ಸುರಪುರ: ನಗರದ ರಂಗಂಪೇಟೆಯ ಮಂಗಲ ಬಜಾರದಲ್ಲಿ ಸೋಮವಾರ ರಾತ್ರಿ ಕಾಮದಹನ ಮಾಡುವ ಮೂಲಕ ಹೋಳಿ ಹಬ್ಬಕ್ಕೆ ಚಾಳನೆ ನೀಡಿದರು.ಸೋಮವಾರ ಸಾಯಂಕಾಲದಿಂದ ನಗರದ ವಿವಿಧೆಡೆಗಳಿಂದ ಕಟ್ಟಿಗೆಗಳನ್ನು ತಂದು ಮಂಗಲ ಬಜಾರದ ಭಂಡಾರಿ ಪಾನ್ ಶಾಪ್ ಬಳಿಯಲ್ಲಿ ಸಂಗ್ರಹಿಸಿದ ಹಲವಾರು ಯುವಕರು ಸೋಮವಾರ ರಾತ್ರಿ ಹತ್ತು ಗಂಟೆಯ ಸುಮಾರಿಗೆ ಕಾಮಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಅಗ್ನಿ ಸ್ಪರ್ಶ ಮಾಡಲಾಯಿತು.
ಬೆಳಗಿನ ಜಾವ ಐದು ಗಂಟೆಯ ಸುಮಾರಿನ ವರೆಗೆ ಕಾಮದಹನ ನಡೆಸಿ ಬೆಳಿಗ್ಗೆ ಬೊಬ್ಬೆ ಹಾಕುತ್ತ ಕಾಮ ದಹನದ ಬೂದಿಯನ್ನು ಎರಚುವ ಮೂಲಕ ಹೋಳಿ ಆರಂಭಿಸಿ ನಂತರ ಕಾಮದಹನವಾದ ಸಂತೋಷದಲ್ಲಿ ಬಣ್ಣ ಎರಚಿ ಸಂಭ್ರಮಿಸಿದರು.
ಸೋಮವಾರ ರಾತ್ರಿಯಿಂದ ಎಲ್ಲೆಡೆ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿತ್ತು.ಯಾವುದೆ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಾಗೃತಿ ವಹಿಸಲಾಗಿತ್ತು.ರಂಗಂಪೇಟೆಯ ಹೋಳಿಯಲ್ಲಿ ಮಹಾಂತಯ್ಯಗೌಡ, ಏಳಕೋಟೆಪ್ಪ ಪುಲ್ಸೆ,ನಾಗಪ್ಪ ಗುಮ್ಮಾ,ಅಯ್ಯಪ್ಪ ಪತ್ತಾರ,ಮಹೇಶ ಗೋಗಿ,ಮಂಜುನಾಥ ಪುಲ್ಸೆ,ಸಂಗಪ್ಪ ಪುಲ್ಸೆ,ರಾಚಪ್ಪ ಜೋತಾ,ನಿಂಗಪ್ಪ ಸುಂಗಿ,ಜೆಟ್ಟೆಪ್ಪ ಕಚಕನೂರ ಸೇರಿದಂತೆ ಅನೇಕ ಜನ ಯುವಕರಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…