ಕಲಬುರಗಿ: ನಗರದ ಖಾಜಾ ಶಿಕ್ಷಣ ಸಂಸ್ಥೆಯ, ಬಿಬಿ ರಝಾ ಡಿಗ್ರಿ ಮಹಿಳಾ ಕಾಲೇಜು ಮತ್ತು ಮೌನಯೋಗಿ ಫೌಂಡೆಶನ್‌ನ ಸಹಯೋಗದಲ್ಲಿ ನಮ್ಮೊಳಗಿನ ಹೀರೋ-ಯುವ ಮಹಿಳಾ ನಾಯಕತ್ವ ತರಬೇತಿ ಒಂದು ದಿನದ ಕಾಯಾಗಾರವನ್ನು ಮಾರ್ಚ್ ೨ ರಂದು ಬೆಳಿಗ್ಗೆ 10ಕ್ಕೆ ಆಯೋಜನೆ ಮಾಡಲಾಗಿದೆ.
ಕಾರ್ಯಾಗಾರವು ವಿದ್ಯಾರ್ಥಿನಿಯರನ್ನು ಮುಂದಿನ ಪೀಳಿಗೆಯ ಉತ್ತಮ ಸಮರ್ಥ ನಾಯಕಿಯರನ್ನಾಗಿ ತಯಾರಿಸಲು , ಜೊತೆಗೆ ದೇಶಕ್ಕೆ ಕೊಡುಗೆ ನೀಡಬಲ್ಲ ವ್ಯಕ್ತಿತ್ವ ರೂಪಿಸಿಕೊಂಡು,ಆಧುನಿಕ ಕಾಲಕ್ಕೆ ತಕ್ಕಂತೆ ನಾಯಕತ್ವ ಗುಣ, ತಮ್ಮಲ್ಲಿರುವ ಅದಮ್ಯ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳುವದು ಹೇಗೆ ಎನ್ನುವುದನ್ನು ಕ್ರಿಯಾತ್ಮಕ ಚಟುವಟಿಕೆ, ಸಂವಾದ ಮತ್ತು ಆನಂದದ ಕಲಿಕೆ ಈ ಶಿಬಿರದಲ್ಲಿರಲಿದೆ.
ಕಾರ್ಯಕ್ರಮಕ್ಕೆ ಉದ್ಘಾಟಕರಾಗಿ ಮತ್ತು ಮುಖ್ಯ ಅತಿಥಿಗಳಾಗಿ ಯುವನಾಯಕ,ಎಸ್ ಬಿ ಪಾಟೀಲ್ ಗೃಪ್ ಆಫ್ ಇನ್ಸ್‌ಟಿಟ್ಯುಷನ್ಸ್‌ನ ನಿರ್ದೇಶಕರಾದ ಚಂದು ಪಾಟೀಲ್ ಆಗಮಿಸುವರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಝೀಬಾ ಪರವೀನ್ ಅವರು ವಹಿಸುವರು.
ಸಂಪನ್ಮೂಲ ವ್ಯಕ್ತಿ ಬೆಂಗಳೂರಿನ ಟ್ರಾನ್ಸ್‌ಫಾರ್ಮೊ ಇನ್‌ಕಾರ್ಪ್ ತರಬೇತಿ ಸಂಸ್ಥೆಯ ಮನೋತಜ್ಞ, ಹ್ಯಾಪಿನೆಸ್ ಎಂಜಿನಿಯರ್ ತರಬೇತುದಾರ ಭುಜಬಲಿ ಬೋಗಾರ ಅವರು ತರಬೇತಿ ಕಾರ್ಯಾಗಾರವನ್ನು ನಡೆಸಿಕೊಡುವರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…