ಕಲಬುರಗಿ: ಕೆಳಗೆ ಬಿದ್ದವರನ್ನು ಮೇಲಕ್ಕೆತ್ತುವುದೇ ಧರ್ಮ. ದಯೆಯೇ ಧರ್ಮದ ಮೂಲ ಎಂದು ಧರ್ಮದ ಪರಿಕಲ್ಪನೆಯನ್ನು ಸರಳೀಕರಣಗೊಳಿಸಿದ, ಸ್ಪಷ್ಟಪಡಿಸಿದ ಬಸವಾದಿ ಶರಣರು ಲಿಂಗಾಯತ ಸ್ವತಂತ್ರ ಧರ್ಮದ ನಿರ್ಮಾತೃಗಳು ಎಂದು ಲೇಖಕ, ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಅಭಿಪ್ರಾಯಪಟ್ಟರು.
ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಭಾರತೀಯ ಬಸವ ಬಳಗ, ಬಸವ ಮಾರ್ಗ ಪ್ರತಿಷ್ಠಾನ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಶರಣ ಸಾಹಿತ್ಯ ಪರಿಷತ್ ಇವುಗಳ ಸಹಯೋಗದಲ್ಲಿ ಪಟ್ಟಣದ ಬಸವ ಮಂಟಪದಲ್ಲಿ ಆಯೋಜಿಸಿದ್ದ ಶರಣ ಸಂಗಮ ಹಾಗೂ ಬಸವ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ “ಯಾವುದು ಧರ್ಮ?” ವಿಷಯ ಕುರಿತು ಮಾತನಾಡಿದ ಅವರು, ನಾವು ಎಣಿಸುವಂತೆ ಧರ್ಮಗಳು ಹಲವು ಇಲ್ಲ. ಅದು ಒಂದೇ ಆಗಿದೆ. ಅದುವೇ ಮನುಷ್ಯ ಧರ್ಮ, ಹೃದಯ ಧರ್ಮ ಎಂದು ಹೇಳಿದರು.
ಧರ್ಮ, ದೇವರ ಹೆಸರಿನಲ್ಲಿ ವ್ರತ, ನೇಮ, ಹರಕೆ ತೀರಿಸುವ ಹಾಗೂ ಭಯ ಹುಟ್ಟಿಸುವ ವೈದಿಕ ಧರ್ಮ ಅಸ್ತ್ರವನ್ನು ಬಯಲಿಗಿಟ್ಟ ಬಸವಣ್ಣನವರು ಶಾಸ್ತ್ರ-ಪುರಾಣಗಳು ಜನವಿರೋಧಿ, ಜೀವವಿರೋಧಿಯಾಗಿದ್ದು ಧರ್ಮ ಪಾಲನೆಯಿಂದ ಬದುಕು ಗಟ್ಟಿಯಾಗಬೇಕು ವಿನಃ ಧರ್ಮ ಪಾಲನೆಯಿಂದ ಬದುಕು ಹಾಳಾಗಬಾರದು ಎಂಬುದನ್ನು ಅರಿತಿದ್ದರು. ಅಂತೆಯೇ ಲಿಂಗಾಯತ ಎಂಬ ಸರ್ವೋದಯದ ಸ್ವತಂತ್ರ ಧರ್ಮ ಸ್ಥಾಪನೆ ಮಾಡಿದರು ಎಂದು ತಿಳಿಸಿದರು. ಯಾವ ಕಾಲದ ಶಾಸ್ತ್ರ ಏನು ಹೇಳಿದರೇನು? ಎದೆಯ ದನಿಗೂ ಮಿಗಿಲಾವ ಶಾಸ್ತ್ರ? ರಾಷ್ಟ್ರಕವಿ ಕುವೆಂಪು ಪ್ರಶ್ನಿಸಿದ್ದಾರೆ ಎಂದರು.
ದಲಿತರ ಧ್ವನಿಯಾಗಿ, ಬಡವರ ಬಂಧುವಾಗಿ, ಜಗದಣ್ಣ ಎಂಬ ಪ್ರೀತಿಗೆ ಪಾತ್ರರಾಗಿರುವ ಬಸವಣ್ಣನವರ ವಚನವಿಚಾರಗಳಿಂದ ಸಮಕಾಲೀನ ಬದುಕನ್ನು ಸಹ ಸಾರ್ಥಕಪಡಿಸಿಕೊಳ್ಳಬಹುದು. ಬದುಕಿಗೆ ಪೂರಕವಾದ ತತ್ವ, ಸತ್ವಗಳು ಬಸವಾದಿ ಶರಣರ ವಚನಗಳಲ್ಲಿವೆ. ಕೇವಲ ಕೆಲವರ ಸ್ವತ್ತಾಗಿದ್ದ ಧರ್ಮವನ್ನು ಸಾಮಾನ್ಯರ ಸ್ವತ್ತನ್ನಾಗಿ ಮಾಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ.
ಅಧ್ಯಕ್ಷತೆ ವಹಿಸಿದ್ದ ಸಂಗಣ್ಣ ಗುಳಗಿ ಮಾತನಾಡಿ, ಧರ್ಮದ ಹೆಸರು ಹೇಳಿ ಜನರನ್ನು ಸುಲಿಗೆ, ಮೋಸ ಮಾಡುವುದು ನಮ್ಮ ಧರ್ಮವಾಗಬಾರದು. ಕಾಯಕವೇ ನಮ್ಮ ಧರ್ಮವಾಗಬೇಕು. ಪ್ರೀತಿ, ಕರುಣೆ, ಸಮತೆ,ಸೈರಣೆಯೇ ನಮ್ಮ ಧರ್ಮವಾಗಬೇಕು. ಹಿಂದು, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಜೈನ್, ಶಿಖ್ ಎಂಬ ಹೆಸರಿನ ಧರ್ಮಗಳು ಬೇರೆ ಬೇರೆಯಾಗಿ ಕಂಡರೂ ಅವುಗಳ ಭಾವ ಒಂದೇ ಆಗಿದೆ ಎಂದು ವಿವರಿಸಿದರು.
ಅಫಜಲಪುರ ವಲಯ ಅರಣ್ಯಾಧಿಕಾರಿ ವಿಶ್ವನಾಥ ಕೋರನಳ್ಳಿ ಉದ್ಘಾಟಿಸಿದರು. ಸ್ತ್ರೀ ಶಕ್ತಿ ಸಂಘದ ತಾಲ್ಲೂಕು ಕಾರ್ಯದರ್ಶಿ ಸಿದ್ದಮ್ಮಗೌಡತಿ ನಿಂಗನಗೌಡ ಮಾಲಿಪಾಟೀಲ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ಪ್ರಸಾದ ಸೇವೆಗೈದ ಪುರಸಭೆ ಸದಸ್ಯ ಯಮನಪ್ಪ ಭಾಸಗಿ ಅವರನ್ನು ಸನ್ಮಾನಿಸಲಾಯಿತು.
ಮುರುಗೇಂದ್ರ ಮಸಳಿ ನಿರೂಪಿಸಿದರು. ಡಾ. ನೀಲಾಶ್ರೀ ಅಮೃತರಾವ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಸಂತೋಷ ಕಾಮಶೆಟ್ಟಿ ಹಾಗೂ ಸಂಗಡಿಗರು ವಚನ ಪ್ರಾರ್ಥನೆ ಮಾಡಿದರು. ಆರತಿ ಶ್ರೀಶೈಲ ಕಾಳಿ ಸ್ವಾಗತಿಸಿದರು. ರಾವುತರಾಯ ಭಿಂಗೋಳಿ ಶರಣು ಸಮರ್ಪಿಸಿದರು. ಸದಾಶಿವ ಮೇತ್ರೆ, ಬಸಣ್ಣ ಗುಣಾರಿ, ಶ್ರೀಮಂತ ಬಿರಾದಾರ, ಮಹೇಶ ಅಲೇಗಾಂವ, ರಾಜು ನಿರೋಣಿ, ಶಂಕರರಾವ ಹುಲ್ಲೂರ ಇತರರು ಭಾಗವಹಿಸಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…