್ಕೆ ದೂರವಾದುದಾಗಿದೆ.ಭ್ರಷ್ಟಾಚಾರದ ಬಗ್ಗೆ ಯಾವುದೇ ದೂರುಗಳಿದ್ದರೆ ಸಾಮಾನ್ಯ ಸಭೆಯಲ್ಲಿ ಪ್ರಶ್ನಿಸಿದರೆ ಸ್ಪಷ್ಟನೆ ನೀಡುವುದಾಗಿ ತಿಳಿಸಿದರು.
ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ೨೫ ಶಾಖೆಗಳನ್ನು ತೆರೆಯುವ ಗುರಿ ಹೊಂದಲಾಗಿದೆ.ಅಲ್ಲದೆ ಮುಖ್ಯವಾಗಿ ನಮ್ಮ ತಾಲೂಕಿನ ಇತರೆ ಭಾಗಗಳಲ್ಲಿ ಹೆಚ್ಚಿನ ಲಾಭ ಬರುವಂತ ಸ್ಥಳಗಳಲ್ಲಿ ಇನ್ನೂ ಹೆಚ್ಚಿನ ಶಾಖೆಗಳನ್ನು ಆರಂಭಿಸಲಾಗುವುದು ಎಂದರು.
ಸಂಘದಲ್ಲಿ ಹಣ,ಭದ್ರತೆ ಮತ್ತು ಠೇವಣಿದಾರರ ಕೊರತೆಯಿಲ್ಲ ಆದ್ದರಿಂದ ಮುಂಬರುವ ದಿನಗಳಲ್ಲಿ ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಬ್ಯಾಂಕಿನ ಅಭೀವೃದ್ದಿ ಮತ್ತು ಷೇರುದಾರರ ಸಂಖ್ಯೆ ಹೆಚ್ಚಿಸಲು ಮುಂದಾಗುವೆವು ಎಂದರು.
ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಮನೋಹರ ಜಾಲಹಳ್ಳಿ ಮಾತನಾಡಿ,ಚುನಾವಣೆ ನಡೆದಿದ್ದು ಆ ಕ್ಷಣದ ಪ್ರಕ್ರೀಯೆ ಆದರೆ ಇಡೀ ವೀರಶೈವ ಲಿಂಗಾಯತ ಸಮಾಜದ ಎಲ್ಲರೂ ಸಹಕಾರ ಸಂಘದ ಅಭಿವೃಧ್ಧಿಗೆ ಸಹಕರಿಸುತ್ತಾರೆ.ಎಲ್ಲರ ಸಹಕಾರದಲ್ಲಿ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಂಘವನ್ನು ಬೆಳೆಸಲು ಪ್ರಯತ್ನ ಮಾಡುವುದಾಗಿ ತಿಳಿಸಿದರು.
ನಿರ್ದೇಶಕ ಸೂಗುರೇಶ ವಾರದ ಮಾತನಾಡಿ,ಈಗಾಗಲೇ ಕೆಂಭಾವಿ ಕಕ್ಕೇರಾ ಹುಣಸಗಿ ಕೊಡೇಕಲ್ ಶಾಖೆಗಳಿಂದ ಲಾಭ ಬರುತ್ತಿದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ.ಈ ಎಲ್ಲಾ ಶಾಖೆಗಳಲ್ಲಿ ಇನ್ನೂ ಹೆಚ್ಚಿನ ಲಾಭ ಬರುವಂತೆ ಏನೆಲ್ಲ ಮಾಡಬಹುದು ಎನ್ನುವ ಬಗ್ಗೆ ಚರ್ಚಿಸಿ ಇನ್ನೂ ಬೇರೆ ಬೇರೆ ಯೋಜನೆಗಳನ್ನು ಜಾರಿಗೆ ತರಲು ಎಲ್ಲರ ಸಲಹೆ ಸಹಕಾರ ಪಡೆಯುವ ಮೂಲಕ ಮಾದರಿ ಸಹಕಾರ ಸಂಘವನ್ನು ರೂಪಿಸಲು ಸಹಕಾರ ನೀಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾಗಿ ನೇಮಕಗೊಂಡಿರುವ ಜಯಲಲಿತಾ ಪಾಟೀಲ,ಜಗದೀಶ ಪಾಟೀಲ ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…