ಬಿಸಿ ಬಿಸಿ ಸುದ್ದಿ

ಗುಲ್ಬರ್ಗಾ ವಿವಿಯಲ್ಲಿ ರಾಷ್ಟ್ರೀಯ ಬೌದ್ಧ ಸಾಹಿತ್ಯ ಸಮ್ಮೇಳನ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ದಶಮಾನೋತ್ಸವ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ಸುವರ್ಣ ಸಂಭ್ರಮದ ನಿಮಿತ್ತವಾಗಿ ಎರಡು ದಿನಗಳ ರಾಷ್ಟ್ರೀಯ ಬೌದ್ಧ ಸಾಹಿತ್ಯ ಸಮ್ಮೇಳನವನ್ನು ಮಾ. 11 ಮತ್ತು 12 ರಂದು ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಸಾಮ್ರಾಟ ಅಶೋಕ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ.

ಖ್ಯಾತ ಸಂಶೋಧಕರಾದ ಪ್ರೊ. ವಸಂತಕುಮಾರ ತಾಳ್ತಜೆ ಅವರು ಕಾರ್ಯಕ್ರಮ ಉದ್ಘಾಟಿಸುವರು. ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೆಪುರಂ ಜಿ. ವೆಂಕಟೇಶ ಅವರು ಆಶಯ ಭಾಷಣ ಮಾಡುವರು. ಪ್ರಭಾರ ಕುಲಪತಿಗಳಾದ ಪ್ರೊ. ದೇವಿದಾಸ ಮಾಲೆ ಅವರು ಅಧ್ಯಕ್ಷತೆವಹಿಸುವರು ಮುಖ್ಯತಿಥಿಗಳಾಗಿ ರಂಗಾಯಣ ನಿರ್ದೇಶಕರಾದ ಪ್ರಭಾಕರ ಜೋಷಿ, ಚಂದ್ರಶೇಖರ ನಿಟ್ಟೂರೆ, ಪ್ರೊ. ಜಿ.ಎಂ. ವಿದ್ಯಾಸಾಗರ ಭಾಗವಹಿಸುವರು.

ಕುಲಸಚಿವರಾದ ಪ್ರೊ. ಸಿ. ಸೋಮಶೇಖರ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಸಂಜೀವಕುಮಾರ ಕೆ.ಎಂ, ವಿತ್ತಾಧಿಕಾರಿಗಳಾದ ಪ್ರೊ. ಬಿ. ವಿಜಯ ಪಾಲಿ ನಿರ್ದೇಶಕರಾದ ಪ್ರೊ. ಎಚ್.ಟಿ. ಪೋತೆ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಕನ್ನಡ ಬೌದ್ಧ ಸಾಹಿತ್ಯ ಸಂಪುಟಗಳು ಜಾನಾರ್ಪಣೆ ಮಾಡಲಾಗುವುದು. ಅದೇ ದಿನ 12 ಗಂಟೆಗೆ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದ ನಾಗಾರ್ಜುನ ವೇದಿಕೆಯಲ್ಲಿ ಮೂರು ಗೋಷ್ಠಿಗಳು ಜರುಗಲಿವೆ ಮತ್ತು ಅನುಭವ ಮಂಟಪ ಆಮ್ರಪಾಲಿ ವೇದಿಕೆಯಲ್ಲಿ ಮೂರು ಗೋಷ್ಠಿಗಳು ಜರುಗಲಿವೆ. 25ಕ್ಕೂ ಹೆಚ್ಚು ಜನ ವಿದ್ವಾಂಸರು ಮೊದಲದಿನ ತಮ್ಮ ವಿದ್ವತ್ ಪೂರ್ಣ ಪ್ರಬಂಧಗಳನ್ನು ಮಂಡಿಸಲಿದ್ದಾರೆ.

12 ರಂದು ಎರಡನೆಯ ದಿನ ಹರಿಹರ ಸಭಾಂಗಣದ ನಾಗಾರ್ಜುನ ವೇದಿಕಯೆಲ್ಲಿ ಎರಡು ಗೋಷ್ಠಿಗಳು ಎರಡು ವಿಶೇಷ ಉಪನ್ಯಾಸ ಮತ್ತು ಒಂದು ಕವಿಗೋಷ್ಠಿ ನಡೆಯಲಿದೆ. ಹತ್ತಕ್ಕೂ ಹೆಚ್ಚು ಜನ ವಿದ್ವಾಂಸರು ತಮ್ಮ ವಿದ್ವತ್ ಪೂರ್ಣ ಪ್ರಬಂಧ ಮಂಡಿಸುವರು. ಹತ್ತಕ್ಕೂ ಹೆಚ್ಚು ಕವಿಗಳು ತಮ್ಮ ಕವಿತೆ ವಾಚನ ಮಾಡುವರು. ಅನುಭವ ಮಂಟಪ ಆಮ್ರಪಾಲಿ ವೇದಿಕೆಯಲ್ಲಿ ಎರಡನೆಯ ದಿನ ಎರಡು ಗೋಷ್ಠಿಗಳು ಒಂದು ಬಹÅಭಾಷಾ ಗೋಷ್ಠಿ, ಒಂದು ವಿಶೇಷ ಉಪನ್ಯಾಸ ಒಂದು ಕವಿಗೋಷ್ಠಿ ಜರುಗುವುದು. ಹತ್ತಕ್ಕೂ ಹೆಚ್ಚು ಜನ ಪ್ರಬಂಧ ಮಂಡಿಸುವರು ಹದಿನೈದಕ್ಕೆ ಹೆಚ್ಚು ಜನ ಕವಿತೆ ವಾಚನ ಮಾಡುವರು.

4 ಗಂಟೆಗೆ ಸಮಾರೋಪ ಸಮಾರಂಭ ಜರುಗುವುದು ಡಾ. ಎನ್.ಎಸ್. ತಾರಾನಾಥ ಸಮಾರೋಪ ಭಾಷಣ ಮಾಡುವರು. ಡಾ. ಆರ್. ಶೇಷಶಾಸ್ತ್ರಿ ಮುಖ್ಯ ಅಥಿತಿಗಳಾಗಿ ಭಾಗವಹಿಸುವರು. ಡಾ. ವಿಠ್ಠಲ ದೊಡಮನಿ ಡಾ. ಸುರೇಶ ಬಡಿಗೇರ ಉಪಸ್ಥಿತರಿರುವರು. ಡಾ. ಕೆ. ವಿಜಕಯಮಾರ ಅಧ್ಯಕ್ಷತೆವಹಿಸುವರು  ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

21 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

1 day ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

1 day ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

1 day ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

2 days ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

2 days ago