ಬಿಸಿ ಬಿಸಿ ಸುದ್ದಿ

ಸರಕಾರಿ ಶಾಲೆಯ ಮಕ್ಕಳ ಮಾತಿಗೆ ಕಿವಿಯಾದ ಕಲಬುರಗಿ ಸಿ.ಇ.ಒ.

ಕಲಬುರಗಿ: ಸ್ತುತ ಸಂದರ್ಭದಲ್ಲಿ ಐ.ಎ.ಎಸ್. ಅಧಿಕಾರಿಗಳು ಕಛೇರಿಯ ಕೆಲಸದ ಒತ್ತಡದಲ್ಲಿ ಮುಳಗಿರುತ್ತಾರೆ. ಜಿಲ್ಲೆಯ ಅನೇಕ ಕಡತಗಳಲ್ಲಿ ಕಳೆದು ಹೋಗುತ್ತಾರೆ. ಇದಕ್ಕೆ ವಿರುದ್ಧವಾಗಿ ಎಂಬಂತೆ ಕಲಬುರಗಿ ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಗಳಾದ ಡಾ.ರಾಜಾ ಪಿ. ಅವರು ಕಲಬುರಗಿ ಜಿಲ್ಲೆಯಲ್ಲಿನ ಶಾಲೆಗಳ ಭೇಟಿ ಕೊಡುವ ಮೂಲಕ ಮಕ್ಕಳ ಮಾತುಗಳಿಗೆ ಕವಿಯಾಗುತ್ತಿದ್ದಾರೆ.

ಹೌದು ಇತ್ತೀಚಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಕಲಬುರಗಿ, ಕರ್ನಾಟಕ ಪಬ್ಲಿಕ್ ಶಾಲೆ ಅವರಾದ(ಬಿ) ಭಾರತ ಫೈನಾನ್ಸಿಯಲ್ ಇನ್‌ಕ್ಲೂಜನ್ ಲಿಮಿಟೆಡ್ ವತಿಯಿಂದ ಹಮ್ಮಿಕೊಂಡಿದ್ದ ಗಣಿತ ಮೇಳದಲ್ಲಿ ಸರಿಯಾಗಿ ಸತತ ಮೂರು ಗಂಟೆಗಳ ಸಮಯ ಮಕ್ಕಳ ಗಣಿತ ಮಾದರಿಗಳ ಪ್ರದರ್ಶನ ವೀಕ್ಷಿಸಿದರು. ಪ್ರತಿ ಮಗುವಿನ ಮಾದರಿಯ ಮುಂದೆ ನಿಂತು ಅವರ ಮಾತುಗಳಿಗೆ ಕಿವಿಯಾದರು.

ಮಕ್ಕಳು ತಮ್ಮ ಮಾದರಿಗಳನ್ನು ವಿವರಿಸುವಾಗ ಅವರ ಮಾತುಗಳನ್ನು ಕೈಕಟ್ಟಿ ಆಲಿಸುತ್ತಾ ಅವರಿಗೆ ಬೆನ್ನುತಟ್ಟುತ್ತಾ ಶಬಾಷ್ ಎನ್ನುತ್ತಾ ಪ್ರಶ್ನೆಗಳನ್ನು ಕೇಳುತ್ತಾ ಮಕ್ಕಳಿಗೆ ಸ್ಪೂರ್ತಿಯಾದರು. ಮಕ್ಕಳು ಮಾದರಿಗಳನ್ನು ವಿವರಿಸುವಾಗ ಹುರಿದುಂಬಿಸಿದರು. ಗಣಿತ ಕಬ್ಬಿಣದ ಕಡಲೆಯೆನ್ನುತ್ತೇವೆ ಆದರೆ ಶಿಕ್ಷಕರು ಮನಸ್ಸು ಮಾಡಿದರೆ ಎಷ್ಟು ಚಂದ ಸರಳವಾಗಿ ಕಲಿಸಬಹುದೆಂಬುವುದರ ಬಗ್ಗೆ ಈ ಮೇಳ ನೋಡಿ ಸಂತೋಷವಾಯಿತು ಎಂದರು.

ಸರ್ ನನ್ನಲ್ಲಿ ಆರು ಗೋಲಿಗಳಿವೆ ನಾನು ನಿಮಗೆ ಎರಡು ಗೋಲಿಗಳನ್ನು ಕೊಟ್ಟರೆ ನನ್ನಲ್ಲಿ ನಾಲ್ಕು ಗೋಲಿಗಳು ಉಳಿದವು ಇದನ್ನು ಕಳೆಯುವ ಲೆಕ್ಕ ಎನ್ನುತ್ತಾರೆ ಎಂದಾಗ ಸಿ.ಇ.ಓ. ಅವರು ಹುಡುಗನ ಬೆನ್ನುತಟ್ಟುತ್ತಾ ಮುಂದಿನ ಪ್ರಶ್ನೆಗಳನ್ನು ಕೇಳುತ್ತಾ ಹೋದರು.

ಹತ್ತನೆಯ ತರಗತಿಯ ಮಕ್ಕಳು ಹೃದಯ, ಶ್ವಾಸನಾಳ,ಜೀರ್ಣಕ್ರಿಯೆ, ವಿಸರ್ಜನಾಂಗ, ನರವ್ಯೂಹ, ಇತ್ಯಾದಿ ಮಾದರಿಗಳ ವಿವರಣೆಯಲ್ಲಿ ಸಿ.ಇ.ಒ ಅತ್ಯಂತ ಸಂತೋಷದಿಂದ ಪಾಲ್ಗೊಂಡರು. ಈ ನಡೆ ಎಲ್ಲರಿಗೂ ಮಾದರಿಯಾಗಬೇಕು. ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುವರಿಗೆ ಸರಕಾರಿ ಶಾಲೆಗಳಲ್ಲಿಯೂ ಮಕ್ಕಳು ಜಾಣರಿದ್ದಾರೆ ಅವರಿಗೆ ಅವಕಾಶ ಒದಗಿಸಿದರೆ ಏನು ಬೇಕಾದರು ಸಾಧಿಸಬಲ್ಲರೂ ಎನ್ನುವುದು ಎಲ್ಲರೂ ಕಲಿಯುವಂತಾಗಬೇಕು. ಸಿ.ಇ.ಒ ಅವರು ಸರಿಯಾಗಿ ಮೂರು ಗಂಟೆಗಳಲ್ಲಿ ೧೫೦ಕ್ಕೂ ಹಚ್ಚು ಮಾದರಿಗಳನ್ನು ವಿಕ್ಷೀಸಿದರು.

ಮೇಳದಲ್ಲಿ ಡಾ.ರಾಜಾ ಪಿ. ಅವರು ಹೇಳಿದ್ದು ಹೀಗೆ. ನಮ್ಮಲ್ಲಿ ಹಣವಿದ್ದರೆ ಅದು ಕ್ಷಣಿಕ, ಭೂಮಿಯಿದ್ದರೆ ಅದೂ ಕೂಡ ಕ್ಷಣಿಕ, ಇವೆಲ್ಲವೂಗಳನ್ನು ನಮ್ಮಿಂದ ಕಸಿದುಕೊಳ್ಳಬಹುದಾಗಿದೆ ಆದರೆ ಜ್ಞಾನವೆಂಬುವುದು ನಮ್ಮಲ್ಲಿದ್ದರೆ ಅದು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಹೀಗಾಗಿ ನಮ್ಮ ಸರಕಾರಿ ಶಾಲೆಗಳ ವಿಧ್ಯಾರ್ಥಿಗಳಿಗೆ ಜ್ಞಾನವನ್ನು ನಾವೆಲ್ಲರೂ ಒಟ್ಟಾಗಿ ಉತ್ತಮವಾದ ಜ್ಞಾನ ಕೊಡಬೇಕು. ಶಾಶ್ವತ ಕಲಿಕೆಗೆ ಉತ್ತೇಜನ ಕೊಟ್ಟರೆ ಶೈಕ್ಷಣಿಕ ಗುಣಮಟ್ಟ ಹೆಚ್ಚಾಗುತ್ತದೆ ಎಂದರು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

60 mins ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

11 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

11 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

11 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago