ಬಿಸಿ ಬಿಸಿ ಸುದ್ದಿ

ಕರ್ತವ್ಯ ನಿರ್ವಹಿಸುವಲ್ಲಿ ಜನತೆ ಉತ್ತಮ ಸಹಕಾರ ನೀಡಿದ್ದಿರಿ: ಆನಂದರಾವ್

ಸುರಪುರ: ಒಂದು ವರ್ಷ ಒಂದು ತಿಂಗಳುಗಳ ಕಾಲ ಕರ್ತವ್ಯ ಸಲ್ಲಿಸಲು ಸುರಪುರ ಜನತೆ ಎಲ್ಲಾ ರೀತಿಯ ಸಹಕಾರ ನೀಡಿದ್ದಿರಿ,ತಮಗೆಲ್ಲರಿಗು ನಾನು ಆಭಾರಿಯಾಗಿದ್ದೆನೆ ಎಂದು ವರ್ಗಾವಣೆಗೊಂಡ ಆರಕ್ಷಕ ನೀರಿಕ್ಷಕ ಆನಂದರಾವ್ ಎಸ್.ಎನ್ ಹೇಳಿದರು.

ನಗರದ ಪೋಲಿಸ್ ಠಾಣೆಯಿಂದ ವರ್ಗಾವಣೆಗೊಂಡ ನಿಮಿತ್ಯವಾಗಿ ಠಾಣೆಯ ಸಿಬ್ಬಂದಿ ಮತ್ತು ಸಾರ್ವಜನಿಕರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೋಡುಗೆ ಕಾರ್ಮಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸೇವೆಯಲ್ಲಿ ಕೂಡುವುದು ಅಗತ್ಯ ಅದರಂತೆ ಅಗಲುವುದು ಅನಿವಾರ್ಯ, ಆದರೆ ಸೇವೆಯ ಸಂದರ್ಭದಲ್ಲಿ ಎಲ್ಲರೂ ಸಹಕಾರ ನೀಡಿದ್ದಿರಿ. ಕೆಲವು ಘಟನೆಗಳು ಜರುಗಿದಾಗ ವಿಕೋಪಕ್ಕೆ ಹೋಗುವ ಹಂತದಲ್ಲಿ ಸಂಘ ಸಂಸ್ಥೆಗಳವರು ಸಹಕರಿಸಿದ್ದಿರಿ, ಠಾಣೆಗೆ ಬರುವವರನ್ನು ಆತ್ಮೀಯವಾಗಿ ಕಂಡು ಅವರ ಸಮಸ್ಯೆಯನ್ನು ಆಲಿಸಿ ಪರಿಹರಿಸಿದರೆ ನೆನಪಿನಲ್ಲಿಡುತ್ತಾರೆ.ಇದನ್ನು ಅರಿತು ಕೆಲಸ ಮಾಡಿರುವೆ ಎಂದರು.ಮುಂದೆಯೂ ನನ್ನೊಂದಿಗೆ ಒಬ್ಬ ಗೆಳೆಯನಾಗಿ,ಸ್ನೇಹಿತನಾಗಿ ಅವಶ್ಯವಿರು ಸಲಹೆಗಳನ್ನು ಕೇಳಿದರು ಕೊಡಲು ಸಿದ್ಧನಿರುವೆ.ಠಾಣೆಯಲ್ಲಿನ ಎಲ್ಲಾ ಸಿಬ್ಬಂದಿಗಳು ನನ್ನ ಕರ್ತವ್ಯಕ್ಕೆ ಉತ್ತಮ ಸಹಕಾರ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪ ಅಧಿಕ್ಷಕ ವೆಂಕಟೇಶ ಹುಗಿಬಂಡಿ ಮಾತನಾಡಿ,ನಾನು ಬಂದು ತಿಂಗಳಲ್ಲಿಯೆ ಆನಂದರಾವ್ ಅವರ ಸೇವೆ ಹೇಗಿದೆ ಎಂದು ಅರಿತಿರುವೆನು.ಅಲ್ಲದೆ ಅವರ ಸೇವೆ ಹೇಗಿತ್ತು ಎನ್ನುವುದನ್ನು ತಿಳಿಯಲು ಇಂದು ತಾವೆಲ್ಲ ಸೇರಿರುವ ಸಮಾರಂಭವೆ ಸಾಕ್ಷಿ ಎಂದರು.ಅನೇಕ ಸಂದರ್ಭಗಳಲ್ಲಿ ಆನಂದರಾವ್ ಅವರೊಂದಿಗೆ ಚರ್ಚಿಸಿದಾಗ ಇಲ್ಲಿಯ ಜನರ ಬಗ್ಗೆ ಮತ್ತು ಸಮಸ್ಯೆಗಳ ನಿವಾರಣೆ ಬಗ್ಗೆ ವಿವರಿಸಿದ್ದಾರೆ ಎಂದರು.ಬ್ರಿಟೀಷರ ಕಾಲದಲ್ಲಿ ಪೋಲಿಸರ ಕೆಲಸ ಕೇವಲ ಬಂಧಿಸುವುದ ಮಾತ್ರವಾಗಿತ್ತು.ಆದರೆ ಇಂದು ಪೋಲಿಸರ ಕೆಲಸ ಬಂಧಿಸುವುದರ ಜೊತೆಗೆ ಜನರು ಅಪರಾಧ ಎಸಗದಂತೆ ಅರಿವು ಮೂಡಿಸುವುದಾಗಿದೆ.ಸುರಪುರ ಜನರು ಕೆಟ್ಟವರಲ್ಲ ಒಳ್ಳೆಯವರು ಮತ್ತು ಮುಗ್ಧರಾಗಿದ್ದಾರೆ. ಸಂಚಾರಿ ನಿಯಮಗಳಿಗಾಗಿ ನಾವು ಹೆಚ್ಚಿನ ಮೊತ್ತದ ದಂಡ ಹಾಕುವಾಗ ನಮಗೂ ಬೇಜಾರಾಗುತ್ತದೆ, ನಮ್ಮಲ್ಲೂ ಕನಿಕರವಿದೆ. ಆದರೆ ದಂಡ ಹಾಕಿದಾಗ ಆತ ನೂರಾರು ಜನರಿಗೆ ತಿಳಿಸಿ ಇತರರು ಅಂತ ತಪ್ಪು ಮಾಡಲಾರರು ಎಂದರು.

ಇದೇ ಸಂದರ್ಭದಲ್ಲಿ ಅತಿಥಿಗಳಾಗಿದ್ದ ಪಿ.ಐ ಎಸ್.ಎಮ್.ಪಾಟೀಲ, ಶಹಾಪುರ ಸಿಪಿಐ ಶ್ರೀನಿವಾಸ ಅಲ್ಲಾಪುರ ಹಾಗು ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ಧರ್ಮರಾಜ ಬಡಿಗೇರ, ರಾಹುಲ್ ಹುಲಿಮನಿ, ಪ್ರಶಾಂತ ಉಗ್ರಂ, ಇಕ್ಬಾಲ್ ಮುಫ್ತಿ ಒಂಟಿ, ಪೇದೆಗಳಾದ ಚಂದ್ರಶೇಖರ, ರವಿ ರಾಠೋಡ ಮಾತನಾಡಿದರು. ಬಲಭೀಮ ನಾಯಕ ಬೈರಿಮಡ್ಡಿ, ಶರಣು ನಾಯಕ ಬೈರಿಮಡ್ಡಿ, ಗಿರೀಶ, ಹಣಮಂತ ಕಟ್ಟಿಮನಿ, ಮಲ್ಲು ಬಿಲ್ಲವ್, ಅಬ್ದುಲ್ ಗಫೂರ ನಗನೂರಿ, ಮಹಿಬೂಬ ಒಂಟಿ, ವೆಂಕಟೇಶ ನಾಯಕ ಬೈರಿಮಡ್ಡಿ ಮತ್ತು ಕರವೇ ಕಾರ್ಯಕರ್ತರು,ಮದನ ಕಟ್ಟಿಮನಿ ಇತರರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

3 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

3 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

3 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

19 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

22 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago