ಬಿಸಿ ಬಿಸಿ ಸುದ್ದಿ

ಗೆಳೆಯರ ಬಳಗದಿಂದ ಪಂಡಿತ ಪುಟ್ಟರಾಜ ಗವಾಯಿ ಜನ್ಮದಿನ

ಕಲಬುರಗಿ: ಗದುಗಿನ ಪಂಡಿತ ಪುಟ್ಟರಾಜ ಗವಾಯಿಗಳ ಜನ್ಮದಿನದಂಗವಾಗಿ ಇಲ್ಲಿನ ಗೆಳೆಯರ ಬಳಗದ ವತಿಯಿಂದ ನಗರದ ಅಂಧ ಬಾಲಕರ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಬುಧವಾರದಂದು ಸಂಗೀತ ಕಲಾವಿದರಾದ ಸಂಗಮೇಶ ಶಾಸ್ತ್ರಿ ಮಾಶಾಳ, ಸಿದ್ಧಲಿಂಗ ಶಾಸ್ತ್ರಿ ನರೋಣಾ, ಶಿವಾನಂದ ಗವಾಯಿ ಗೌಡಗಾಂವ, ವಿಶ್ವನಾಥ ಹೇರೂರ, ಲೋಕನಾಥ ಚಾಂಗಲೇರಾ ಹಳ್ಳಿಖೇಡ, ಬೇಬಾವತಿ ಕಳಸೆ ಅವರು ನಡೆಸಿಕೊಟ್ಟ ವಿಶೇಷ ರೀತಿಯ ಸಂಗೀತ-ವಾದ್ಯಗಳ ನೀನಾದ ಮುಗಿಲು ಮುಟ್ಟಿತು. ಬಿಸಿಲನ್ನೂ ಲೆಕ್ಕಿಸದೇ ಭಾಗವಹಿಸಿದ್ದ ಅಂಧ ವಿದ್ಯಾರ್ಥಿಗಳು, ಪ್ರೇಕ್ಷಕರು ಸಂಗೀತ ನಾದಕ್ಕೆ ಮನಸೋತು, ಕಲಾವಿದರ ರಾಗಕ್ಕೆ ತಾಳ ಹಾಕಿ, ತಲೆದೂಗಿದರು.

ಸಮಾರಂಭ ಉದ್ಘಾಟಿಸಿದ ಹಿರಿಯ ಸಾಹಿತಿ ಡಾ.ವಾಸುದೇವ ಸೇಡಂ ಮಾತನಾಡಿ, ನಾಡಿನ ಲಕ್ಷಾಂತರ ಅಂಧರ ಬಾಳಿಗೆ ಬೆಳಕಾಗಿ ಸಂಗೀತ ಶಕ್ತಿಯ ನಾದದ ಸುಧೆಯನ್ನು ನಾಡಿಗೆ ಕೊಡುಗೆಯಾಗಿ ನೀಡಿದ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳಂತೆ ಇಂದಿನ ಯುವ ಜನತೆ ಶ್ರೇಷ್ಠ ಸಾಧಕರಾಗಿ ಎಂದು ಕಿವಿ ಮಾತು ಹೇಳಿದರು. ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಇಂದು ಎಲ್ಲ ರಂಗಗಳಲ್ಲೂ ಸಾಮಾಜಿಕ ಮೌಲ್ಯಗಳು ಕುಸಿಯುತ್ತಿವೆ. ಬುದ್ಧಿ ವಿಕಾಸಗೊಂಡರೂ ಭಾವನೆಗಳು ಬೆರೆಯುತ್ತಿಲ್ಲ. ಸಮಷ್ಟಿ ಹಿತಕಾಪಾಡುವುದಕ್ಕಿಂತ ವೈಯಕ್ತಿಕ ಹಿತಾಸಕ್ತಿಗೆ ಬಲಿಯಾಗುತ್ತಿರುವುದರಿಂದ ಸಮಾಜದ ಸ್ವಾಸ್ಥ್ಯ ಕಲುಷಿತಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳು ಸೇರಿದಂತೆ ದಾರ್ಶನಿಕರ ತತ್ವಾದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಮಾಡಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ವಿಕಲಚೇತನರು ತಮ್ಮಲ್ಲಿ ಇರುವ ಸಂಕುಚಿತವಾದ ಮನೋಭಾವನೆಯನ್ನು ಬಿಟ್ಟು ವಿಶಾಲವಾದ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಪಂಡಿತ ಪುಟ್ಟರಾಜ ಗವಾಯಿಗಳು ಈ ಶತಮಾನದ ಅದ್ಭುತ ಸೃಷ್ಠಿಯಾಗಿದ್ದಾರೆ. ಅಂಥ ಶ್ರೇಷ್ಠ ಸಂತನನ್ನು ಪ್ರೇರಣೆಯನ್ನಾಗಿಸಿಕೊಳ್ಳಬೇಕು.  – ವಿಜಯಕುಮಾರ ತೇಎಗಲತಿಪ್ಪಿ, ಸಾಂಸ್ಕೃತಿಕ ಸಂಘಟಕ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ ಹಾಗೂ ಸಂಘಟಕ ಹಣಮಂತರಾಯ ಅಟ್ಟೂರ ಮಾತನಾಡಿ, ಕಣ್ಣಿದ್ದವರು ಮಾಡದ ಸಾಧನೆ ಕಣ್ಣಿಲ್ಲದ ಪಂಡಿತ ಪುಟ್ಟರಾಜ ಗವಾಯಿಗಳು ಮಾಡಿದ್ದಾರೆ. ಭಗವಂತನು ಅವರನ್ನು ವಿಶೇಷವಾಗಿ ಸೃಷ್ಠಿ ಮಾಡಿ ಅವರ ಸಾಧನೆಗೆ ಎಲ್ಲರೂ ಮಾರು ಹೋಗುವಂತೆ ಮಾಡಿದ್ದಾನೆ. ಅಂಧ ಮತ್ತು ಅನಾಥ ಮಕ್ಕಳ ಪಾಲಿಗೆ ದೇವರಾಗಿರುವ ಪಂಡಿತ ಪುಟ್ಟರಾಜ ಗವಾಯಿಗಳು, ಸಾಧನೆಯ ಸುವರ್ಣಾಕ್ಷರಗಳಲ್ಲಿ ದಾಖಲಿಸುವಂಥ ವಿಷಯವಾಗಿದೆ ಎಂದು ಮಾರ್ಮಿಕವಾಗಿ ಮಾತನಾಡಿದರು.

ಹುಟ್ಟು ಕುರುಡರಾಗಿದ್ದುಕೊಂಡು ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಬೀದರಿನ ಲೋಕನಾಥ ಚಾಂಗಲೇರಾ, ಮಾರುತಿ ರಾವಣಗಾಂವ, ಬೇಬಾವತಿ ಕಳಸೆ, ಸೂರ್ಯಕಾಂತ ಪೊಲೀಸ್ ಪಾಟೀಲ ಉಪಳಾಂವ, ಸಂಗೀತ ನಿರ್ದೇಶಕ ಕಲಬುರಗಿಯ ಅಮರಪ್ರಿಯ ಹಿರೇಮಠ ರವರನ್ನು ವಿಶೇವಾಗಿ ಸತ್ಕರಿಸಲಾಯಿತು.

ಗೆಳೆಯರ ಬಳಗದ ಶರಣರಾಜ್ ಛಪ್ಪರಬಂದಿ, ರವಿಕುಮಾರ ಶಹಾಪುರಕರ್, ಶಿವಾನಂದ ಮಠಪತಿ, ಪ್ರಮುಖರಾದ ರುಕ್ಮಣ್ಣ ಹತಗುಂದಿ, ವಿದ್ಯಾಸಾಗರ ದೇಶಮುಖ, ಕಿರಣ ಗೋಡಬಾಲೆ, ರಾಜು ಹೆಬ್ಬಾಳ, ಮಲ್ಕಾರಿ ಪೂಜಾರಿ, ಮಹೇಶ, ಭರತೇಶ ಶೀಲವಂತರ್, ಶಿಕ್ಷಕರಾದ ನೀಲಾಂಬಿಕಾ ದಂಡಪ್ಪಗೋಳ, ಜ್ಯೋತಿ ಶಖಾಪುರ, ಸೀತಾ ಚೂರಿ, ಮಹೇಶ ತಿರಣಿ ವೇದಿಕೆ ಮೇಲಿದ್ದರು.

ಅಂಧ ಬಾಲಕರಿಗೆ ಗೆಳೆಯರ ಬಳಗದ ವತಿಯಿಂದ ಬ್ಯಾಟ್ ಮತ್ತು ಬಾಲ್‌ಗಳನ್ನು ನೀಡಲಾಯಿತು.

emedialine

Recent Posts

371 (ಜೆ) ವಿಧಿಯ ನಿಬಂಧನೆಗಳ ಪರಿಣಾಮಕಾರಿ ಅನುμÁ್ಠನಕ್ಕೆ ಒತ್ತಾಯ

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿಯು, ಬೆಂಗಳೂರಿನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಚುನಾಯಿತ ಪ್ರತಿನಿಧಿಗಳು ಮತ್ತು ಸಚಿವರ ಸಭೆ ನಡೆಸಿ,…

2 hours ago

ಮರಗಮ್ಮ ದೇವಿ ಮೂರ್ತಿ ಗಂಗಾಸ್ನಾನ | ಎಂಟು ಗಂಟೆಗಳ ಕಾಲ ಮೆರವಣಿಗೆ

ಸುರಪುರ: ಇಲ್ಲಿಯ ರಂಗಂಪೇಟೆ-ತಿಮ್ಮಾಪುರದ ಆರಾಧ್ಯ ದೇವತೆ ಮರಗಮ್ಮ ದೇವಿಯ ನೂತನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ದೇವಿಯ ಬೆಳ್ಳಿಯ ಮೂರ್ತಿ ಗಂಗಾಸ್ನಾನ…

2 hours ago

ಒತ್ತಡ ನಿಭಾಯಿಸಲು ಪರಿಹಾರ ಒದಗಿಸುವುದು ಯುವ ಸ್ಪಂದನೆ ಉದ್ದೇಶ

ಸುರಪುರ: ಯುವ ಸಬಲೀಕರಣ, ಅರೋಗ್ಯ ಜೀವನಶೈಲಿ,ಲೈಂಗಿಕತೆ ಮತ್ತು ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ನಿಭಾಯಿಸುತ್ತಿರುವ ಸವಾಲುಗಳು, ಭಾವನಾತ್ಮಕ ಸಮಸ್ಯೆಗಳು ಭಾವನೆಗಳ ನಿಭಾಯಿಸುವಿಕೆ,ನೆನಪಿನ…

2 hours ago

ಶಹಾಬಾದ: ಸಂಪೂರ್ಣತಾ ಅಭಿಯಾನ ಉತ್ಸವಕ್ಕೆ ಚಾಲನೆ

ಶಹಾಬಾದ: ನೀತಿ ಆಯೋಗವು ಮಾನವ ಅಭಿವೃದ್ಧಿ ಸೂಚಕಗಳಲ್ಲಿ ಹಿಂದುಳಿದ ತಾಲೂಕಗಳಿಗೆ ಆರೋಗ್ಯ, ಪೆÇೀಷಣೆ, ಕೃಷಿ ಮೇಲೆ ಕೇಂದ್ರೀಕರಿಸಿದ ಸಂಪೂರ್ಣತಾ ಅಭಿಯಾನ…

2 hours ago

ಗಿಡ-ಮರಗಳ ಸಂರಕ್ಷಣೆ ಮಾಡದಿದ್ದರೇ ಪ್ರಕೃತಿಗೆ ಗಂಡಾಂತರ ತಪ್ಪಿದ್ದಲ್ಲ

ಶಹಾಬಾದ: ಕೇವಲ ಒಂದು ದಿನ ವನಮಹೋತ್ಸವ ಪರಿಸರ ದಿನಾಚರಣೆಯಂತಹ ಕಾರ್ಯಕ್ರಮ ಮಾಡಿದರೆ ಸಾಲದು, ಬದಲಾಗಿ ಗಿಡ-ಮರಗಳ ಸಂರಕ್ಷಣೆ ಮಾಡುವುದು ಅವಶ್ಯವಾಗಿದೆ.…

2 hours ago

ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮ

ಶಹಾಬಾದ: ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ದೀಮಂತ ನಾಯಕ ಬಾಬು ಜಗಜೀವನರಾಮರಾಗಿದ್ದರು ಎಂದು ಕಾರ್ಮಿಕ ಪ್ರಧಾನ…

2 hours ago