ಸುರಪುರ: ನಗರದಲ್ಲಿ ಮೂರು ದಿನಗಳ ಹಜರತ್ ಸಯ್ಯದ್ ಬುಹ್ರಾನುದ್ದಿನ್ ಶಹಾ ಖಾದ್ರಿಯವರು ಉರುಸ್ ಆಚರಣೆ ಜರುಗಿತು.ಉರುಸ್ ಅಂಗವಾಗಿ ಶನಿವಾರ ರಾತ್ರಿ ಹುಜುರ್ ಮುಬಾರಕ್ ಅವರ ಮನ ಬಳಿಯ ಹಜರತ್ ಸಯ್ಯದ್ ಇರ್ಫಾನ್ ಅಲಿ ಶಹಾ ಖಾದ್ರಿ ಏಜಾಜ್ ಸಯ್ಯದ್ ಅಬೀದ್ ಅಹ್ಮದ ದರ್ಗಾದಿಂದ ಬಸ್ ನಿಲ್ದಾಣದ ಬಳಿಯ ದರ್ಗಾ ಮೂಲಕ ಗಾಂಧಿ ವೃತ್ತದ ಮಾರ್ಗವಾಗಿ ನಗರದ ಮುಖ್ಯ ರಸ್ತೆಗಳಲ್ಲಿ ಬೆಳಗಿನವರೆಗೆ ಬಾಜಾ ಭಜಂತ್ರಿಗಳೊಂದಿಗೆ ಸಂಭ್ರಮದ ಸಂದಲ್ ನಡೆಸಿ ದರ್ಗಾಕ್ಕೆ ತಲುಪಲಾಯಿತು.
ನಂತರ ಸಜ್ಜಾದ್ ನಶಿನ್ ಹಜರತ್ ಸಯ್ಯದ್ ಇರ್ಫಾನ ಅಲಿಶಹಾ ಖಾದ್ರಿ ಏಜಾಜ್ ಸಯ್ಯದ್ ಅಬೀದ್ ಅಹ್ಮದ್ ಗಂಧ ಲೇಪನ ಮಾಡಿ ಮಾತನಾಡಿ,ನಮ್ಮ ಸಗರನಾಡಿನಲ್ಲಿ ಅನೇಕ ಜನ ಸೂಫಿ ಸಂತರು ಶರಣರು ಮಹಾಂತರು ಉದಯಿಸಿದ್ದಾರೆ.ಅವರೆಲ್ಲರು ಮಾನವ ಸಮಾಜವನ್ನು ಬೆಳಗಿದವರು ಮತ್ತು ಎಲ್ಲಾ ಧರ್ಮಗಳ ಸಾರ ಒಂದೆ ಅದು ಎಲ್ಲರು ಒಂದೆ ಎಂಬುದನ್ನು ತಿಳಿಸಿದ್ದಾರೆ ಎಂದರು.ನಂತರ ಕವ್ವಾಲಿ ಹಾಡುಗಳ ಜುಗಲ್ ಬಂದಿ ನಡೆಯಿತು.
ರವಿವಾರ ಬೆಳಿಗ್ಗೆ ಸಯ್ಯದ್ ಬುಹ್ರಾನುದ್ದಿನ್ ದರ್ಗಾಕ್ಕೆ ಗಲಿಫಾ ಅರ್ಪಣೆ ಕಾರ್ಯಕ್ರಮ ನಡೆಯಿತು.ದರ್ಗಾದ ಮುಂದೆ ದೀಪಾರಾಧನೆ,ಕವ್ವಾಲಿ ಗಾಯನ ನಡೆಸಲಾಯಿತು.ನಂತರ ಸೋಮವಾರ ಬೆಳಿಗ್ಗೆ ಅದ್ಧೂರಿಯಾಗಿ ಜಿಯಾರತ್ ನಡೆಸಲಾಯಿತು.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕೇವಲ ಕರ್ನಾಟಕ ಮಾತ್ರವಲ್ಲದೆ ನೆರೆಯ ಆಂಧ್ರಾ ಮಹಾರಾಷ್ಟ್ರ ಮತ್ತಿತರೆಡೆಗಳಿಂದಲು ಸಾವಿರಾರು ಜನ ಉರುಸ್‌ನಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ರಾಜಾ ವೇಣುಗೋಪಾಲ ನಾಯಕ,ರಾಜಾ ಕುಮಾರ ನಾಯಕ,ರಾಜಾ ಸುಶಾಂತ ನಾಯಕ ಅವರು ಭಾಗವಹಿಸಿ ಭಕ್ತಿ ಸಮಪಿಸಿದರು.ಅಲ್ಲದೆ ಸುರಪುರ ಸಂಸ್ಥಾನದ ರಾಜಗಾನ ವತಂದಾರರಾದ ಉಸ್ತಾದ ವಜಾಹತ್ ಹುಸೇನ,ದರ್ಗಾ ಕಮಿಟಿ ಅಧ್ಯಕ್ಷ ಡಾ. ಸಯ್ಯದ್ ಮೀರ್ ಮಹಮದ್ ಅಲಿ, ಮಹೆಬೂಬ ಖಾನ್ ಕಲಬುರ್ಗಿ,ಸಯ್ಯದ್ ಜಾಕೀರ ಅಹ್ಮದ್,ಸಯ್ಯದ್ ಚುನ್ನುಮೀಯಾ ಶಹಾಪುರ,ಇಂತಿಯಾಜ್ ಕಂಟ್ರ್ಯಾಕ್ಟರ್,ಖಾದರ್ ಬಾಷಾ ಹುಣಸಗಿ,ತಜಮುಲ್ ಶಹಾಪುರ,ಲಿಯಾಖತ್ ಹುಸೇನ,ಮುನಿರ್ ಮಿಯಾ,ಬಾಬು ಪೊಲೀಸ್ ಕಲಬುರ್ಗಿ,ಕಲಿಂ ಸೌದಾಗರ್,ಸಿಕಂದರ್ ರಾಯಚುರು,ಸೂಗುರೇಶ ಮಡ್ಡಿ,ಬಸವರಾಜ ಹುಣಸಗಿ,ರಶೀದ್ ಮೆಕಾನಿಕ್,ಅಮರಯ್ಯಸ್ವಾಮಿ ಹಸನಾಪುರ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…