ಕಲಬುರಗಿ: ಸಂಸಾರ ಮೋಕ್ಷಕ್ಕೆ ಅಡ್ಡಿ ಎಂದು ಎಲ್ಲ ಧರ್ಮಗಳು ಹೇಳಿದರೆ, ಕುಟುಂಬ ವ್ಯವಸ್ಥೆ ಕಲ್ಪಿಸಿದವರು ಬಸವಾದಿ ಶರಣರು ಎಂದು ಶರಣ ಸಂತೋಷ ಹೂಗಾರ ಅಭಿಪ್ರಾಯಪಟ್ಟರು.
ನಗರದ ಅಪ್ಪ ಗಾರ್ಡನ್ ಪಕ್ಕದ ಜನತಾ ಲೇಔಟ್ ನ ಸಿದ್ಧಾರೂಢ ಮಠದ ಬಳಿ ಇರುವ ಹೋಟೆಲ್ ಪೂರ್ಣಾನಂದ ಪ್ಯಾರಡೈಸ್ ನಲ್ಲಿ ಹಮ್ಮಿಕೊಂಡ ಶರಣ ಸೋಮಶೇಖರ ಚಿನಮಳ್ಳಿ ಬರೆದ ಲಿಂಗ ಸಂದೇಶ ಗ್ರಂಥ ಜನಾರ್ಪಣೆ ಹಾಗೂ ಶರಣ ಸಂಗಮ ಕಾರ್ಯಕ್ರಮದಲ್ಲಿ ಶರಣರ ದೃಷ್ಟಿಯಲ್ಲಿ ದಾಂಪತ್ಯ ಜೀವನ ವಿಷಯ ಕುರಿತು ಮಾತನಾಡಿದ ಅವರು, ಹೆಣ್ಣು, ಹೊನ್ನು, ಮಣ್ಣು ಬದುಕಿಗೆ ಅಡ್ಡಿಯಾಗುವುದಿಲ್ಲ.
ಸಂಸಾರದಲ್ಲಿದ್ದು ಸಾಧನೆ ಮಾಡಬೇಕು ಎಂದು ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಹೇಳುತ್ತಾರೆ ಎಂದು ಹೇಳಿದರು. ಸಾತ್ವಿಕ ಮಾರ್ಗ ದಲ್ಲಿ ಸಂಸಾರ ಸಾಗಿಸಬೇಕು ಎಂದು ಹೇಳಿದ ಶರಣರು ಪ್ರಕೃತಿ ಸಹಜ ಪಂಚೇಂದ್ರೀಯಗಳ ನಿಗ್ರಹ ಸರಿಯಲ್ಲ ಎಂದು ಬಸವಣ್ಣನವರು ಅಂದೇ ತಿಳಿಸಿದ್ದಾರೆ ಎಂದು ತಿಳಿಸಿದರು.
ವಚನ ಸಾಹಿತ್ಯದ ಆಧಾರದಲ್ಲಿ ಸಂಸಾರವೆಂಬ ಶರಧಿ ದಾಟಬೇಕು. ಉಂಡು ಉಪವಾಸಿಯಾಗಬೇಕು ಬಳಸಿ ಬ್ರಹ್ಮಚಾರಿಯಾಗಬೇಕು ಎಂದು ಶರಣರು ಮಾರ್ಗದರ್ಶನ ಮಾಡಿದ್ದಾರೆ ಎಂದರು. ಸತಿ ಪತಿಗಳೊಂದಾದ ಭಕ್ತಿ ಹಿತವಾಗಿಪ್ಪದು ಎನ್ನುವಂತೆ ದಾಂಪತ್ಯ ಜೀವನ ನಡೆಸಬೇಕು ಎಂದರು. ಬಸವ ಕೇಂದ್ರದ ಜಿಲ್ಲಾಧ್ಯಕ್ಷ ಶಿವಶರಣರಪ್ಪ ಕಲಬುರಗಿ ವಹಿಸಿದ್ದರು. ಬಸವ ಸಮಿತಿ ಜಿಲ್ಲಾಧ್ಯಕ್ಷೆ ಡಾ. ವಿಲಾಸವತಿ ಖೂಬಾ, ಸೋಮಶೇಖರ ಚಿನಮಳ್ಳಿ ದಂಪತಿ ವೇದಿಕೆಯಲ್ಲಿದ್ದರು.
ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯದರ್ಶಿ ರವೀಂದ್ರ ಶಾಬಾದಿ, ಶರಣೆ ನಳಿನಿ ಮಹಾಗಾಂವಕರ ವೇದಿಕೆಯಲ್ಲಿದ್ದರು. ಗ್ರಂಥ ಕುರಿತು ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರೊ. ಕುಪೇಂದ್ರ ಪಾಟೀಲ ಮಾತನಾಡಿದರು. ಅನಿಲಕುಮಾರ ಚಿನಮಳ್ಳಿ ಸ್ವಾಗತಿಸಿದರು. ಮಲ್ಲಣ್ಣ ನಾಗರಾಳ ನಿರೂಪಿಸಿದರು.
ಡಾ. ಕರಣಕುಮಾರ ಚಿನಮಳ್ಳಿ ಶರಣು ಸಮರ್ಪಣೆ ಮಾಡಿದರು. ಸೋಮಣ್ಣ ನಡಕಟ್ಟಿ, ಬಸವರಾಜ ದೂಳಾಗುಂಡಿ, ಚಂದ್ರಶೇಖರ ಮುಗುಳಿ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…