ಬಿಸಿ ಬಿಸಿ ಸುದ್ದಿ

ಸಿಬ್ಬಂದಿ ವರ್ಗದವರಿಲ್ಲದ ಗ್ರಾಮ ಪಂಚಾಯತ್

ಶಹಾಪುರ: ತಾಲೂಕಿನ ಹೊತಪೇಟ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳಿಲ್ಲದೆ ಪಂಚಾಯತ್ ಕಛೇರಿಯು ಬೀಗ ಹಾಕುವ ಕಾರಣ ಕಚೇರಿಗೆ ಬರುವ ಜನಸಾಮಾನ್ಯರ ಗೋಳು ಕೇಳುವವರು ಯಾರು ಇಲ್ಲದಂತಾಗಿದೆ.

ಗ್ರಾಮ ಪಂಚಾಯತ್ ಕಚೇರಿಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು.ಅಧ್ಯಕ್ಷರು, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ಮತ್ತು ಪಂಚಾಯತ್ ಜನ ಪ್ರತಿನಿಧಿಗಳು( ಗ್ರಾ.ಪ. ಸದಸ್ಯರು) ಬರುವುದೇ ಅಪರೂಪವಾಗಿದೆ. ಇವತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ “ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದಡಿ” ” ಸ್ವ ಸಹಾಯ ಸಂಘಗಳ ಒಗ್ಗೂಡಿಸುವಿಕೆಯ ಕುರಿತು ಒಂದು ದಿನದ ಮುಖಾ ಮುಖಿ ಕಾರ್ಯಕ್ರಮ ನಡೆಸಲಾಗಿತ್ತು. ಆದರೆ ಪಂಚಾಯತಿಯ ಯಾವೊಬ್ಬ ಅಧಿಕಾರಿಗಳು ಇರಲಿಲ್ಲ. ಅಧಿಕಾರಿಗಳಿಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಇದ್ದವು.

ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ವತಿಯಿಂದ ಕಾರ್ಯಕ್ರಮದ ಕುರಿತು ಈಗಾಗಲೇ ಪತ್ರ ಬರೆದಿದ್ದಾರೆ ಆದರೆ ಕಾರ್ಯಕ್ರಮಕ್ಕೆ ಯಾವ ಅಧಿಕಾರಿಯು ಬರದ ಕಾರಣ ಸ್ವ ಸಹಾಯ ಸಂಘದ ಸದಸ್ಯರು ಮತ್ತು MCRP ಸಿಬ್ಬಂದಿಗಳು ಮರಳಿ ಇಂತಿರುಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.ನಂತರ ಗ್ರಾಮಸ್ಥರ ನೆರವಿನಿಂದ ಕಚೇರಿಯ ಬೀಗ ತೆಗೆದು ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಸಲಾಯಿತು.

ಪಂಚಾಯತ್ ಕಚೇರಿಗೆ ಯಾರು ಬರುವುದಿಲ್ಲ ನಮ್ಮ ಕೆಲಸ ಕಾರ್ಯಗಳಿದ್ದರೆ ಅವರಿಗೆ ಫೋನ್ ಮಾಡ್ಬೇಕು, ಅವರು ಸಿಕ್ಕರೆ ಕೆಲಸ ಆಗುತ್ತವೆ ಇಲ್ಲಾಂದ್ರೆ ಇಲ್ಲ. ಸರ್ಕಾರದ ಯೋಜನೆಗಳನ್ನು ಜಾರಿಗೆ ಬರುತ್ತವೆ ಆದರೆ ಅವುಗಳು ದಾಖಲೆಯಲ್ಲಿ ಮಾತ್ರ ಇರುತ್ತವೆ. ಹೀಗಾದ್ರೆ ಅಭಿವೃದ್ಫಿ ಹೇಗೆ ಎಂದು ಗ್ರಾಮಸ್ಥರು ಅಗ್ರಹಿಸುತ್ತಿದ್ದರೆ.

ಪಿಡಿಒ ಯಾರು ಅಂತಾನೆ ಗೊತ್ತಿಲ್ಲ, ಅವರು ಯಾವಾಗ ಬರ್ತಾರೆ ಯಾವಾಗ ಹೋಗ್ತಾರೆ ಅಂತ ಯಾರಿಗೂ ಗೊತ್ತಿಲ್ಲ, ಯಾವ್ದಾರು ಜಯಂತಿ ಆಚರಣೆಗಳು ಇದ್ದಾಗ ಬರ್ತಾರೆ ಅಂತ ಕೆಲವರು ಹೇಳ್ತಾರೆ ಆದ್ರೆ ಅವ್ರಿಗೆ ಇನ್ನು ನೋಡಿಲ್ಲ. ನಮ್ಮ ಪಂಚಾಯತ್ ಜನರ ಸಮಸ್ಯೆಗಳಿಗೆ ಪರಿಹರಿಸುವವರು ಯಾರು , ದಯವಿಟ್ಟು ಸಂಬಂದ ಪಟ್ಟ ಅದಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ತ ವಸಂತ್ ಹೊಸಮನಿಯವರು ಹೇಳಿದರು.

emedialine

Recent Posts

ಬೆಂಗಳೂರು: ಸೇವಾದಳ ಯಂಗ್ ಬ್ರಿಗೇಡ್‌ನಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…

8 hours ago

ಆತ್ಮವಿಶ್ವಾಸವಿದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು : ಶಂಕರಗೌಡ

ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…

19 hours ago

ಬೌದ್ಧಿಕ ವಿಕಾಸದಿಂದ ತನ್ನತನದ ಶೋಧ

ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…

19 hours ago

ನಿಧನ ವಾರ್ತೆ; ಆನಂದಪ್ಪ ಉಮ್ಮನಗೋಳ್

ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…

21 hours ago

ಸಂಘಸಂಸ್ಥೆಗಳು ಸಮಾಜಕ್ಕೆ ನೀಡಿದ ಕೋಡುಗೆ ಅಪಾರ ಪಾಳಾಶ್ರೀ

ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…

21 hours ago

ಹೊಸ ಹೊಸ ಉದ್ಯೋಗ ಸೃಷ್ಟಿಸಲು HKE ಸಂಸ್ಥೆ ಕಾರ್ಯ ಶ್ಲಾಘನೀಯ

ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…

21 hours ago