ಸುರಪುರ: ತಾಲೂಕಿನ ಭೈರಿಮಡ್ಡಿ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕ ಹಾಗು ಆರೋಗ್ಯ ಇಲಾಖೆಯ ಸಹಕಾರದಲ್ಲಿ ಕೊರೊನಾ ವೈರಸ್ ಕುರಿತು ಜಾಗೃತಿ ಸಭೆ ನಡೆಸುವ ಜೊತೆಗೆ ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್‌ಗಳನ್ನು ವಿತರಿಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ಸುರಪೂರ ತಾಲ್ಲೂಕ ಆರೋಗ್ಯ ಇಲಾಖೆಯ ಸಹಾಯಕಿ ಸ್ವಪ್ನಾ ಮಾತನಾಡಿ. ಕೊರೊನಾ ಇದೊಂದು ಸಾಂಕ್ರಾಮಿಕ ರೋಗವಾಗಿದ್ಧು ಗ್ರಾಮಸ್ಥರು ಯಾವುದೇ ಭಯಪಡುವ ಅಗತ್ಯವಿಲ್ಲ. ಕೆಮ್ಮು ನೆಗಡಿ ಜ್ವರ ಇದರ ಲಕ್ಷಣಗಳಾಗಿದ್ದು ಇಂತಹ ಲಕ್ಷಣ ಕಂಡು ಬಂದವರು ತಕ್ಷಣ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಕೆಮ್ಮುವಾಗ ಶೀನುವಾಗ ಮತ್ತೊಬ್ಬರಿಗೆ ಸೋಂಕು ಹರಡದಂತೆ ಮುಖಕ್ಕೆ ಬಾಯಿಗೆ ಕರವಸ್ತರವನ್ನು ಇಲ್ಲವೇ ಮಾಸ್ಕಗಳನ್ನು ಬಳಸಬೇಕು. ಪ್ರತಿದಿನ ಬಿಸಿ ಬಿಸಿಯಾದ ಸ್ವಚ್ಛ ಆಹಾರವನ್ನು ಸೇವಿಸಬೇಕು .ಮಾಂಸಹಾರವನ್ನು ಸೇವಿಸುವವರು ಚನ್ನಾಗಿ ಬೇಯಿಸಿದ ಆಹಾರವನ್ನು ಸೇವಿಸುವಂತೆ ತಿಳಿಸಿದರು.
ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಮನೆ ಮತ್ತು ಸುತ್ತಲಿನ ಪರಿಸರವನ್ನು ಸ್ವಚ್ಛ ವಾಗಿಟ್ಟು ಕೊಳ್ಳಬೇಕು.ನಿಮ್ಮ ಸುತ್ತಮುತ್ತ ಎಲ್ಲಿಯಾದರೂ ವಿದೇಶದಿಂದ ವ್ಯಕ್ತಿಗಳು ಬಂದಿದ್ದು ಕಂಡರೆ ತಕ್ಷಣ ನಮ್ಮ ಇಲಾಖೆಗೆ ತಿಳಿಸಬೇಕು. ಗ್ರಾಮಸ್ಥರು ಈ ರೋಗದ ಕುರಿತು ಜಾಗೃತರಾಗಿರಿ ಎಂದು ಕೊರೊನಾ ರೋಗಕ್ಕೆ ಸಂಬಂಧಿಸಿದ ಹಲವಾರು ಮಾಹಿತಿಗಳನ್ನು ತಿಳಿಸಿದರು.
ಹಸನಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಾಯಕಿ ಬಷಿರಾ ರವರು ಈ ರೋಗದ ಲಕ್ಷಣ ಹಾಗೂ ರೋಗಕ್ಕೆ ಸಂಬಂಧಪಟ್ಟ ಹಲವಾರು ಉಪಯುಕ್ತ ಮಾಹಿತಿಗಳನ್ನು ನೀಡಿದರು. ನಂತರ ಕ.ರ.ವೇ ತಾಲ್ಲೂಕು ಘಟಕದ ವತಿಯಿಂದ ಗ್ರಾಮದ ಅನೇಕ ಜನ ಕಾರ್ಮಿಕರಿಗೆ ಹಾಗೂ ವಯೋವೃದ್ಧರಿಗೆ ಮತ್ತು ಮಹಿಳೆಯರಿಗೆ ಉಚಿತವಾಗಿ ಮಾಸ್ಕಗಳನ್ನು ವಿತರಣೆ ಮಾಡಲಾಯಿತು.
ಈಸಂದರ್ಭದಲ್ಲಿ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭೀಮು ನಾಯಕ ಮಲ್ಲಿಭಾವಿ, ಶ್ರೀನಿವಾಸ ಲಕ್ಷ್ಮೀಪೂರ, ಅಂಬ್ಲಯ್ಯ ಬೇಟೆಗಾರ, ಶ್ರೀನಿವಾಸ ಡಿ.ನಾಯಕ, ಗ್ರಾ.ಪಂ ಸದಸ್ಯರಾದ ಮಲ್ಲರಡ್ಡಿ ಬನ್ನೆಟ್ಟಿ, ಮುಖಂಡರಾದ ಮಾಳಪ್ಪ ಬನ್ನೆಟ್ಟಿ, ಮಲ್ಲು ಯಾದವ, ಬಲಭೀಮ ಬೊಮ್ನಳ್ಳಿ, ದೇವಪ್ಪ ಬನ್ನೆಟ್ಟಿ, ಲಚಮಣ್ಣ ಬನ್ನೆಟ್ಟಿ ಹಾಗೂ ಆಶಾ ಕಾರ್ಯಕರ್ತೆ ಶೋಭಾ ಪತ್ತಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…