ಸುರಪುರ: ಕರ್ನಾಟಕದ ಹಿರಿಯ ಪತ್ರಕರ್ತ ಮತ್ತು ಕನ್ನಡದ ಕಟ್ಟಾಳು ನಾಡೋಜ ಪಾಟೀಲ್ ಪುಟ್ಟಪ್ಪನವರ ನಿಧನಕ್ಕೆ ನಗರದ ಕರ್ನಾಟಕ ಜರ್ನಲಿಸ್ಟ್ಸ್ ಯೂನಿಯನ್ ಕಾರ್ಯಾಲಯದಲ್ಲಿ ಶ್ರರ್ದಧಾಂಜಲಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಭಾಗವಹಿಸಿದ್ದ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಶಾಂತಪ್ಪ ಬೂದಿಹಾಳ ಮಾತನಾಡಿ,ಈ ನಾಡು ಕಂಡ ಧೀಮಂತ ಪತ್ರಕರ್ತರು ಮತ್ತು ಕನ್ನಡ ನಾಡು ನುಡಿ ನೆಲ ಜಲಕ್ಕಾಗಿ ಅವಿರತ ಹೋರಾಟ ನಡೆಸಿದ ಕೆಚ್ಚೆದೆಯ ವ್ಯಕ್ತಿ ನಾಡೋಜ ಪಾಟೀಲ್ ಪುಟ್ಟಪ್ಪನವರು.ಅವರು ಅಖೀಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾಗ ಸಮ್ಮೇಳನಕ್ಕೆ ಬಂದು ಹೋಗುತ್ತಿದ್ದ ಅಂದಿನ ಮುಖ್ಯಮಂತ್ರಿಯವರಿಗೆ,ಮುಖ್ಯಮಂತ್ರಿಗಳೆ ನೀವು ಬಂದು ನಿಮ್ಮಪಡಿಗೆ ಹೋಗುವಂತಿಲ್ಲ ನನ್ನ ಭಾಷಣ ಕೇಳಿಯೆ ಹೋಗಿ ಎಂದು ಕೂಡಿಸಿದಂತ ನೇರ ಮಾತುಗಾರರಾಗಿದ್ದರು ಎಂದರು.
ಕಸಾಪ ತಾಲೂಕು ಅಧ್ಯಕ್ಷ ಶ್ರೀನಿವಾಸ ಜಾಲವಾದಿ ಮಾತನಾಡಿ,ಕೆಲವು ವ್ಯಕ್ತಿಗಳಿಗೆ ಪ್ರಶಸ್ತಿ ಬಂದರೆ ಅವರ ಮೌಲ್ಯ ಹೆಚ್ಚುತ್ತದೆ,ಅದೇ ಕೆಲ ವ್ಯಕ್ತಿಗಳಿಗೆ ಪ್ರಶಸ್ತಿ ಕೊಟ್ಟರೆ ಪ್ರಶಸ್ತಿಯ ಮೌಲ್ಯ ಹೆಚ್ಚುತ್ತದೆ.ಅಂತಹ ಅನೇಕ ಪ್ರಶಸ್ತಿಗಳು ಲಭಿಸಿ ಪ್ರಶಸ್ತಿಗಳೆ ಮೌಲ್ಯ ಹೆಚ್ಚಿಸಿಕೊಂಡಿವೆ.ಅಂತಹ ಅಪರೂಪದ ವ್ಯಕ್ತಿ ಪಾಪುರವರು.ಅವರು ಏಳಕ್ಕು ಹೆಚ್ಚು ಪತ್ರಿಕೆಗಳಲ್ಲಿ ಕೆಲಸ ಮಾಡಿದವರು.ಕನ್ನಡ ಹೋರಾಟದಲ್ಲಿ ಮುಂಚುಣಿಯಲ್ಲಿದ್ದ ಮಹಾನ್ ಚೇತನರಾಗಿದ್ದರು ಎಂದರು.
ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ಬೈರಿಮರಡಿ ಮಾತನಾಡಿ,ಕನ್ನಡಪರ ಹೊರಾಟ ನಡೆಸುವ ನಮಗೆಲ್ಲರಿಗೂ ಪಾಟೀಲ ಪುಟ್ಟಪ್ಪನವರು ಸ್ಪೂರ್ತಿಯಾಗಿದ್ದಾರೆ.ಅವರು ನಡೆಸಿದ ಗೋಕಾಕ ಚಳವಳಿ ಇಂದಿಗೂ ನಾಡೇ ಸ್ಮರಿಸುತ್ತದೆ.ಅಂತಹ ಮಹಾನ್ ಹೋರಾಟಗಾರರನ್ನು ಕಳೆದುಕೊಂಡ ನಾಡು ಬಡವಾಗಿದೆ ಎಂದರು.
ಶೋಷಿತರ ಪರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ,ನಾನು ಒಬ್ಬ ಹೋರಾಟಗಾರನಾಗಿ ರೂಪಗೊಳ್ಳಲು ಪಾಪುವಿನ ಸ್ಪೂರ್ತಿಯೆ ಕಾರಣ,ಅವರು ಕಲಬುರ್ಗಿ ವಿಶ್ವ ವಿದ್ಯಾಲಯಕ್ಕೆ ಬಂದಾಗ ನನ್ನ ಮಾತುಗಳನ್ನು ಕೇಳಿ ಅಂದೇ ಹರಸಿದ್ದರು,ಅವರಿಂದಲೆ ವಿಶ್ವ ವಿದ್ಯಾಲಯದಲ್ಲಿ ಮೂರು ವಸತಿ ನಿಲಯಗಳು ಆರಂಭವಾಗಲು ಕಾರಣವಾಯಿತು.ಅಂತಹ ಮಹಾನ್ ವ್ಯಕ್ತಿ ನಮಗೆಂದಿಗು ಸ್ಪೂರ್ತಿ ಎಂದರು.
ಅಜೀಂ ಪ್ರೇಮಜಿ ಪೌಂಡೇಶನ್ನಿನ ಅನ್ವರ ಜಮಾದಾರ ಹಾಗು ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ದೇವಿಂದ್ರಪ್ಪ ಪತ್ತಾರ ಮಾತನಾಡಿ,ಪುಟ್ಟಪ್ಪನವರು ಕಟ್ಟಿದ ಕರ್ನಾಟಕ ವಿದ್ಯಾವರ್ಧಕ ಸಂಘ ನಾಡಿಗೆ ಹೆಸರುವಾಸಿವಾಗಿದೆ.ಅನೇಕ ಪತ್ರಿಕೆಗಳ ಸಂಪಾದಕರಾಗಿ,ಬಾಂಬೆಯಲ್ಲಿಯೂ ಪತ್ರಿಕೆಯನ್ನು ಸೇರಿ ಕೆಲಸ ಮಾಡಿದವರು.ಅವರ ಕುರಿತು ಮಾತನಾಡಲು ಪದಗಳು ಸಾಲವು,ಅಂತಹ ಮಹಾನ್ ವ್ಯಕ್ತಿ ನಮ್ಮನ್ನಗಲಿದ್ದು ದುಖದ ಸಂಗತಿಯಾಗಿದೆ ಎಂದರು.
ಸಭೆಯ ಆರಂಭದಲ್ಲಿ ಪುಟ್ಟಪ್ಪನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಎರಡು ನಿಮಿಷಗಳ ಮೌನಾಚರಣೆ ಮೂಲಕ ಶ್ರಧ್ಧಾಂಜಲಿ ಸಲ್ಲಿಸಲಾಯಿತು.ಸಭೆಯಲ್ಲಿ ಜಯಕರ್ನಾಟಕ ತಾಲೂಕು ಅಧ್ಯಕ್ಷ ರವಿ ನಾಯಕ ಬೈರಿಮಡ್ಡಿ, ಶಿವರಾಜಕುಮಾರ ಪಣೆಗಾಂವ್,ಹಣಮಂತ ನಾಯಕ,ರಾಘವೆಂದ್ರ ಭಕ್ರಿ,ಧರ್ಮರಾಜ ಹೆಗ್ಗಣದೊಡ್ಡಿ ಪತ್ರಕರ್ತರಾದ ಮಲ್ಲು ಗುಳಗಿ,ಶ್ರೀಕರ ಜೋಷಿ,ಪರಶುರಾಮ ನಾಯಕ,ಸೋಮಶೇಖರ ನರಬೊಳಿ,ಕಲೀಂ ಫರೀದಿ,ಮದನ್ ಕಟ್ಟಿಮನಿ,ಮುರಳಿಧರ ಅಂಬುರೆ ಸೇರಿ ಅನೇಕರಿದ್ದರು.ಕೆಜೆಯು ತಾಲೂಕು ಅಧ್ಯಕ್ಷ ರಾಜು ಕುಂಬಾರ ಪ್ರಾಸ್ತಾವಿಕವಾಗಿ ಮಾತನಾಡಿದರು.ಮಲ್ಲಿಕಾರ್ಜುನ ತಳ್ಳಳ್ಳಿ ವಂದಿಸಿದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…