ಬಿಸಿ ಬಿಸಿ ಸುದ್ದಿ

ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಕೊರೊನಾ ಕುರಿತು ಜಾಗೃತಿ ಸಭೆ

ಸುರಪುರ: ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಕರೊನಾ ವೈರಸ್ ಕುರಿತು ಸಾರ್ವಜನಿಕರ ಸಭೆಯನ್ನು ನಡೆಸಲಾಯಿತು.

ಸಭೆಯ ನೇತೃತ್ವ ವಹಿಸಿದ್ದ ತಾಲೂಕು ಆರೋಗ್ಯಾಧಿಕಾರಿ ಡಾ. ಆರ್.ವಿ.ನಾಯಕ ಮಾತನಾಡಿ, ಇಂದು ಇಡೀ ಜಗತ್ತನ್ನೆ ತಲ್ಲಣಗೊಳಿಸಿರುವ ಕೊರೊನಾ ವೈರಸ್ ಬಗ್ಗೆ ಜನರು ಆತಂಕಗೊಂಡಿದ್ದಾರೆ.ಆದರೆ ಇದರ ಬಗ್ಗ ಭಯಪಡುವ ಬದಲು ಮುಂಜಾಗ್ರತೆ ವಹಿಸಿದರೆ ಸಾಕು. ಕೆಮ್ಮು ನೆಗಡಿ ಜ್ವರ ಬಂದರೆ ಹೆಚ್ಚು ವಿಳಂಬ ಮಾಡದೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ. ಯಾರಾದರೂ ವಿದೇಶದಿಂದ ಬಂದಿರುವಂತದ್ದು ತಮ್ಮ ಗಮನಕ್ಕೆ ಬಂದರೆ ಅವರು ವೈದ್ಯರನ್ನು ಭೇಟಿ ಮಾಡುವಂತೆ ಸಲಹೆ ನೀಡಿ.ಇಲ್ಲವಾದರೆ ನಮ್ಮ ಇಲಾಖೆಗೆ ಮಾಹಿತಿ ನೀಡಿ. ನಗರದ ರಂಗಂಪೇಟ ಬಡಾವಣೆಯ ಕುಟುಂಬವೊಂದು ಇತ್ತೀಚಿಗೆ ಸೌದಿ ಅರೆಬಿಯಾ ದಿಂದ ಬಂದಿದ್ದರ ಬಗ್ಗೆ ಮಾಹಿತಿ ತಿಳಿದು ಕೂರೊನಾ ವೈರಸ್ ಸೊಂಕು ತಗಲಿರಬಹುದು ಎಂದು ಜನರು ಆತಂಕಗೊಂಡಿದ್ದರು.ಆದರೆ ಅವರನ್ನು ತಪಾಸಣೆ ಮಾಡಿದ್ದು ಸೊಂಕು ಕಂಡುಬಂದಿಲ್ಲ.ಅದರೆ ಕೆಲ ದಿನಗಳ ಕಾಲ ಮನೆಯಲ್ಲಿಯೆ ಇರುವಂತೆ ತಿಳಿಸಲಾಗಿದೆ.ಇಲ್ಲಿಯ ಹೆಚ್ಚು ಜನ ಸೌದಿ, ದುಬೈ ಮತ್ತು ಅರಬ ರಾಷ್ಟ್ರಗಳಲ್ಲಿ ದುಡಿಮೆಗಾಗಿ ಹೋಗಿದ್ದಾg,ಅಂತವರು ಮರಳಿ ನಗರಕ್ಕೆ ಬಂದರೆ ಮಾಹಿತಿನೀಡಿ ಈ ವೈರಸ್ ಕುರಿತು ಭಯಪಡುವುದು ಬೇಡ ಆದರೆ ಎಚ್ಚರಕೆ ವಹಿಸಿದರೆ ಸಾಕು ಎಂದರು.

ಈಗಾಗಲೆ ಸರಕಾರ ಎಲ್ಲಾ ವಿಸಾಗಳನ್ನು ರದ್ದು ಮಾಡಿದೆ.ಅಲ್ಲದೆ ಎಲ್ಲಾ ಸಭೆ ಸಮಾರಂಭಗಳನ್ನು ನಡೆಸದಂತೆ ಆದೇಶ ಹೊರಡಿಸಿದೆ.ಆದರು ಮುನ್ನೆಚ್ಚರಿಕೆಯಾಗಿ ನಗರದ ಎಲ್ಲ ಮಸೀದಿಗಳ ಮೌಲ್ವಿಗಳು ಸಾಮೂಹಿಕ ಪ್ರಾರ್ಥನೆ ಸಂದರ್ಭದಲ್ಲಿ ಈ ಕುರಿತು ಜನಜಾಗೃತಿ ಮೂಡಿಸಿ.ಗ್ರಾಮೀಣ ಪ್ರದೇಶಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮತ್ತು ನಮ್ಮ ಇಲಾಖೆಯವರು ಜಾಗೃತಿ ಮೂಡಿಸುತ್ತಿದ್ದಾರೆ. ಜನರು ಕೂಡ ಹೆಚ್ಚೆಚ್ಚು ವಿಟಾಮಿನ್ ಸಿ ಇರುವ ಆಹಾರ ಮತ್ತು ಹಣ್ಣುಗಳ ಸೇವಿಸಿ,ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದರು.

ಆರಕ್ಷಕ ನಿರೀಕ್ಷಕ ಎಸ್.ಎಮ್. ಪಾಟೀಲ ಮಾತನಾಡಿ,ಕೊರೊನಾ ವೈರಸ್ ಕುರಿತು ಕೇವಲ ಇಲಾಖೆಗಳು ಮಾತ್ರವಲ್ಲದೆ ಸಾರ್ವಜನಿಕರು ಇದರ ಬಗ್ಗೆ ಜಾಗೃತಿ ಮೂಡಿಸಬೇಕು.ಅಂದಾಗ ಇದರ ಬಗ್ಗೆ ಜನರಲ್ಲಿ ಭಯ ಮೂಡದೆ ಮುನ್ನೆಚ್ಚರಿಕೆ ಕ್ರಮವಹಿಸಲು ಸಾಧ್ಯವಾಗುತ್ತದೆ.ತಾವೆಲ್ಲರು ಹೊರಗಡೆ ಹೊದಾಗ ಮಾಸ್ಕ್ ಧರಿಸಿ ಮತ್ತು ಹೆಚ್ಚೆಚ್ಚು ಕೈಗಳನ್ನು ತೊಳೆದುಕೊಳ್ಳುವ ಮೂಲಕ ವೈರಸ್ ಸೊಂಕು ತಗುಲದಂತೆ ಇರುವಂತೆ ತಿಳಿಸಿದರು.

ನಂತರ ಅನೇಕ ಜನ ಸಾರ್ವಜನಿಕರು ಮಾತನಾಡಿ,ನಗರದಲ್ಲಿ ಸ್ವಚ್ಛತೆಯಿಲ್ಲ.ಎಲ್ಲೆಂದರಲ್ಲಿ ಬಿದ್ದ ಕಸದಿಂದ ಸೊಳ್ಳೆಗಳು ಹರಡುತ್ತಿವೆ.ಆದ್ದರಿಂದ ಎಲ್ಲೆಡೆ ಬ್ಲೀಚಿಂಗ್ ಸಿಂಪಡಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.ಟಿಹೆಚ್‌ಒ ಮಾತನಾಡಿ ಇದರ ಕುರಿತು ನಗರಸಭೆ ಮತ್ತು ಗ್ರಾಮ ಪಂಚಾಯತಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ಪ್ರಮುಖರಾದ ಉಸ್ತಾದ ವಜಾಹತ್ ಹುಸೇನ್,ಶೇಖ್ ಲಿಯಾಖತ್ ಹುಸೇನ್ ಉಸ್ತಾದ,ಖಾಜಾ ಸಮೀರ್ ರಹೆಮನ್ ಅನ್ಸಾರಿ, ಖಲೀಲ್ ಅಹ್ಮದ್ ಅರಕೇರಿ, ಲಿಯಾಕತ್ ಹುಸೇನ್, ಮೌಲಾಲಿ ಸೌದಾಗರ್, ಅಬ್ದುಲ್ ಮಜೀದ್, ಮುಫ್ತಿ ಇಕ್ಬಾಲ ಅಹಮದ್ ಒಂಟಿ, ಖಾಲಿದ ಅಹ್ಮದ್ ತಾಳಿಕೋಟಿ, ಹುಸೇನ್ ಭಾಷಾ ಇಲಕಲ್, ಶಕೀಲ್ ಅಹ್ಮದ್ ಖುರೇಶಿ, ಇರ್ಷಾದ್ ಮೌಲಾನಾ, ಅನ್ವರ ಜಮಾದಾರ್ ಸುರಪುರ, ಅಬಿದಿ ಪಗಡಿ,ಭಕ್ತಿಯಾರ್ ರಹೆಮಾನ್,ಅಮ್ಜಾದ್ ಹುಸೇನ್,ಅಬ್ದುಲ್ ರೌಫ್ ಮತ್ತು ಎಲ್ಲಾ ಮಸೀದಿಯ ಮೌಲ್ವಿಗಳು ಹಾಗೂ ಪ್ರಮುಖರು ಭಾಗವಹಿಸಿದ್ದರು

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

4 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

4 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

4 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

23 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago