ಬಿಸಿ ಬಿಸಿ ಸುದ್ದಿ

ಅನ್ನಕ್ಕಿಂತ ಅಧ್ಯಾತ್ಮಿಕ ಕೊರತೆಯಿಂದ ಬದುಕು ಅಶಾಂತಿಯುತವಾಗಿದೆ: ಡಾ. ನಾಗೇಂದ್ರ ಮಸೂತಿ

ಕಲಬುರಗಿ: ನಗರದ ಭವಾನಿ ನಗರದಲ್ಲಿರುವ ಬಬಲಾದ ಶ್ರೀಮಠದಲ್ಲಿ ನಡೆದ ಶಿವಾನುಭವಗೋಷ್ಠಿಯ ೯೦ನೇ ಮಾಲಿಕೆಯಲ್ಲಿ ಮಾತನಾಡುತ್ತಾ ಇಂದು ಸಂತ, ಶರಣರ ವಚನಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರೊಂದಿಗೆ ಒಳ್ಳೆಯ ಸಮಾಜ ನಿರ್ಮಿಸೋಣ ಶರಣರು ಆಚಾರ ವಿಚಾರದಿಂದ ಪ್ರಚಾರ ಪಡೆದು ಮಹಾಮಾನವರಾಗಿದ್ದಾರೆ. ಇಂದಿನ ಮಕ್ಕಳಿಗೆ ಅವರನ್ನೆ ಆದರ್ಶ ವ್ಯಕ್ತಿಗಳೆಂದು ಹೇಳುವ ಮೂಲಕ ಉತ್ತಮ ಭವಿಷ್ಯ ರೂಪಿಸಬೇಕು. ಶರಣರು ಕಾಯಕವೇ ಕೈಲಾಸವೆಂದು ದುಡಿದು ಕಾಯಕದಲ್ಲಿ ದೇವರನ್ನು ಕಂಡವರು ಅಂತಹ ಮಹಾಪುರುಷರನ್ನು ನೆನೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ನುಡಿದರು. ಕಾರ್ಯಕ್ರಮದ ಸಾನಿಧ್ಯವನ್ನು ಅವರಾದ ಶ್ರೀಗಳಾದ ಷ.ಬ್ರ. ಮರುಳಸಿದ್ಧ ಶಿವಾಚಾರ್ಯರು ವಹಿಸಿದ್ದರು.

ಇದೇ ಸಂದರ್ಭದಲ್ಲಿ ಗಣೇಶ ಕೊ. ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರಾದ ಶಾಂತಕುಮಾರ ಬಿ. ಬಿಲಗುಂದಿ, ಉಪಾಧ್ಯಕ್ಷರಾದ ಶ್ರೀಮತಿ ಸೋನಾಬಾಯಿ ಜೆ. ಕೋಣಿನ, ನಿರ್ದೇಶಕರಾದ ಜಗನ್ನಾಥ ಡಿ. ಅಣಕಲ, ಶ್ರೀಮತಿ ಬಿಂದು ಕೆ. ಶಹಾ, ವಿನಯಕುಮಾರ ಶಹಾ, ಶಿವರಾಜ ಬಿ. ಖುಬಾ, ರವೀಂದ್ರಕುಮಾರ ಸಿ. ಐನಾಪುರ, ರವಿಕುಮಾರ ಸರಸಂಬಿ ಇವರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಲಾಯಿತು. ಸಂಗಮೇಶ ಹೂಗಾರ ಪ್ರಾರ್ಥಿಸಿದರು. ನ್ಯಾಯವಾದಿ ಹಣಮಂತರಾಯ ಎಸ್. ಅಟ್ಟೂರ ಸ್ವಾಗತಿಸಿದರು, ಶಿಕ್ಷಕರಾದ ದೇವಯ್ಯ ಗುತ್ತೇದಾರ ನಿರೂಸಿದರು, ಉಪನ್ಯಾಸಕ ಪ್ರಕಾಶ ರೋಳೆ ವಂದಿಸಿದರು.

ಕಾರ್ಯಕ್ರಮದಲ್ಲಿ ಜಗನ್ನಾಥ ಸಜ್ಜನಶೆಟ್ಟಿ, ಮಹಾಂತೇಶ ಪಾಟೀಲ, ಗುರುರಾಜ ಹೂಗಾರ, ಶಿವಕುಮಾರ ಗಣಜಲಖೇಡ, ಅಮರಾವತಿ ಹೂಗಾರ, ಕವಿತಾ ದೇಗಾಂವ, ಗುರುಲಿಂಗಪ್ಪ ಕಲಶೆಟ್ಟಿ, ಶಾಂತಕುಮಾರ ಧುತ್ತರಗಿ, ರಾಮಚಂದ್ರ ಪಾಂಚಾಳ, ವೀರಣ್ಣಾ ಸ್ವಾಧಿ, ಶಿವಲಿಂಗಪ್ಪಾ ಕನ್ನಡಗಿ ಸೇರಿದಂತೆ ಶ್ರೀ ಮಠದ ಅನೇಕ ಭಕ್ತರೂ ಭಾಗವಹಿಸಿದ್ದರು.

emedialine

Recent Posts

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

1 hour ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

1 hour ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

1 hour ago

ಸ್ವಾಭಿಮಾನದ ಬದುಕಿಗೆ ಸಂಗೀತ ಪೂರಕ

ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…

1 hour ago

ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಬೇಡಿ

ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…

1 hour ago

ಸೇಡಂ: `ಅಮ್ಮ ಪ್ರಶಸ್ತಿ’ ಪ್ರದಾನ ಸಮಾರಂಭ ನಾಳೆ

ಸೇಡಂ (ಕಲಬುರಗಿ);  ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…

2 hours ago