ಬಿಸಿ ಬಿಸಿ ಸುದ್ದಿ

ನಾರಾಯಣಸಿಂಗ್ ಬೆಂಕಿತಾತನವರ ಜನ್ಮದಿನ ತತ್ವಕ್ಕಿಂತ ಆಚರಣೆ ಮುಖ್ಯ

ಶಹಾಬಾದ: ನಗರದ ನಿಜಾಮ ಬಜಾರ ಬಡಾವಣೆಯಲ್ಲಿರುವ ವಿಭೂತಿ ಪುರುಷ ಸದ್ಗುರು ಸದಾಶಿವ ಬೆಂಕಿತಾತ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ನಾರಾಯಣಸಿಂಗ್ ಠಾಕೂರ ಬೆಂಕಿತಾತನವರ ೬೪ನೇ ಜನ್ಮದಿನೋತ್ಸವವನ್ನು ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪರಮಪೂಜ್ಯ ನಾರಾಯಣಸಿಂಗ್ ಠಾಕೂರ ಬೆಂಕಿತಾತ, ಪ್ರತಿಯೊಂದು ಜೀವಿಗೆ ಹುಟ್ಟು ಮತ್ತು ಸಾವು ಮುಖ್ಯವಲ್ಲ. ಅವನು ಬದುಕಿದ ಮೌಲ್ಯಾಧಾರಿತ ಜೀವನವೇ ಮುಖ್ಯ. ಮೌಲ್ಯಾಧಾರಿತ ಜೀವನದಿಂದ ಬದುಕಿಗೆ ಬೆಲೆ, ನೆಲೆ ಪ್ರಾಪ್ತವಾಗುತ್ತದೆ.ಇಂದು ಗೊತ್ತು ಗುರಿಯಿಲ್ಲದೇ ಉತ್ತಮ ಸಂಸ್ಕಾರ ಇಲ್ಲದೇ ಇರುವುದರಿಂದ ಜೀವನ ದುರ್ಬಲಗೊಳ್ಳುತ್ತಿದೆ.ಜಾತಿಗಿಂತ ನೀತಿ,ತತ್ವಕ್ಕಿಂತ ಆಚರಣೆ, ಮಾತಿಗಿಂತ ಕೃತಿ, ಬೋಧನೆಗಿಂತ ಸಾಧನೆ,ದಾನಕ್ಕಿಂತ ದಾಸೋಹ, ಚರಿತ್ರೆಗಿಂತ ಚಾರಿತ್ರ್ಯ ದೊಡ್ಡದು ಎಂದು ಸಂತರು,ಶರಣರು ಭೋಧಿಸಿದ್ದಾರೆ ಎಂದು ಹೇಳಿದರು.

ಸಂಜೆ ಸದಾಶಿವ ಬೆಂಕಿತಾತನವರ ಕತು ಗದ್ದುಗೆಗೆ, ಪಾದುಕೆಗಳಿಗೆ ರುದ್ರಾಭಿಷೇಕ್, ಪಂಚಾಮೃತ ಅಭಿಷೇಕ, ಬಿಲ್ವಾರ್ಚನೆ, ಮಹಾಪೂಜೆ ನಡೆಯಿತು. ಕಿರಿಯ ಪೂಜ್ಯರಾದ ಮಂಗಲಸಿಂಗ್ ಠಾಕೂರ ಬೆಂಕಿತಾತ ಅವರಿಂದ ಪೂಜ್ಯರ ಪಾದಪೂಜೆ ನಡೆಯಿತು. ಸಾವಿರಾರು ಜನ ಭಕ್ತರ ಸಮ್ಮುಖದಲ್ಲಿ ಕೇಕ್ ಕತ್ತರಿಸಲಾಯಿತು. ಭಕ್ತರು ಪೂಜ್ಯರಿಗೆ ಸತ್ಕರಿಸಿ, ದರ್ಶನಾಶೀರ್ವಾದ ಪಡೆದರು. ಮುಖಂಡರಾದ ಲೋಹಿತ್ ಕಟ್ಟಿ, ತಾಪಂ.ಮಾಜಿ ಸದಸ್ಯ ನಿಂಗಣ್ಣ ಹುಳಗೋಳ, ನಗರ ಸಭೆ ಸದಸ್ಯ ಡಾ.ಅಹ್ಮದ ಪಟೇಲ್, ಸಾಹೇಬಗೌಡ ಬೋಗುಂಡಿ, ನಾಗರಾಜ ದಂಡಾವತಿ, ರೇವಣಸಿದ್ದ ಮಾಣಿಕ, ನಾಗರಾಜ ಕಮರವಾಡಿ, ರಾಕೇಶ ಮಾಣಿಕ, ಮಲ್ಲಿಕಾರ್ಜುನ ಹಾವನೂರ, ರಾಜು ಹೊಸ್ಮನಿ, ಮಲ್ಲಪ್ಪ ಕರಗಾರ, ಸಹದೇವ ಕ್ಯಾಸಪ್ಪನಳ್ಳಿ, ದೇವೆಂದ್ರ ಅಣಕಲ್,ಭೀಮು ಮದ್ರಿ, ಸತೀಷ, ಮಾರುತಿ ಜೋಶಿ, ಲಕ್ಷ್ಮಣ ಸಿಂಗ್ ಮರತೂರ, ಗೋಪಾಲಸಿಂಗ್ ಶಹಾಪೂರ, ಬಂಕಟ್‌ಸಿಂಗ್ ಶಹಾಪೂರ, ಶಂಬುಲಿಂಗ ನಾಯ್ಕಲ್ ಸೇರಿದಂತೆ ಸಾವಿರಾರು ಜನ ಭಕ್ತರು ಪಾಲ್ಗೊಂಡರು. ಮಹಾಪ್ರಸಾದ ವಿತರಣೆ, ಅಹೋರಾತ್ರಿ ಭಜನೆ ಕಾರ್ಯಕ್ರಮ ನಡೆಯಿತು.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

30 seconds ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

10 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

10 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

10 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago