ಆಯುರ್ವೇದ ಹಿರಿಯ ತಜ್ಞ ವೈದ್ಯರು ಕಲಬುರ್ಗಿ. (ಹಲವಾರು ನಾಗರಿಕ ಬಂಧುಗಳು ಕರೆ ಮಾಡಿ ತಮ್ಮ ಪ್ರಶ್ನೆಗಳನ್ನು ಕೇಳಿರುತ್ತಾರೆ.ಜನರಿಗೆ ತಿಳುವಳಿಕೆ ಮತ್ತು ಸಹಾಯವಾಗಲೆಂದು ಇ-ಮೀಡಿಯಾ ಲೈನ್ ಓದುಗರಿಗೆ)
ಕೆರೋನಾ ವೈರಸ್ ಭಯಂಕರ ಸಾಂಕ್ರಾಮಿಕ ರೋಗದ ಸೋಂಕು ಜಗತ್ತಿನೆಲ್ಲೆಡೆ ಆತಂಕವನ್ನು ಸೃಷ್ಟಿಸಿದ್ದು ಜೀವಭಯವನ್ನು ಹುಟ್ಟಿಸಿದೆ. ಸಾಮಾನ್ಯವಾಗಿ ಈ ಫ್ಲುನಲ್ಲಿ ಗಂಟಲು ಕೆರೆತ, ಸೀನು,ಕಣ್ಣು-ಮೂಗಿನಿಂದ ನೀರು ಸೋರುವುದು,ತಲೆನೋವು,ನೆಗಡಿ,ಕೆಮ್ಮು,ಜ್ವರ,ಸುಸ್ತು ಅಶಕ್ತತೆ,ಮೈಕೈ ನೋವು ಲಕ್ಷಣಗಳನ್ನು ಹೊಂದಿರುತ್ತದೆ.ಈ ರೋಗವು ಬಹಳ ಶೀಘ್ರವೇ ಒಬ್ಬರಿಂದ ಇನ್ನೊಭ್ಬರಿಗೆ ಹರಡುತ್ತದೆ. ಇದನ್ನು ಆಯುರ್ವೇದದಲ್ಲಿ ಶ್ಲೇಷ್ಮಿಕ ವಾತ ಜ್ವರ, ದುಷ್ಟ ಪ್ರತಿಷಾಯ ಎನ್ನುತ್ತಾರೆ.
ಕೊರೋನಾ ವೈರಸ್ ಸೋಂಕನ್ನು ಗುರ್ತಿಸಬೇಕಾದರೆ ಗಂಟಲು ದ್ರವದ ಹಾಗೂ ರಕ್ತ ಮಾದರಿಯ ಪರೀಕ್ಷೆ ಮಾಡಿಸುವುದು ಅವಶ್ಯ.ಆದ್ದರಿಂದ ಮೇಲಿನ ಯಾವುದೇ ಜ್ವರದೊಂದಿಗೆ ಈ ಲಕ್ಷಣಗಳು ಕಂಡುಬಂದಲ್ಲಿ ಮೊದಲು ವೈದ್ಯರನ್ನು ಕಂಡು ಪರೀಕ್ಷಿಸಿಕೊಳ್ಳಬೇಕು.
ಕೊರೋನಾ ವೈರಸ್ ತಗುಲಿದ ವ್ಯಕ್ತಿ ಸೀನಿದರೆ ,ಸ್ಪರ್ಶಿಸಿದರೆ,ಕೆಮ್ಮಿದಾಗ ಅವರ ಹತ್ತಿರವಿದ್ದವರಿಗೆ ತಗಲುವುದು. ಸೋಂಕಿತ ವ್ಯಕ್ತಿಯ ಹಸ್ತ ಲಾಘವ,ಆಲಿಂಗನ,ರೋಗಿಯ ವಸ್ತ್ರ ಸ್ಪರ್ಶದಿಂದ, ಕಫ ಶ್ವಾಸದ ಮಾದ್ಯಮದಿಂದ ಆರೋಗ್ಯವಂತ ವ್ಯಕ್ತಿಗೆ ಬರುತ್ತದೆ.
ರೋಗವನ್ನು ತಕ್ಷಣ ಹಿಡಿತದಲ್ಲಿ ತರದಿದ್ದರೆ ಇದು ಭಯಂಕರ ಪರಿಣಾಮವನ್ನುಂಟು ಮಾಡುವುದು. ಬೇಗನೇ ತಪಾಸಣೆ ಮಾಡಿಕೊಳ್ಳದಿದ್ದರೆ ಶ್ವಾಸಕೋಷಗಳಿಗೆ ಸೋಂಕು ತಗುಲಿ ನ್ಯುಮೋನಿಯಾದಂತಹ ಗಂಭೀರ ಕಾಯಿಲೆ ಬರುತ್ತವೆ.ಇದರಲ್ಲಿ ಉಸಿರಾಟಕ್ಕೆ ತೊಂದರೆ,ಕೆಮು,ಜ್ವರ, ಎದೆ ಭಾಗ,ಪುಪ್ಪಸ ,ಪಕ್ಕೆಲುಬುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಸೋಂಕು ಪಚನಕ್ರಿಯಾ ಅಂಗಾಂಗಳಿಗೆ ತಗುಲಿದರೆ ಭೇದಿ,ವಾಂತಿ, ಉಬ್ಬಳಿಕೆ ಬರುವುದು, ನೀರಡಿಕೆ ಅತಿಯಾಗಿ ಆಗುವುದು. ಯಾವ ಅಂಗಾಂಗಗಳನ್ನು ಈ ಸೋಂಕು ಆವರಿಸುತ್ತದೋ ಆ ಅಂಗಾಂಗಗಳು ಕಾರ್ಯನಿರ್ವಹಿಸುವದನ್ನು ನಿಲ್ಲಿಸುತ್ತವೆ.
ಮುನ್ನೆಚ್ಚರಿಕೆ ಕ್ರಮಗಳು: ಪರಸ್ಪರ ಬೇಟಿಯಾಗುವಾಗ ೨ ಮೀಟರ್ ಅಂತರವಿರಲಿ. ಮೇಲಿಂದಮೇಲೆ ವಸ್ತುಗಳನ್ನು ಮುಟ್ಟಿದಾಗ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು. ಸೋಂಕಿತರು ಪ್ರತ್ಯೇಕ ಕೊಠಡಿಯಲ್ಲಿ ವಾಸಿಸಬೇಕು ,ಅವರು ಪ್ರತ್ಯೇಕವಾಗಿರಬೇಕು. ಅವರಿಂದ ಮಕ್ಕಳು,ವೃದ್ಧರು ದೂರವಿರಬೇಕು. ಅವರನ್ನು ಮತ್ತು ಅವರ ವಸ್ತುಗಳನ್ನು ಯಾರೂ ಉಪಯೋಗಿಸಬಾರದು.ಕಂಡಕಂಡಲ್ಲಿ ಉಗುಳಬಾರದು, ತಂಪು ಗಾಳಿಯಿಂದ ದೂರವಿರಬೇಕು.ತಂಪು ಪಾನಿಯ,ಐಸ್ಕ್ರೀಮ್,ಎಣ್ಣೆಯಲ್ಲಿ ಕರಿದಂತಹ ಆಹಾರ,ಪಿಜ್ಜಾ ಬರ್ಗರ್ ಸೇವಿಸಬಾರದು. ಮುಂಚೆ ತಯಾರಿಸಿ ಪ್ಯಾಕ್ ಮಾಡಿ ಮಾರಟಕ್ಕಿಟ್ಟ ಆಹಾರ ಪದಾರ್ಥ ಸೇವನೆ ಹಿತಕರವಲ್ಲ. ಮಧುಮೇಹ,ಹೃದಯರೋಗ,ಕ್ಯಾನ್ಸರ್,ಕಿಡ್ನಿಯ ತೊಂದರೆ ಇರುವ,ಉಬ್ಬಸವಿರುವಂತಹವರು,ಇತರೆ ರೀತಿಯ ಅನಾರೋಗ್ಯದಿಂದ ಬಳಲುತ್ತಿರುವವರು ಎಚ್ಚರಿಕೆ ವಹಿಸಬೇಕು.
ಸೋಂಕು ತಗುಲಿದ ರೋಗಿಗೆ ಬಿಸಿ ಆಹಾರ,ಬಿಸಿ ನೀರನ್ನೇ ಕುಡಿಯಲು ಕೊಡಬೇಕು. ಪಚನಕ್ಕೆ ಸರಳವಾಗಿರುವ ಮತ್ತು ಪೌಷ್ಠಿಕವಾದ ಆಹಾರವನ್ನೇ ಕೊಡಬೇಕು.ಮಲಬದ್ಧತೆ ಆಗದಂತೆ ಮುನ್ನೆಚ್ಚರಿಕೆವಹಿಸಬೇಕು.ಮಲಬದ್ದತೆ ಇದ್ದರೆ ಮೃದುವಿರೇಚಕ ತೆಗೆದುಕೊಳ್ಳಬೇಕು.
ನಮ್ಮ ಪುಪ್ಪಸಗಳು ಮತ್ತು ಲಿವರ್‌ಗಳ ಸರಿಯಾದ ಕಾರ್ಯನಿರ್ವಹಣೆಯಿಂದ ರೋಗ ಪ್ರತಿರೋಧಕ ಶಕ್ತಿ ಚನ್ನಾಗಿರುತ್ತದೆ. ಎಲ್ಲಿಯವರೆಗೆ ರೋಗ ಪ್ರತಿರೋಧಕ ಶಕ್ತಿ ಚನ್ನಾಗಿರುತ್ತದೆಯೋ ಅಲ್ಲಿಯವರೆಗೆ ಸಾರ್ಸ,ಎಚ್೧ಎನ್೧ ,ಕೊರೋನಾದಂತಹ ವೈರಾಣುಗಳ ಸೋಂಕು ನಮ್ಮ ದೇಹಕ್ಕೆ ತಗಲುವುದಿಲ್ಲ.ಅಕಸ್ಮಾತ್ ಸೋಂಕು ತಗುಲಿದರೂ ಬೇಗನೇ ಗುಣ ಹೊಂದುವರು.
ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕಾದರೆ: ನಮ್ಮ ದಿನಚರಿಯಲ್ಲಿ ಶುಚಿತ್ವ ,ವ್ಯಾಯಾಮ,ಯೋಗ ಆಸನ,ಪ್ರಾಣಾಯಾಮ,ಸರಿಯಾದ ಆಹಾರ ವಿಹಾರಾದಿಗಳನ್ನು ಕಟ್ಟುನಿಟ್ಟಾಗಿ ರೂಢಿಸಿಕೊಳ್ಳುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನೈಸರ್ಗಿಕವಾಗಿ ಆಯುರ್ವೇದದಲ್ಲಿ ಹಲವಾರು ಗಿಡಮೂಲಿಕೆಗಳ ಉಪಯೋಗದಿಂದ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಮತ್ತು ಕಂಡುಬರುವ ಲಕ್ಷಣವನ್ನು ಹೋಗಲಾಡಿಸುವಂತಹ ಅನೇಕ ವನಸ್ಪತಿ ದ್ರವ್ಯಗಳ ಉಪಯೋಗವನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಯೋಣ.
೧) ಗ್ಲಾಸು ಬಿಸಿನೀರಿನಲ್ಲಿ ಒಂದು ಚಮಚ ಬಳ್ಳೊಳ್ಳಿ ರಸ,೨ ಚಮಚ ಈರುಳ್ಳಿ ರಸ,೧ಚಮಚ ಹಸಿ ಶುಂಠಿ ರಸ,೧ ಗ್ಲಾಸ್ ಕಾಯಿಸಿದ ಬಿಸಿನೀರಿನಲ್ಲಿ ಬೆರೆಸಿ ನಿಧಾನವಾಗಿ ಚಹಾದ ರೀತಿಯಲ್ಲಿ ಸೇವಿಸಬೇಕು.ಪ್ರವಾಸದಲ್ಲಿರುವಾಗ ಬಳ್ಳೊಳ್ಳಿ ಪಳಕ ಬೆಲ್ಲದೊಂದಿಗೆ ದಿನಕ್ಕೆ ೩ ಸಲ ಸೇವಿಸುತ್ತಿರಬೇಕು.
೨) ಒಂದು ಗ್ಲಾಸು ಬಿಸಿ ಹಾಲಿನಲ್ಲಿ ಗಿರ್ದ ಚಮಚ ಅರಿಷಿಣ ಹಾಕಿ ಪ್ರತಿನಿತ್ಯ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ,ಅಲರ್ಜಿ ಇದ್ದರೂ ದೂರಾಗುತ್ತದೆ.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
View Comments
ಕೊರೋನ ವೈರಸ್‌ದಿಂದ ಪಾರಾಗಲು ಆಯುರ್ವೇದ ಮುನ್ನೆಚ್ಚರಿಕೆ ಕ್ರಮಗಳು ಇ-ಮೀಡಿಯಾ ಲೈನ್ ಓದುಗರಿಗೆ - ಇ ಮೀಡಿಯಾ ಲೈನ್
anpjzfwhshx
npjzfwhshx http://www.gu21q0ljo75yu3jo4k78912dyw6y9f98s.org/
[url=http://www.gu21q0ljo75yu3jo4k78912dyw6y9f98s.org/]unpjzfwhshx[/url]