ಬಿಸಿ ಬಿಸಿ ಸುದ್ದಿ

ಗೋದುತಾಯಿ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಶಿಬಿರ : ಸ್ವಯಂ ಸಿದ್ಧರಾಗಿ

ಕಲಬುರಗಿ : ಪ್ರತಿಯೊಂದು ಕೆಲಸಗಳನ್ನು ಸ್ವಯಂ ಮಾಡಿಕೊಳ್ಳುವುದು ಕಲಿಯಬೇಕು ಬೇರೆಯವರ ಮೇಲೆ ಅವಲಂಬನೆ ಆಗಬಾರದೆಂದು ಶರಣಬಸವೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಬಾಬುರಾವ ಚವ್ಹಾಣ ಹೇಳಿದರು.

ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಭಾನುವಾರ ಎನ್‌ಎಸ್‌ಎಸ್ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ವಿದ್ಯಾರ್ಥಿಗಳು ಪರಿಶ್ರಮ ಪಟ್ಟರೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಎನ್‌ಎಸ್‌ಎಸ್ ದಿಂದ ಶಿಸ್ತು, ಸಮಯಪ್ರಜ್ಞೆ, ಪ್ರತಿಭೆ ಹೊರಹಾಕುವುದು, ಮಾತನಾಡುವ ಕಲೆ, ವ್ಯಕ್ತಿತ್ವ ವಿಕಾಸ ಹೀಗೆ ಅನೇಕ ವಿಷಯಗಳು ನಿಮಗೆ ಕಲಿಯಲಿಕ್ಕೆ ಸಿಗುತ್ತವೆ. ಇಂದಿನ ಮಹಿಳೆಯರು ಯಾವುದರಲ್ಲಿ ಕಡಿಮೆ ಇಲ್ಲ. ಎಲ್ಲವನ್ನು ಸಾಧಿಸುತ್ತಿದ್ದಾಳೆ. ಆದರೆ ದೈಹಿಕವಾಗಿ ಇನ್ನೂ ಸದೃಢವಾಗುತ್ತಿಲ್ಲ. ಯೋಗ ಮಾಡಬೇಕು ಉತ್ತಮ ಆಹಾರ ಸೇವಿಸಬೇಕು. ಹಿರಿಯರು ಒಳ್ಳೆಯದನ್ನು ತಿಂದು ಪರಿಶ್ರಮದಿಂದ ಕೆಲಸ ಮಾಡಿ ಗಟ್ಟಿಮುಟ್ಟಾಗಿದ್ದರು. ಅದಕ್ಕಾಗಿ ನೀವು ಉತ್ತಮ ಆಹಾರಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂತಹ ಶಿಬಿರಗಳು ನಿಮಗೆ ಅನೇಕ ವಿಷಯಗಳನ್ನು ತಿಳಿಸಿಕೊಡುವುದಲ್ಲದೆ ಸಮಾಜದಲ್ಲಿ ಆದರ್ಶ ತತ್ವಗಳನ್ನು ತಿಳಿಸುತ್ತವೆ. ಹಿರಿಯರನ್ನು ಗೌರವದಿಂದ ಕಾಣಬೇಕು, ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು ಇದರ ಲಾಭವನ್ನು ಪಡೆಯಬೇಕು ಎಂದು ಹೇಳಿದರು. ಈ ಶಿಬಿರದ ಉದ್ದೇಶವೆನೆಂದರೆ ’ನನಗಾಗಿ ಅಲ್ಲ ನಿನಗಾಗಿ’ ಎಂದು ಹೇಳುತ್ತದೆ. ಎಂತಹದೆ ಕಷ್ಟದ ಸಮಯ ಬಂದರೂ ಧೃತಿಗೆಡದೆ ಅದನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನೀಲಾಂಬಿಕಾ ಶೇರಿಕಾರ ಮಾತನಾಡಿ, ಒಂದು ವಾರ ನಡೆಯುವ ಈ ಶಿಬಿರದಲ್ಲಿ ಅನೇಕ ವಿದ್ವಾಂಸರು ಇದರಲ್ಲಿ ಭಾಗವಹಿಸಿ ಮಾತನಾಡುವವರಿದ್ದಾರೆ ಅದರ ಲಾಭವನ್ನು ವಿದ್ಯಾರ್ಥಿನಿಯರು ಪಡೆಯಬೇಕು. ಇಂತಹ ಶಿಬಿರಗಳು ಸ್ವಯಂಸೇವಕರನ್ನಾಗಿ ಮಾಡುತ್ತವೆ. ನಿಮ್ಮ ಬದುಕನ್ನು ರೂಪಿಸುತ್ತವೆ. ಹೊಸ ಹೊಸ ವಿಚಾರಗಳು ತಿಳಿಸಿಕೊಡುತ್ತದೆ. ಅದು ಬಿಟ್ಟು ಮೊಬೈಲ್ ಬಳಕೆಯಲ್ಲಿಯೇ ಹೆಚ್ಚು ಸಮಯವನ್ನು ವ್ಯರ್ಥ ಮಾಡಬೇಡಿ ಅದರಿಂದ ಲಾಭಕ್ಕಿಂಗ ನಷ್ಟವೇ ಹೆಚ್ಚು ಎಂದು ಹೇಳಿದರು. ಮಹಾವಿದ್ಯಾಲಯದ ಎನ್‌ಎಸ್‌ಎಸ್ ಕಾರ್ಯಕ್ರಮದ ಅಧಿಕಾರಿಗಳಾದ ಶ್ರೀಮತಿ ಜಾನಕಿ ಹೊಸೂರ್ ಮತ್ತು ಶ್ರೀಮತಿ ಪ್ರಭಾವತಿ ಎಚ್. ವೇದಿಕೆಯಲ್ಲಿದ್ದರು.

ಕು.ಅಪೂರ್ವ ಸ್ವಾಗತಿಸಿದರು, ಕು. ಪೂಜಾ ಡೊಮನಾಳ ನಿರೂಪಿಸಿದರು. ಕು. ಪ್ರಿಯಾಂಕಾ ಗಾಜರೆ ವಂದಿಸಿದರು.
ಕಾರ್ಯಕ್ರಮದಲ್ಲಿ ಡಾ.ಸಿದ್ದಮ್ಮ ಗುಡೇದ, ಡಾ.ಇಂದಿರಾ ಶೇಟಕಾರ, ಶ್ರೀಮತಿ ಸಾವಿತ್ರಿ ಜಂಬಲದಿನ್ನಿ, ಡಾ.ಎನ್.ಎಸ್.ಹೂಗಾರ, ಡಾ.ಸೀಮಾ ಪಾಟೀಲ, ರೇವಯ್ಯ ವಸ್ತ್ರದಮಠ, ಕೃಪಾಸಾಗರ ಗೊಬ್ಬುರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಸೋಮವಾರ ಎನ್‌ಎಸ್‌ಎಸ್ ಶಿಬಿರದಲ್ಲಿ ಈಶ ಫೌಂಡೇಶನ ಪ್ರಮೋದ ಮತ್ತು ಶ್ರೀಮತಿ ಅನಿ ಯವರು ಯೋಗ ಹೇಳಿದರು. ಡಾ. ಶಾಂತಲಾ ನಿಷ್ಠಿ, ಡಾ. ಇಂದಿರಾ ಶೇಟಕಾರ ಎನ್‌ಎಸ್‌ಎಸ್ ಅಧಿಕಾರಿಗಳಾದ ಶ್ರೀಮತಿ ಜಾನಕಿ ಹೊಸೂರ್ ಮತ್ತು ಶ್ರೀಮತಿ ಪ್ರಭಾವತಿ ಎಚ್. ಮತ್ತು ವಿದ್ಯಾರ್ಥಿನಿಯರು ಇದ್ದರು.
emedialine

Recent Posts

ಕಲಬುರಗಿ ಕೆಬಿಎನ್ ಆಸ್ಪತ್ರೆಯಲ್ಲಿ ವಿಶೇಷ ಉಪನ್ಯಾಸ

ಕಲಬುರಗಿ : ಸ್ಥಳೀಯ ಕೆಬಿಎನ್ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ವಿಭಾಗದಿಂದ 'ಸ್ತ್ರೀರೋಗ ಶಾಸ್ತ್ರದ ಆಂಕೊಲಾಜಿಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆಯ' ಪಾತ್ರ ಎಂಬ…

1 hour ago

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ವೈದ್ಯರ ಸಲಹೆ ಅವಶ್ಯಕ: ಡಾ.ಪಿ.ಎಸ್.ಶಂಕರ್

ಕಲಬುರಗಿ:  ಸಮಾಜದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಜೀವನ ಸಾಗಿಸಲು ವೈದ್ಯರ ಸಲಹೆ ಮತ್ತು ಉಪಚಾರ ಪಡೆದುಕೊಳ್ಳುವುದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯಸಂಶೋಧಕ…

1 hour ago

ವಿಕಲಚೇತನರು, ಹಿರಿಯ ನಾಗರಿಕರ ಹೆಸರಲ್ಲಿ ಅಕ್ರಮ: ಕ್ರಮಕ್ಕೆ ಆಗ್ರಹ

ಕಲಬುರಗಿ: ಜಿಲ್ಲೆಯ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿದ್ದು ಈ ಕುರಿತು ಕೂಡಲೇ ತನಿಖೆ…

1 hour ago

ಕಾಳಗಿ; ರಟಕಲ್ ಗ್ರಾಮದಲ್ಲಿ ಬಸವಾದಿ ಶರಣರ ವಚನ ಸಂಗಮಕ್ಕೆ ಅದ್ಧೂರಿ ಚಾಲನೆ

ಕಾಳಗಿ: ಬದುಕು ಹೇಗೆ ನಡೆಸಬೇಕೆಂದು ಹೇಳಿಕೊಟ್ಟ ಬಸವಾದಿ ಶರಣರ ವಚನದಲ್ಲಿ ಅಪಾರ ಶಕ್ತಿ ಇದೆ. 12 ನೇ ಶತಮಾನದಲ್ಲಿ ಮೊದಲ…

2 hours ago

ಕೃಷ್ಣ ಮಂದಿರದಲ್ಲಿ ಪಲಿಮಾರು ಮಠದ ಸಂಸ್ಥಾನ ಪೂಜೆ

ಕಲಬುರಗಿ; ಅಖಿಲ ಭಾರತ ಮಾಧ್ವ ಮಹಾಮಂಡಲ,ಶ್ರೀ ಜಯತೀರ್ಥ ವಿದ್ಯಾರ್ಥಿ ನಿಲಯ, ಶ್ರೀ ಕೃಷ್ಣ ಮಂದಿರ ಹಾಗು ಹನುಮ ಭೀಮ ಮಧ್ವರ…

3 hours ago

ಚಿಂಚೋಳಿ: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ

ಕಲಬುರಗಿ: ಚಿಂಚೋಳಿ ತಾಲೂಕಾ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ದ್ರವ ಆಮ್ಲಜನಕ ಟ್ಯಾಂಕ್ ಸ್ಪೋಟವಾಗಿದೆ ಎಂದು ಸುಳ್ಳು ಸುದ್ದಿ ಬಿತ್ತರವಾಗುತ್ತಿದ್ದು, ಇದಕ್ಕೆ…

6 hours ago