ಕಲಬುರಗಿ: ರಾಜ್ಯದಲ್ಲಿನ ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರಿ ಯೋಜನೆಗಳನ್ನು ತಲುಪಿಸುವ ಮೂಲಕ ಅವರು ಸ್ವಾಭಿಮಾನ ಬದುಕು ಸಾಗಿಸಲು ಆರಂಭಿಕ ಹಂತವಾಗಿ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ಕೈಗೊಳ್ಳಲು ಪ್ರಸಕ್ತ ೨೦೨೦-೨೦೨೧ ಸಾಲಿನ ಅಯವ್ಯಯದಲ್ಲಿ ೭೦ ಲಕ್ಷ ರೂ. ಅನುದಾನ ಘೋಷಿಸಿದ್ದು, ಶೀಘ್ರದಲ್ಲಿಯೇ ಸಮೀಕ್ಷೆ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ವಿ. ಟೆಂಗಳಿ ಹೇಳಿದರು.
ಗುರುವಾರ ಇಲ್ಲಿನ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಲಿಂಗ ಅಲ್ಪಸಂಖ್ಯಾತರಿಂದಲೆ ಸಮೀಕ್ಷೆ ಕೈಗೊಳ್ಳಲು ಉದ್ದೇಶಿಸಿದೆ. ಇದಕ್ಕಾಗಿ ಅವರಿಂದ ಅಧಾರ್ ಕಾರ್ಡ್ ಪಡೆಯಲಾಗುತ್ತದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ನಿಗಮದಿಂದಲೆ ಎಲ್.ಐ.ಸಿ. ಮಾದರಿಯ ವಿಮಾ ಯೋಜನೆಗಳನ್ನು ಜಾರಿಗೊಳಿಸುವ ಚಿಂತನೆ ನಡೆಸಿದ್ದು, ಈ ಸಂಬಂಧ ಅಧಿಕಾರಿಗಳೊಂದಿಗೆ ಪ್ರಾಥಮಿಕ ಹಂತದ ಸಭೆ ನಡೆಸಲಾಗಿದೆ. ಪ್ರಸಕ್ತ ೨೦೨೦-೨೦೨೧ ಸಾಲಿನ ಅಯವ್ಯಯದಲ್ಲಿ ನಿಗಮಕ್ಕೆ ೧೭೧ ಕೋಟಿ ರೂ. ಅನುದಾನ ಒದಗಿಸಲಾಗಿದೆ. ನಿಗಮದಿಂದ ೨೮೦ ಕೋಟಿ ರೂ. ಅನುದಾನದ ಬೇಡಿಕೆ ಇಡಲಾಗಿತ್ತು. ಈಗ ಮೀಸಲಿಟ್ಟಿರುವ ಅಷ್ಟು ಅನುದಾನವನ್ನು ಶೇ.೧೦೦ರಷ್ಟು ಖರ್ಚು ಮಾಡಲು ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದರು.
೨೦೦೭-೦೮ನೇ ಸಾಲಿನ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ೪೬೬೬೦ ಮಾಜಿ ದೇವದಾಸಿಯರಿದ್ದು, ಜಿಲ್ಲೆಯಲ್ಲಿ ಇದರ ಸಂಖ್ಯೆ ೧೪೬೬ ಇದೆ. ದೇವದಾಸಿ ಪುನರ್ವಸತಿ ಯೋಜನೆಯಡಿ ಆದಾಯೋತ್ಪನ್ನಕರ ಚಟುವಟಿಕೆಯಡಿ ತರಕಾರಿ-ಹಣ್ಣು ಅಂಗಡಿ, ಕಿರಾಣಾ ಅಂಗಡಿ, ಗುಡಿ ಕೈಗಾರಿಕೆ ಕೈಗೊಳ್ಳಲು ನಿಗಮದಿಂದ ೧ ಲಕ್ಷ ರೂ. ಬಡ್ಡಿ ರಹಿತ ಸಾಲ ನೀಡಲಾಗುತ್ತಿದೆ. ಇದರಲ್ಲಿ ತಲಾ ೫೦ ಸಾವಿರ ರೂ. ಸಹಾಯಧನ ಮತು ಬಡ್ಡಿರಹಿತ ಸಾಲ ಸೇರಿರುತ್ತದೆ. ಈ ಯೋಜನೆಯಡಿ ೨೦೧೯-೨೦ನೇ ಸಾಲಿನಲ್ಲಿ ೫೮೯ ಭೌತಿಕ ಗುರಿ ಪೈಕಿ ಜನವರಿ-೨೦೨೦ರ ಅಂತ್ಯಕ್ಕೆ ೪೪೦ ಜನರಿಗೆ ಸಾಲ ನೀಡಲಾಗಿದೆ. ೮೩೦ ಲಕ್ಷ ರೂ. ಅನುದಾನದಲ್ಲಿ ೬೨೨.೫೦ ಲಕ್ಷ ರೂ. ವ್ಯಯ ಮಾಡಿದೆ ಎಂದು ಶಶಿಕಲಾ ಟೆಂಗಳಿ ವಿವರಿಸಿದರು.
ಮಾಜಿ ದೇವದಾಸಿಯರಿಗೆ ವಸತಿ ಕಲ್ಪಿಸಲು ಕಲಬುರಗಿ ಜಿಲ್ಲೆಯಲ್ಲಿ ೫ ಎಕರೆ ಜಮೀನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕೋರಲಾಗಿದೆ. ತಮ್ಮ ಅವಧಿಯಲ್ಲಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ತಾವು ಅಧಿಕಾರ ವಹಿಸಿದ ಕಳೆದ ಎರಡು ತಿಂಗಳ ಅವಧಿಯಲ್ಲಿ ಸಮೃಧ್ಧಿ ಯೋಜನೆಯಡಿ ಜಿಲ್ಲೆಯ ೧೧೨ ಫಲಾನುಭವಿಗಳನ್ನು ಮತ್ತು ಕಿರುಸಾಲ ಯೋಜನೆಯಡಿ ೧೧೯ ಫಲಾನುಭವಿಗಳನ್ನು ಆಯ್ಕೆಗೆ ಪರಿಗಣಿಸಲಾಗಿದೆ. ಬಡ್ಡಿರಹಿತ ಕಿರುಸಾಲ ೧೫-೨೦ ಲಕ್ಷ ರೂ.ಗೆ ಹೆಚ್ಚಳ: ಸ್ತ್ರೀ ಶಕ್ತಿ ಸ್ವ-ಸಹಾಯ ಗುಂಪುಗಳ ಆರ್ಥಿಕ ಸಬಲೀಕರಣ್ಕಕಾಗಿ ನಿಗಮದ ಕಿರುಸಾಲ ಯೋಜನೆಯಡಿ ಪ್ರಸ್ತುತ ನೀಡಲಾಗುವ ೧ ರಿಂದ ೨ ಲಕ್ಷ ರೂ. ವರೆಗಿನ ಬಡ್ಡಿರಹಿತ ಸಾಲವನ್ನು ೧೫ ರಿಂದ ೨೦ ಲಕ್ಷ ರೂ. ವರೆಗೆ ಆಯವ್ಯಯದಲ್ಲಿ ಹೆಚ್ಚಳ ಮಾಡಲಾಗಿದೆ. ಸಾಲ ಪಡೆದು ಸ್ವಾಲಂಬನೆ ಜೀವನ ನಡೆಸುವ ಮಹಿಳೆಯರು ಮುಂದೆ ಧೈರ್ಯದಿಂದ ಬರಬೇಕಿದೆ ಎಂದು ಕರೆ ನೀಡಿದರು.
ಕೌದಿಗೆ ಬ್ರ್ಯಾಂಡ್ ನೀಡಲು ಸಿದ್ಧ: ಅಮೇರಿಕಾ ಸೇರಿದಂತೆ ಹೊರದೇಶಗಳಲ್ಲಿ ಕೈಹೊಲಿಗೆಯ ಕೌದಿಗಳಿಗೆ ತುಂಬಾ ಬೇಡಿಕೆಯಿರುವುದರಿಂದ ಗ್ರಾಮೀಣ ಮಟ್ಟದಲ್ಲಿ ಮಹಿಳೆಯರು ಸಿದ್ಧಪಡಿಸಿರುವ ಕೌದಿಗೆ ಬ್ರ್ಯಾಂಡ್ ಮತ್ತು ಉತ್ತಮ ಮಾರುಕಟ್ಟೆ ಒದಗಿಸಲು ಸಹ ಚಿಂತನೆ ನಡೆದಿದೆ ಎಂದರು.
ಎಸ್.ಸಿ.ಎಸ್.ಟಿ. ಅನುದಾನ ಕೊರತೆಯಿಲ್ಲ: ಪರಿಶಿಷ್ಠ ಜಾತಿ ಮತು ಪರಿಶಿಷ್ಠ ಪಂಗಡದ ಮಹಿಳೆಯರು ಸಣ್ಣ, ಮಧ್ಯಮ ಮತ್ತು ಬೃಹತ್ ಕಾರ್ಖಾನೆ, ಕಂಪನಿಗಳು ಸ್ಥಾಪನೆಗೆ ಮುಂದೆ ಬಂದಲ್ಲಿ ಸಾಲ ನೀಡಲಾಗುವುದು. ಇದಕ್ಕಾಗಿ ನಿಮಗದಲ್ಲಿ ಅನುದಾನ ಲಭ್ಯವಿದ್ದು, ಅನುದಾನದ ಸಮಸ್ಯೆಯಿಲ್ಲ ಎಂದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣ ಹಣಮಂತರಾಯ ಮಾಲಾಜಿ, ಕೃಷಿ ಮತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಿಡಗುಂದಾ ಜಿಲ್ಲಾ ಪಂಚಾಯತ್ ಸದಸ್ಯ ಶಿವಶರಣಪ್ಪ, ಕರ್ನಾಟಕ ರಾಜ್ಯ ಮಹಿಳಾ ನಿಗಮದ ಕಲಬುರಗಿ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಶಾಂತಲಾ ಉಪಸ್ಥಿತರಿದ್ದರು.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…