ಬಿಸಿ ಬಿಸಿ ಸುದ್ದಿ

23 ರ ನಂತರ ಮೋದಿ, ನೀ ಹೋದಿ: ಸಿ.ಎಂ ಇಬ್ರಾಹಿಂ.

ಕಲಬುರಗಿ: ಉಪಚುನಾವಣಗೆ ರಾಜ್ಯದ ಮೂರು ಕೋಟಿ ಖರ್ಚಾಗುತ್ತಿದೆ. ಇದಕ್ಕೆ ಕಾರಣ ಯಡಿಯೂರಪ್ಪನಿಗೆ ಜಾಧವ್ ಮೇಲೆ ಲವ್ವಾಗಿರುವುದು ಅದು ಸಡನ್ ಆಗಿ 8 ತಿಂಗಳಲ್ಲಿ ಎಂದು ಕೇಂದ್ರ ಮಾಜಿ ಸಚಿವ ಸಿಎಂ ಇಬ್ರಾಹಿಂ ಟೀಕಿಸಿದರು.

ಅವರು ಅರಣಕಲ್ ಗ್ರಾಮದಲ್ಲಿ ಉಪ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಭಾಗವಹಿಸಿ ಮಾತನಾಡಿ, ನಾನು ಕೂಡಾ ಕೇಂದ್ರ ಸಚಿವನಾಗಿದ್ದವನು ಆದರೆ 70 ವರ್ಷದಲ್ಲಿ ಇಂತ ದರಿದ್ರ ಸರಕಾರ‌ವನ್ನು  ನಾನು ನೋಡಿರಲಿಲ್ಲ. ನೋಟ್ ಬಂದ್ ಮಾಡಿ ಕಾರ್ಡ್ ಮೂಲಕ ಖರೀದಿ ಮಾಡಿ ಎಂದರು ತರಕಾರಿ ತಗೊಂಡ್ರೆ ಕಾರ್ಡ್ ಹೇಗೆ ಕೊಡಬೇಕು ಎಂದು ವ್ಯಂಗ್ಯವಾಡಿದರು.

ಇದು ಬಸವಣ್ಣನ ನಾಡು ನಾನು ಸಾಬರವನು ಈಗ ರಂಜಾನ್ ತಿಂಗಳು ನಾನು ಹೇಳೋದು ಸತ್ಯ. ೨೩ ನೇ ತಾರೀಖಿನ ನಂತರ ‘ ಮೋದಿ ನೀ ಹೋದಿ’ ಮೋದಿ ನೀ ಬೂದಿ’ ಎಂದು ಕುಟುಕಿದರು. ಯಡಿಯೂರಪ್ಪ ನೀ ಸಿಎಂ ಆಗಲಪ್ಪ. ನಿಮ್ಮ ಜಾಧವ ಅವರ ಮಗನೂ ಸೋಲ್ತಾರ. ನೀವು ಮನೆಗೆ ಹೋಗ್ತೀರಿ ಖರ್ಗೇ ಸಾಹೇಬರು ರಾಠೋಡ್ ಗೆಲ್ತಾರೆ. ರಂಜಾನ್ ತಿಂಗಳಲ್ಲಿ ಐದು ಸಲ ಪ್ರಾರ್ಥನೆ ಮಾಡುತ್ತೇನೆ ಆ ದೇವರಲ್ಲಿ ಬೇಡುವುದು ಇಷ್ಟೇ ದೇವರೇ ಈ ದೇಶದಲ್ಲಿ ಹಿಂದೂ ಮುಸ್ಲಿಂರು ಒಂದೇ ತಾಯಿ ಮಕ್ಕಳಂತೆ ಬಾಳುವೆ ಮಾಡುವುದನ್ನು ನಾವು ನೋಡಬೇಕು ಎಂದು ಒತ್ತಿ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಮಾತನಾಡಿ, ದೇಶದಲ್ಲಿ ರೈತರು ಸಂಕಷ್ಟದಲ್ಲಿದ್ದರೆ ಕೇಂದ್ರ ಸರಕಾರ ತನ್ನ ಆತ್ಮೀಯ ಸ್ನೇಹಿತರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು‌ ಆರೋಪಿಸಿದರು. ಆಪರೇಷನ್ ಕಮಲ ರಾಜ್ಯದ ಜನರ ಪಾಲಿಗೆ ಶಾಪವಾಗಿದೆ. ಕಾಂಗ್ರೇಸ್ ಶಾಸಕರನ್ನು ಖರೀದಿ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಅದರ ಫಲವೇ ಜಾಧವ್ ಅವರು ಅಲ್ಲಿ ಹೋಗಿರೋದು ಎಂದು ಟೀಕಿಸಿದರು.

ಮೋದಿ ಊರು ಮಾರುತ್ತಿದ್ದಾನೆ. ವಿಮಾನನಿಲ್ದಾಣಗಳನ್ನು ಖಾಸಗಿಯವರಿಗೆ ಮಾರಿದ್ದಾನೆ. ರಾಷ್ಟ್ರೀಯ ಮಾಧ್ಯಮಗಳು ಇದನ್ನು ಪ್ರಸಾರ ಮಾಡಿಲ್ಲ, ಸಿದ್ದರಾಮಯ್ಯ ವಾಚ್ ಕಟ್ಟಿದರೆ ಚಪ್ಪಲಿ ಹಾಕಿಕೊಂಡರೆ ಸುದ್ದಿ ಬರುತ್ತವೆ. ಈ ದೇಶದಲ್ಲಿ ಏನಾದರೂ ಬದಲಾವಣೆ ಬರಬೇಕಾದರೆ ಮಾಧ್ಯಮಗಳು ಪಾತ್ರ ದೊಡ್ಡದು. ನಿಮ್ಮ ಪೆನ್ನಿಗೆ ಅಂತ ಶಕ್ತಿಯಿದೆ. ಕನ್ನಡದ ಮಾಧ್ಯಮಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ ಎಂದು ಪ್ರಶಂಸಿಸಿದರು.

ಚುನಾವಣೆಗೆ ಮುನ್ನ ಯಡಿಯೂರಪ್ಪ ಹಿಂದೂ ಚುನಾವಣೆ ನಂತರ ಸಂತೋಷ ಮುಂದೆ ಯಡಿಯೂರಪ್ಪ ಹಿಂದೆ ನೋಡ್ತಾ ಇರಿ ಎಂದು ಭವಿಷ್ಯ ನುಡಿದರು. ಭಾಷಣದುದ್ದಕ್ಕೂ ಬಸವಣ್ಣನವರ ವಚನಗಳ ಮೂಲಕ ಬಿಜೆಪಿ ವಿರುದ್ದ ಟೀಕಾಪ್ರಹಾರ ಮಾಡಿದ ಅವರು ಕಾಂಗ್ರೇಸ್ ಅಭ್ಯರ್ಥಿ ಸುಭಾಷ್ ರಾಠೋಡ್ ಗೆ ಮತ ನೀಡುವಂತೆ ಮನವಿ‌ ಮಾಡಿದರು.

ವೇದಿಕೆಯ ಸಚಿವರಾದ ಮಾಜಿ ಸಿಎಂ ಸಿದ್ದರಾಮಯ್ಯ, ಸಂಸದರಾದ‌ ಎಂ ಮಲ್ಲಿಕಾರ್ಜುನ ಖರ್ಗೆ, ಎಂ ಬಿ ಪಾಟೀಲ್,  ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಸಿಎಂ ಇಬ್ರಾಹಿಂ, ಅಮರೇಗೌಡ ಬಯ್ಯಾಪುರ, ಜಿ.ನಾರಾಯಣರಾವ್, ಶರಣಪ್ಪ ಮಟ್ಟೂರು,  ಮಾಜಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಬಾಬುರಾವ್ ಚವ್ಹಾಣ್, ಬಾಬು ಹೊನ್ನಾನಾಯಕ್, ತಿಪ್ಪಣಪ್ಪ ಕಮಕನೂರು, ಜಲಜಾ ನಾಯಕ್ ಸೇರಿದಂತೆ ಮತ್ತಿತರಿದ್ದರು.

ಇದೇ ಸಂದರ್ಭದಲ್ಲಿ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಪರೀಕ್ಷೆ ಬರೆಯುವ ಮಗನಿಗೆ ಕರೆತಂದು ಚುನಾವಣೆಗೆ ನಿಲ್ಲಿಸಿದ್ದು ಜಾಧವ್ ಬಂಡವಾಳ ಬಯಲಿಗೆ ಬಂದಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರಕಾರ ಜನರಿಗೆ ನೀಡಿದ ಭರವಸೆ ಈಡೇರಿಸುವಲ್ಲಿ ವಿಫಲವಾಗಿದೆ. ಮೋದಿಯನ್ನು ಈಗ ತಿರಸ್ಕಾರ ಮಾಡಿ ಮಾರಾಟವಾಗಿರುವ ಜಾಧವ್ ಗೆ ಬುದ್ದಿ ಕಲಿಸಬೇಕು ಎಂದು ಕರೆ ನೀಡಿದರು.

ವೇದಿಕೆಯ ಮಾಜಿ ಸಿಎಂ ಸಿದ್ದರಾಮಯ್ಯ, ಸಂಸದರಾದ‌ ಎಂ ಮಲ್ಲಿಕಾರ್ಜುನ ಖರ್ಗೆ,  ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕರಾದ ಸಿಎಂ ಇಬ್ರಾಹಿಂ, ಅಮರೇಗೌಡ ಬಯ್ಯಾಪುರ, ಜಿ.ನಾರಾಯಣರಾವ್, ಶರಣಪ್ಪ ಮಟ್ಟೂರು,  ಮಾಜಿ ಸಚಿವರಾದ ಶರಣಪ್ರಕಾಶ್ ಪಾಟೀಲ್, ಬಾಬುರಾವ್ ಚವ್ಹಾಣ್, ಬಾಬು ಹೊನ್ನಾನಾಯಕ್, ತಿಪ್ಪಣಪ್ಪ ಕಮಕನೂರು, ಜಲಜಾ ನಾಯಕ್ ಸೇರಿದಂತೆ ಮತ್ತಿತರಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

3 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

3 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

3 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

20 hours ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

22 hours ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago