ಶಹಾಬಾದ: ಸಮೀಪದ ಭಂಕೂರ ಗ್ರಾಮದ ಶಾಂತನಗರ ಹಾಗೂ ಜಿಇ ಕಾಲೋನಿಯಲ್ಲಿ ಮಂಗಳವಾರ ಹೋಳಿ ಹಬ್ಬದ ನಿಮಿತ್ತ ರಂಗುರಂಗಿನ ಬಣ್ಣವನ್ನು ಯುವಕರು, ಯುವತಿಯರು, ಮಕ್ಕಳು ಪರಸ್ಪರ ಬಣ್ಣ ಏರಚಿಕೊಂಡು ಸಂಭ್ರಮದಿಂದ ಆಚರಿಸಿದರು.
ಹೋಳಿ ಹಬ್ಬದ ಮುನ್ನ ದಿನವಾದ ಸೋಮವಾರ ರಾತ್ರಿ ಕಾಮದಹನ ಮಾಡಲಾಯಿತು. ಮಂಗಳವಾರ ಹಬ್ಬದ ನಿಮಿತ್ಯ ತಮ್ಮ ಬಂಧು ಮಿತ್ರರಿಗೆ ವಿಶೇಷ ಆಹ್ವಾನ ನೀಡಿ ಒಂದೆಡೆ ಸೇರಿ ಬ್ಯಾರೆಲಗಳಲ್ಲಿ ತುಂಬಲಾದ ಬಣ್ಣವನ್ನು ಪರಸ್ಪರ ಎರಚಿ, ತಲೆಯ ಮೇಲೆ ಮೊಟ್ಟೆ ಒಡೆಯುವ ದೃಶ್ಯ ಸಾಮನ್ಯವಾಗಿತ್ತು. ಬೆಳಿಗ್ಗೆಯಿಂದಲೇ ಆರಂಭವಾದ ಹೋಳಿ ಆಚರಣೆಯಲ್ಲಿ ಮಕ್ಕಳು ಬಣ್ಣ ಎರಚಿಕೊಂಡು ಸಂತೋಷಪಟ್ಟರು. ಅಲ್ಲದೇ ಯುವಕರು ರಂಗಿನಾಟದಲ್ಲಿ ಪಾಲ್ಗೊಳ್ಳದ ಯುಕರನ್ನು ಓಢಾಡಿಸಿ ಅವರಿಗೆ ಬಣ್ಣ ಎರಚುವುದು ಮನರಂಜನೀಯವಾಗಿತ್ತು.
ಮನೆಯ ಮುಂದೆ ಡಿಜೆ ಹಚ್ಚಿ ಸಿನಿಮಾ ಹಾಡುಗಳಿಗೆ ಪರಸ್ಪರ ಬಣ್ಣ ಹಚ್ಚಿಕೊಂಡು ಕುಣಿದು ಕುಪ್ಪಳಿಸಿದರು. ಅಲ್ಲದೇ ಕೆಲವು ಕಡೆ ಬ್ಯಾರೆಲ್‌ಗಳಲ್ಲಿ ಬಣ್ಣದ ನೀರು ತುಂಬಿಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ರಸ್ತೆಯ ಮೇಲೆ ಸಂಚರಿಸುವ ಹಾಗೂ ಕಟ್ಟೆಯ ಮೇಲೆ ಕುಳಿತ ಜನರಿಗೆ ಬಣ್ಣದ ನೀರು ಎರಚುತ್ತ ಝಳಕ ಮಾಡಿಸಿದರು. ಬೆಳಿಗ್ಗೆ ೮ಗಂಟೆಯಿಂದ ರಂಗಿನಾಟದಲ್ಲಿ ತೊಡಗಿದ್ದ ಯುವಕರು ಬಿಸಿಲಿನ ಜಳಕ್ಕೆ ಹನ್ನೊಂದು ಗಂಟೆಯವರೆಗೆ ಸಂತೋಷದಿಂದ ಬಣ್ಣದಲ್ಲಿ ತೇಲಾಡಿ ಬಣ್ಣ ಎರಚಿ ಹೋಳಿ ಹಬ್ಬವನ್ನು ಆಚರಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…