ಕಲಬುರಗಿ: ಜನರಿಂದ ಆಯ್ಕೆಯಾದ ಶಾಸಕ ಸೈದ್ದಾಂತಿಕ ಭಿನ್ನಾಭಿಪ್ರಾಯ ಅಥವಾ ನಿಧನರಾದಾಗ ಮಾತ್ರ ಉಪ ಚುನಾವಣೆ ನಡೆಯುತ್ತದೆ. ಆದರೆ, ಯಾವುದೇ ಕಾರಣವಿಲ್ಲದೆ ಸ್ವಾರ್ಥಕ್ಕಾಗಿ ಜಾಧವ್ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ನಡೆಯುತ್ತಿದೆ. ಇದು ಪ್ರಜಾತಂತ್ರ ವಿರೋಧಿಯಾಗಿದ್ದು ನೀವು ಜಾಧವ್ ಗೆ ತಕ್ಕ ಪಾಠ ಕಲಿಸಿ ಎಂದು ಸಂಸದರಾದ ಹಾಗೂ ಕಾಂಗ್ರೇಸ ನಾಯಕ ಮಲ್ಲಿಕಾರ್ಜುನ ಖರ್ಗೆ ಕರೆ ನೀಡಿದರು.
ಅವರು ಚಿಮ್ಮನಚೂಡ್ ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿ, ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜನಪರ ಕೆಲಸ ಮಾಡಿದ್ದಾಗಿ ಹೇಳಿದ ಖರ್ಗೆ ಅವರು ಈ ಭಾಗದ ಅಭಿವೃದ್ದಿಗೆ ಅವರ ಕೊಡುಗೆ ಇದೆ. ಪಕ್ಷ ಅಧಿಕಾರದಲ್ಲಿದ್ದಾಗ ಶಾಸಕರಾಗಿದ್ದ ಜಾಧವ್ ನಮಗೆ ದ್ರೋಹ ಬಗೆದು ಬಿಜೆಪಿಗೆ ಸೇರಿ ಈಗ ಮತ್ತೆ ಅವರ ಮಗನ ಪರ ಮತ ಕೇಳುತ್ತಿದ್ದಾರೆ. ನೀವು ಅವರ ವಿರುದ್ದ ಮತ ನೀಡುವ ಮೂಲಕ ಕಾಂಗ್ರೇಸ್ ಕಾರ್ಯಕರ್ತರ ಮನಸಿಗೆ ಆದ ನೋವಿಗೆ ಸೇಡಿ ತೀರಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಸಂವಿಧಾನ ಉಳಿವಿಗೆ ಕಾಂಗ್ರೇಸ್ ಗೆ ಮತ ನೀಡಿ ಎಂದು ಕರೆ ನೀಡಿ, ಜನರು ಬಯಸದ ಅನಗತ್ಯ ಚುನಾವಣೆ ಇದಾಗಿದ್ದು, ಐದು ವರ್ಷಕ್ಕಾಗಿ ಎರಡನೆಯ ಬಾರಿಗೆ ಆಯ್ಕೆ ಯಾಗಿದ್ದ ಜಾಧವ್ ನಮ್ಮನ್ನೂ ಕೇಳಲಿಲ್ಲ ಆಯ್ಕೆ ಮಾಡಿದ ನಿಮ್ಮನ್ನೂ ಕೇಳದೆ ಸ್ವಾರ್ಥಕ್ಕಾಗಿ ರಾಜೀನಾಮೆ ಕೊಟ್ಟರು. ಹಾಗಾಗಿ ಈ ಚುನಾವಣೆ ನಡೆಯುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಸಂತೆಗಳಲ್ಲಿ ಕೋಳಿ ಕುರಿ ದನಗಳನ್ನು ಮಾರೋದು ಖರೀದಿ ಮಾಡೋದನ್ನು ನಾನು ನೋಡಿದಿನಿ. ಆದರೆ ಶಾಸಕರನ್ನೇ ಖರೀದಿ ಮಾಡಿದ್ದು ನೋಡಿರಲಿಲ್ಲ. ಹಾಗೆ ಮಾರಾಟವಾದ ಲಜ್ಜೆಗೆಟ್ಟ ಜಾಧವನಂತ ವ್ಯಕ್ತಿಗಳಿಗೆ ಯಾವ ಕಾರಣಕ್ಕೂ ಓಟು ಕೊಡಬೇಡಿ ಎಂದರು. ಕಳೆದ ಸಲ ಯಾವ ಪಕ್ಷದ ವಿರುದ್ದ ಗೆದ್ದು ಬಂದವನು ಈಗ ಅದೇ ಪಕ್ಷದ ಟಿಕೇಟ್ ಪಡೆದು ಚುನಾವಣೆಗೆ ನಿಂತನಲ್ಲ ಅವನಿಗೆ ಮಾನ ಮರ್ಯಾದೆ ಇದೆಯಾ? ಎಂದು ಖಾರವಾಗಿ ಪ್ರಶ್ನಿಸಿದರು.
ಸಮ್ಮಿಶ್ರ ಸರಕಾರದಲ್ಲಿ ಸರಿಯಾದ ಗೌರವ ನೀಡಿಲ್ಲ, ಪ್ರಿಯಾಂಕ್ ಖರ್ಗೆ ಸಹಕಾರ ನೀಡಲಿಲ್ಲ ಎನ್ನುವ ಕುಂಟುನೆಪ ಹೇಳಿ ಪಕ್ಷ ಬಿಟ್ಟುಹೋಗಿ ಮಗನನ್ನು ಈಗ ಚುನಾವಣೆಗೆ ನಿಲ್ಲಿಸಿದ್ದಾನೆ ಏನನ್ನಬೇಕು ಇವನಿಗೆ ಎಂದು ಪ್ರಶ್ನಿಸಿದರು.
ಕಾಂಗ್ರೇಸ್ ಹಾಗೂ ಸಮ್ಮಿಶ್ರ ಸರಕಾರದಿಂದ ಯಾವುದೇ ಅನ್ಯಾಯವಾಗಿಲ್ಲ. ನಾನು ಸಿಎಂ ಇದ್ದಾಗ ಎಲ್ಲ ರೀತಿ ಸಹಕಾರ ನೀಡಿದೆ. ಸಮ್ಮಿಶ್ರ ಸರಕಾರದಲ್ಲಿ ಎರಡು ವರ್ಷ ಕಳೆದ ನಂತರ ನಿನ್ನನ್ನೂ ಮಂತ್ರಿ ಮಾಡ್ತೇನೆ ಅಂದಿದ್ದೆ. ಆಗ ಸುಮ್ಮನಿದ್ದವನು ಏಕಾಏಕಿ ಮುಂಬೈಗೆ ಹೋಗಿ ಬಿಜೆಪಿ ಸೇರಲು ಅವರೊಂದಿಗೆ ಮಾತುಕತೆ ನಡೆಸಿದ್ದ. ಇವನು ೫೦ ಕೋಟಿಗೆ ಸೇಲಾಗಿದ್ದಾನೆ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ ಎಂದರು.
ಸಂವಿಧಾನ ಹಾಗೂ ಮೀಸಲಾತಿ ಉಳಿಯಬೇಕಾದರೆ ನೀವು ಕಾಂಗ್ರೇಸ್ ಪಕ್ಷಕ್ಕೆ ಮತ ಹಾಕಲೇಬೇಕು ಎಂದರು.
ಮೋದಿಗೆ ಕೇವಲ ೫೬ ಇಂಚಿನ ಎದೆ ಇದ್ದರೆ ಮಾತ್ರ ಸಾಲದು. ಅದು ಪೈಲ್ವಾನ್ ಗಳಿಗೆ ಇರುತ್ತದೆ. ಆದರೆ ಹೃದಯವಿರಬೇಕು. ನಾನು ಸಿಎಂ ಆಗಿದ್ದಾಗ ಬಡವರ ಪರ ಪುಕ್ಕಟೆ ಅಕ್ಕಿಕೊಟ್ಟೆ ಈ ಪುಣ್ಯಾತ್ಮ ಮೋದಿ ಗುಜರಾತ್ ನಲ್ಲಿ ಒಂದ್ ಕೆಜಿನಾದ್ರೂ ಅಕ್ಕಿ ಕೊಟ್ಟಿದಾನಾ? ಇಲ್ಲ ತಾನೆ? ಮತ್ಯಾಕೆ ಬಿಜೆಪಿ ಓಟು ಹಾಕಬೇಕು. ಆ ಪಕ್ಷಕ್ಕೆ ಮಿ.ಜಾಧವ್ ಹೋಗಿದಾನೆ ಈಗ ಓದ್ತಾ ಇರೋ ಅವನ ಮಗನ ಚುನಾವಣೆಗೆ ನಿಲ್ಲಿಸಿ ಖರ್ಗೆ ಮಗನ ವಿರುದ್ದ ಮಾತನಾಡ್ತನೆ. ನಾಚಿಕೆ ಆಲ್ವೇನ್ರೀ ಅವನಿಗೆ ಎಂದು ಟೀಕಿಸಿದರು.
ದೇಶದಲ್ಲಿ ಅತ್ಯಂತ ಸುಳ್ಳು ಹೇಳುವ ಗಿರಾಕಿ ಈ ಮೋದಿ.ಮಾತೆತ್ತಿದರೇ ಮನ್ ಕೀ ಮನ್ ಕೀ ಬಾತ್ ಅಂತಾನೆ ಯಾವ್ನರೀ ಇವನು? ಮಾತೇತ್ತಿದರೇ ಚೌಕೀದಾರ್ ಚೌಕೀದಾರ್ ಅಂತಾನೆ ಯಾರಿಗಪ್ಪ ನೀ ಚೌಕೀದಾರ್? ಇವನು ಚೌಕೀದಾರ್ ಆದ ಮೇಲೆ ಮಲ್ಯಾ, ನೀರವ್ ಮೋದಿ ಮುಂತಾದವರು ಕೋಟಿ ಕೋಟಿ ಲೂಟಿ ಮಾಡಿ ದೇಶ ಬಿಟ್ಟು ಪರಾರಿಯಾದರಲ್ಲ ಏನ್ ಮಾಡ್ತಿದ್ದ ಚೌಕೀದಾರ್ ಹಾಗಾಗಿ ನಾನು ಚೌಕೀದಾರ್ ಚೋರ್ ಅನ್ನಲ್ಲ ಚೌಕೀದಾರ್ ಬಾಗೀದಾರ್ ಎನ್ನುತ್ತೇನೆ ಎಂದರು.
ಈಶ್ವರಪ್ಪ ನಾಟಕದಲ್ಲಿ ಮಧ್ಯೆ ಮಧ್ಯೆ ಬರೋ ಜೋಕರ್ ಇದ್ದಂತೆ. ಮತ್ತೆ ಈ ಚಿಂಚನಸೂರು ಎನ್ನೋ ಗಿರಾಕಿ ಹಿಂದುಳಿದವರಿಗೆ ಕೋಲಿ ಸಮಾಜದವರಿಗೆ ಮುಸಲ್ಮಾನರಿಗೆ ಟಿಕೇಟು ಕೊಡಿಸಿದಾರೆ. ಇವರಿಬ್ಬರಿಗೆ ಮಾನ ಮರ್ಯಾದೆ ಇದ್ದರೆ ಈ ಕ್ಷಣ ಬಿಜೆಪಿಯಿಂದ ಹೊರಗೆ ಬರಲಿ ಎಂದ ಸವಾಲ್ ಹಾಕಿದರು.
ಕಾಂಗ್ರೇಸ್ ಹಾಗೂ ನಿಮಗೆ ದ್ರೋಹ ಬಗೆದ ಜಾಧವ್ ಮಗನಿಗೆ ಓಟು ಹಾಕದೆ ನಿಮ್ಮೊಡನೆ ಇರುವ ಸುಭಾಷ್ ರಾಠೋಡ್ ಗೆ ಆರಿಸಿ ಎಂದರು ಸಚಿವ ಎಂ.ಬಿ.ಪಾಟೀಲ್, ಪಿ.ಟಿ.ಪರಮೇಶ್ವರ ನಾಯಕ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಜಗದೇವ ಗುತ್ತೇದಾರ್, ಬಾಬು ಹೊನ್ನಾನಾಯಕ್, ಕಾಂತಾನಾಯಕ್, ಜಲಜಾನಾಯಕ್, ತಿಪ್ಪಣ್ಣಪ್ಪ ಕಮಕನೂರು ಹಾಗೂ ಮತ್ತಿತರರು ವೇದಿಕೆಯ ಮೇಲಿದ್ದರು.
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…