ಬಿಸಿ ಬಿಸಿ ಸುದ್ದಿ

ಬಜೆಟ್ ಬಗ್ಗೆ ಸುರಪುರ ಜನಾಭಿಪ್ರಾಯ

ಸುರಪುರ: ಮುಖ್ಯಮಂತ್ರಿ ಯಡಿಯೂರಪ್ಪನವರು ರೈತರ ಬಗ್ಗೆ ಭಾಷಣ ಮಾಡುವುದು ಕಂಡು ಒಳ್ಳೆ ಬಜೆಟ್ ಕೊಡುತ್ತಾರೆ ಎಂದು ನಂಬಿದ್ದೆವು. ಹಸಿರು ಶಾಲು ಹಾಕಿಕೊಂಡು ಬಜೆಟ್ ಮಂಡನೆಗೆ ಬಂದದ್ದಷ್ಟೆ ಆಯ್ತು,ಆದರೆ ಸ್ವಾಮಿನಾಥನ್ ವರದಿಯಂತೆ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಬಗ್ಗೆ ಯಾವುದೆ ಯೋಜನೆ ಇಲ್ಲ.ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಬಗ್ಗೆ ಚಕಾರವಿಲ್ಲ.ಕೇವಲ ಗೊಳ್ಳು ಯೋಜನೆಗಳನ್ನು ಘೋಷಿಸುವ ಮೂಲಕ ರೈತರಿಗೆ ಅನುಕೂಲವಿಲ್ಲದ ಹುಸಿ ಬಜೆಟ್ ಮಂಡಿಸಿದ್ದಾರೆ. – ಮಲ್ಲಿಕಾರ್ಜುನ ಸತ್ಯಂಪೇಟೆ ಕರಾರೈಸಂ ರಾಜ್ಯ ಕಾರ್ಯದರ್ಶಿ

ಮುಖ್ಯಮಂತ್ರಿಯವರು ಹಿಂದೆ ಅಮರಶಿಲ್ಪಿ ಜಕಣಾಚಾರಿ ಸ್ಮರಣೋತ್ಸವದಲ್ಲಿ ಭಾಗವಹಿಸಿದಾಗ ವಿಶ್ವಕರ್ಮ ಸಮಾಜಕ್ಕೆ ೨೦೦ ಕೋಟಿ ಅನುದಾನ ನೀಡುವುದಾಗಿ ಮಾತನಾಡಿದ್ದರು.ಆದರೆ ಇಂದು ಕೇವಲ ೨೫ ಕೋಟಿ ನೀಡುವ ಮೂಲಕ ನಿರಾಸೆ ಮೂಡಿಸಿದ್ದಾರೆ.ಈದು ದೇವಸ್ಥಾನಗಳ ಸೇರಿಸಿ ಅಭಿವೃಧ್ಧಿ ಪ್ರಾಧಿಕಾರ ಮಾಡುವುದಾಗಿ ಹೇಳಿದ್ದರು ಅದನ್ನು ಮಾಡಿಲ್ಲ.ಕೆ.ಪಿ. ನಂಜುಂಡಿಯವರಿಗೆ ಉನ್ನತ ಸ್ಥಾನ ನೀಡುವುದಾಗಿ ಹೇಳಿದ್ದರು,ಅದೂ ಇಲ್ಲ.ಮುಖ್ಯಮಂತ್ರಿಗಳು ವಿಶ್ವಕರ್ಮ ಸಮಾಜಕ್ಕೆ ಹೇಳಿಕೊಳ್ಳುವ ಯಾವ ಗೌರವವನ್ನು ಬಜೆಟ್‌ಲ್ಲಿ.ಆದರೆ ಅಮರಶಿಲ್ಪಿ ಜಕಣಾಚಾರಿ ಸುಸ್ಮರಣಾ ದಿನಾಚರಣೆ ಘೋಷಣೆ ಮಾಡಿದ್ದು ಮಾತ್ರ ಸಂತೋಷ ತಂದಿದೆ.ಮುಂಬರುವ ದಿನಗಳಲ್ಲಿ ವಿಶ್ವಕರ್ಮ ಸಮಾಜಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಮನವಿ ಮಾಡುತ್ತೇವೆ.  – ಆನಂದ ಬಡಿಗೇರ ಲಕ್ಷ್ಮೀಪುರ ವಿಶ್ವಕರ್ಮ ಸಮಾಜದ ಮುಖಂಡರು.

ಮುಖ್ಯಮಂತ್ರಿ ಯಡಿಯೂರಪ್ಪನವರು ಈ ಹಿಂದೆ ಘೋಷಣೆ ಮಾಡಿದಂತೆ,ಈ ಬಾರಿಯ ಬಜೆಟ್‌ಲ್ಲಿ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ೫೦೦ ಕೋಟಿ ಅನುದಾನ ಘೋಷಣೆ ಮಾಡಿದ್ದು,ಅದರಲ್ಲಿ ಮೊದಲ ಕಂತು ೧೦೦ ಕೋಟಿ ನೀಡಿರುವುದು ಸಂತೋಷದಾಯಕವಾಗಿದೆ.ಮುಖ್ಯಮಂತ್ರಿಗಳಿಗೆ ಅಭಿನಂಧನೆ ಸಲ್ಲಿಸುವೆವು- ಮಂಜುನಾಥ ಜಾಲಹಳ್ಳಿ ವೀಲಿಂಯು ವೇದಿಕೆ ರಾಜ್ಯ ಉಪಾಧ್ಯಕ್ಷ, ಚಂದ್ರಶೇಖರ ಡೊಣೂರ ತಾಲೂಕು ಅಧ್ಯಕ್ಷ

ಈ ಬಾರಿಯ ಬಜೆಟ್‌ಲ್ಲಿ ನೇಕಾರ ಸಮುದಾಯಕ್ಕೆ ಅನೇಕ ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ನೇಕಾರರ ಬೆನ್ನಿಗೆ ನಿಂತಿದ್ದಾರೆ.ಆದ್ದರಿಂದ ರಾಜ್ಯದ ನೇಕಾರರ ಪರವಾಗಿ ಮುಖ್ಯಮಂತ್ರಿಗಳಿಗೆ ಧನ್ಯವಾದ ಸಲ್ಲಿಸುತ್ತೆವೆ ಹಾಗು ತಿಂಥಣಿ ಬ್ರಿಡ್ಜ್ ಬಳಿ ಮೂರು ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆ ಆಯವ್ಯಯದಲ್ಲಿ ಪ್ರಸ್ಥಾವನೆಗಾಗಿ ಶಾಸಕ ರಾಜುಗೌಡರಿಗು ಧನ್ಯವಾದ ಸಲ್ಲಿಸುವೆ  – ಸಿ.ಎನ್.ಭಂಡಾರಿ ರುಕ್ಮಾಪುರ ನಿವೃತ್ತ ಎಸ್ಪಿ

 

emedialine

View Comments

  • I read this paragraph completely regarding the comparison of hottest and earlier technologies, it's awesome article.

  • I'm really enjoying the design and layout of your website.
    It's a very easy on the eyes which makes it much more enjoyable for me to come here and visit more often. Did you hire out a designer to create your theme?
    Outstanding work!

  • Hi there, just became aware of your blog through Google,
    and found that it is really informative. I am going to watch out for brussels.
    I will be grateful if you continue this in future.
    A lot of people will be benefited from your writing.
    Cheers!

  • I loved as much as you'll receive carried out right here. The sketch is tasteful,
    your authored material stylish. nonetheless, you command
    get bought an nervousness over that you wish be delivering the following.
    unwell unquestionably come more formerly again since exactly the
    same nearly a lot often inside case you shield this hike.

Recent Posts

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

15 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

18 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago

ಸಿದ್ದ ಶ್ರೀ ಕಾರ್ಖಾನೆ ಪ್ರಾರಂಭವಾಗುವರೆಗೂ ಹೋರಾಟ: ವೀರಣ್ಣ ಗಂಗಾಣಿ

ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…

1 day ago

ದಕ್ಷಿಣ ಭಾರತ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕಬಡ್ಡಿ ಕ್ರೀಡಾಕೂಟಕ್ಕೆ ಆಯ್ಕೆ

ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…

1 day ago

ಪ್ರಿಯಾಂಕ್ ಖರ್ಗೆ ಜನ್ಮದಿನ; ರಕ್ತದಾನ ಶಿಬಿರಕ್ಕೆ ಶಾಸಕ ಪಾಟೀಲ ಚಾಲನೆ

ಕಲಬುರಗಿ: ನಗರದ ವಾರ್ಡ ನಂ.51.ರ  ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…

1 day ago