ಕಲಬುರಗಿ: ಭಾರತ ಸರ್ಕಾರದ ಆಶಯದಂತೆ 2025ರ ಹೊತ್ತಿಗೆ ಕ್ಷಯ ಮುಕ್ತ ಭಾರತ ನಿರ್ಮಾಣ ಮಾಡುವಲ್ಲಿ ಆರೋಗ್ಯ ಇಲಾಖೆ ಜೊತೆಗೆ ಪ್ರತಿ ಒಬ್ಬರು ಸಮಾಜಿಕ ಕಳಕಳಿಯಿಂದ ನಮ್ಮೊಂದಿಗೆ ಸರ್ವರಿಗೂ ಅರಿವು ಮೂಡಿಸಲು ಕೈ ಜೋಡಿಸಬೇಕು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರದ ಜಿಲ್ಲಾ ಡಿ ಅರ್ ಟಿ ಬಿ . ಟಿ ಐ ಎಸ್ ಎಸ್. ಸಮಾಲೋಚಕ ಮಂಜುನಾಥ ಕಂಬಾಳಿಮಠ ಹೇಳಿದರು.
ಕಮಾಲಪೂ ಸರಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ ಸಭಾಂಗಣದಲ್ಲಿ . ನೆಹರು ಯುವ ಕೇಂದ್ರ ಕಲಬುರಗಿ, ಹಾಗೂ ಪ್ರಯಾಗ್ ಮತ್ತು ಸಹಾರ ಯುವತಿ. ದಿಶಾ ಯುವಕ ಸಂಘ , ಸರಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ ಕಮಲಪೂರ, IQAC,ರೆಡ್ ಕ್ರಾಸ್, ಯೂಥ್ ವಿಂಗ್, ಎನ್ ಎಸ್ ಎಸ್, ಘಟಕ . ಇವರ ಸಂಯುಕ್ತಾಶ್ರದಲ್ಲಿ. ಯುವ ನಾಯಕತ್ವ ಮತ್ತು ಸಮುದಾಯ ಅಭಿವೃದ್ಧಿ ಕಾರ್ಯಗಾರ ಕಾರ್ಯಕ್ರಮದ ಕಾಲೇಜಿನ ವಿದ್ಯಾರ್ಥಿಗಳಿಗೆ . ಎರಡನೇ ದಿನದ ಕಾರ್ಯಗಾರ ಕಾರ್ಯಕ್ರಮದಲ್ಲಿ.
ಅರೋಗ್ಯ ದ ಬಗ್ಗೆ ಅರಿವು ಮೂಡಿಸಬೇಕಾಗಿದೆ, ಒಬ್ಬ ವಿದ್ಯಾರ್ಥಿಗೆ ಗುರಿ ಎಷ್ಟು ಮುಖ್ಯವೊ ಅಷ್ಟೇ ಮುಖ್ಯ ನಮ್ಮ ಆರೋಗ್ಯ ಕೂಡ ಈ ಹಿನ್ನೆಲೆಯಲ್ಲಿ ಆರೋಗ್ಯದ ಕಡೆ ವಿದ್ಯಾರ್ಥಿಗಳು ಗಮನವಹಿಸಬೇಕು , ವಿಶೇಷವಾಗಿ ” ವಿಶ್ವ ಕ್ಷಯರೋಗ ದಿನ 24 ಮಾರ್ಚ್ ” ಅಂಗವಾಗಿ ವಿದ್ಯಾರ್ಥಿಗಳಿಗೆ ಕ್ಷಯರೋಗ ಬಿತ್ತಿ ಪತ್ರ ಓದುವ ಮೂಲಕ ಜಾಗೃತಿ ನೀಡಿದ ನಂತರ ಹೆಮ್ಮರಿಯಂತೆ ಚೀನಾ ದೇಶದಲ್ಲಿ ಹರಡಿದ ಕಾರೊನಾ ವೈರಸ್.. ದಿನೆ ದಿನೆ ಹೆಚ್ಚಾಗಿ ಹಬ್ಬುತಿದ, ಇದರ ಬಗ್ಗೆ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಇದರ ಬಗ್ಗೆ ಮುಂಜಾಗ್ರತಾ ಕ್ರಮದಿಂದ ಇರಲು , ಉತ್ತಮ ಆರೋಗ್ಯದ ಹೊರತು ಉತ್ತಮ ಜೀವನ ಸೃಷ್ಟಿಸಿಕೊಳ್ಳು ಸಾಧ್ಯವಿಲ್ಲ,ಎಂದು ಮಾಹಿತಿ ನಿಡಿದರು.
ತಾಲ್ಲೂಕ ಹಿರಿಯ ಕ್ಷಯರೋಗ ಮೇಲ್ವಿಚಾರಕ ಶಿವಕುಮಾರ್ ಪಾಟೀಲ್ ಮಾತನಾಡುತ್ತಾ , ವಿದ್ಯಾರ್ಥಿಗಳಿಗೆ ಕ್ಷಯರೋಗ ಲಕ್ಷಣಗಳ ಬಗ್ಗೆ ವಿವರಿಸುತ್ತ ಕ್ಷಯರೋಗಿಗಳು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರೆ, ಹಾಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ತೆಗೆದುಕೊಳ್ಳದೆ ಇದ್ದರೆ. ಒಬ್ಬ ಕ್ಷಯರೋಗಿ ಚಿಕಿತ್ಸೆ ಪಡೆಯದೇ ಇದ್ದರೆ ಒಂದು ವರ್ಷದಲ್ಲಿ ಹತ್ತು ರಿಂದ ಹದಿನೈದು ಜನರಿಗೆ ಹರಡಿಸಬಲ್ಲ, ಹಾಗೆ ಇದರ ಲಕ್ಷಣಗಳು ಎರಡು ವಾರಗಳಿಗೂ ಮೇಲ್ಪಟ್ಟು ಕೆಮ್ಮು, ಸಂಜೆ ವೇಳೆ ಜ್ವರ ಬರುವುದು, ಎದೆ ನೋವು, ತೂಕ ಕಡಿಮೆಯಾಗುವುದು, ಹಸಿವಾಗದಿರುವುದು,ಕಫದ ಜೊತೆ ರಕ್ತ ಬೀಳುವುದು. ಈ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯ ಸಲಹೆ ಪಡೆದು. ಹಾಗೆ ಲ್ಯಾಬೋರೇಟರಿಯಲ್ಲಿ ಕಫದ ಮಾದರಿ ಪರೀಕ್ಷೆ ಕೇಂದ್ರ ಮಾಡಿಸಲು ಉಚಿತವಾಗಿದೆ ಎಂದು ತಿಳಿಸಿದರು. ಕ್ಷಯರೋಗಿ ಎಂದು ಧೃಡಪಟ್ಟಲ್ಲಿ ಅವರಿಗೆ ಪೂರ್ಣ ಪ್ರಮಾಣದ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಹಾಗೆ ಕ್ಷಯರೋಗಿಗೆ ಪ್ರತಿ ತಿಂಗಳು ನಿಕ್ಷಯ ಪೋಷಣ ಯೋಜನೆಯಡಿ 500 ರೂ.ಗಳ ಸಹಾಯಧನ ನೆರೆ ಅವರ ಬ್ಯಾಂಕ್ ಅಕೌಂಟ್ ಗೆ ನೀಡಲಾಗುತ್ತದೆ, ಎಂದು ಹೇಳಿದರು.
ಪತಂಜಲಿ ಯೋಗ ಸಾಧಕ ರಾಮಕೃಷ್ಣ ಅವರು ಕಾಲೇಜಿನ ವಿದ್ಯಾರ್ಥಿಗಳಿಗೆ ಯೋಗ್ಯಭ್ಯಾಸ ಮಾಡಸಿ ಅದರ ಉಪಯುಕ್ತ ಮಾಹಿತಿ ಏಕಾಗ್ರತೆ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ.ಶಾಂತ ಅಷ್ಟಾಗಿ, ಡಾ. ಶಿಲ್ಪ ಗಾಂವಕರ್. ಡಾ. ರಾಜಶೇಖರ, ಪ್ರೊ ಶರಣು ಚಿಕ್ಕಳಿ, ದಯಾನಂದ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು .
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…
ಕಲಬುರಗಿ; ಅಲ್ಪಸುಖಕ್ಕಾಗಿ ಯುವ ಜನತೆ ಮಾದಕ ಪದಾರ್ಥಗಳಿಗೆ ದಾಸರಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳಬಾರದು ಎಂದು ಜಿಲ್ಲಾ ತಂಬಾಕು ನಿಯಂತ್ರಣ…
ಸೇಡಂ (ಕಲಬುರಗಿ); ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ ಕೊಡಮಾಡುವ `ಅಮ್ಮ ಪ್ರಶಸ್ತಿ’ 24ನೇ ವರ್ಷದ ಸಮಾರಂಭವು…