ಸುರಪುರ: ಸರ್ಕಾರದ ಆದೇಶದ ಮೇರೆಗೆ ಸುರಪುರ ನಗರವು ಇಂದು ಭಾಗಶಹಾ ಲಾಕ್ ಡೌನ್ ಆಯಿತು. ನಗರದಲ್ಲಿ ದಿನ ನಿತ್ಯದ ದಿನಸಿ, ತರಕಾರಿ ಹಣ್ಣು, ಹಾಲಿನ ಅಂಗಡಿಗಳು ಮತ್ತು ಔಷಧಿ ಅಂಗಡಿಗಳನ್ನು ಹೊರತು ಪಡಿಸಿ ಇನ್ಯಾವ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೇರಣೆಯಿಂದ ಬಂದಾಗಿದ್ದವು.
ಯುಗಾದಿ ಹಬ್ಬದ ಅಂಗವಾಗಿ ಬೆಳ್ಳಿಗ್ಗೆ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಖರೀದಿಸಿಲು ಜನರು ಮುಗಿಬಿದ್ದಿದ್ದರು.ಜನರನ್ನು ಕಳುಹಿಸಲು ನಗರಸಭೆಯ ಸಿಬ್ಬಂದಿ ತಮ್ಮ ವಾಹನಗಳಲ್ಲಿ ಧ್ವನಿವರ್ಧಕದ ಮೂಲಕ ಜನರು ಹೋದಲು ವಿನಂತಿಸಿದರಾದರು ಕ್ಯಾರೆ ಎನ್ನಲಿಲ್ಲ.ಇದನ್ನು ಅರಿತ ಪೊಲೀಸರು ಡಿವಾಯ್‌ಎಸ್‌ಪಿ ವೆಂಕಟೇಶ ಹುಗಿಬಂಡಿ ನೇತೃತ್ವದಲ್ಲಿ ಪಿಐ ಎಸ್.ಎಮ್.ಪಾಟೀಲರು ತಮ್ಮ ಸಿಬ್ಬಂದಿಯೊಂದಿಗೆ ತರಕಾರಿ ಮಾರುಕಟ್ಟೆಗೆ ಆಗಮಿಸಿದರು.ಸ್ವತಃ ಲಾಠಿ ಹಿಡಿದು ರಸ್ತೆಗಿಳಿದ ಡಿವಾಯ್‌ಎಸ್‌ಪಿ ಹಾಗು ಪಿಐ ಅವರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದಕ್ಕೆ ಲಾಠಿ ತೋರಿಸಿ ಬೆದರಿಸುವ ಮೂಲಕ ಜನರನ್ನು ಚದುರಿಸಿದರು.ಅಲ್ಲದೆ ತರಕಾರಿ ಅಂಗಡಿಯಿಂದ ಒಂದು ಅಂಗಡಿಯಿಂದ ಇನ್ನೊಂದು ಅಂಗಡಿ ೫೦ ಅಡಿ ಅಂತರದಲ್ಲಿ ಕೂಡಿಸಿ ವ್ಯಾಪಾರ ನಡೆಸುವಂತೆ ಅನುಕೂಲ ಮಾಡಿಕೊಟ್ಟರು.ಆದರೂ ಮದ್ಹ್ಯಾನದ ವೇಳೆಗೆ ಇಡೀ ನಗರ ಸಂಪೂರ್ಣ ಲಾಕ್‌ಡೌನ್ ಆಗಿತ್ತು.
ನಗರದ ಎಲ್ಲಾ ಪ್ರಮುಖ ರಸ್ತೆಗಳು ಮತ್ತು ವೃತ್ತಗಳು ಹಾಗು ಮಾರುಕಟ್ಟೆ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.ಅಲ್ಲದೆ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ದ್ವಾರಗಳಲ್ಲಿ ಪೊಲೀಸರು ನಿಂತು ಅವಶ್ಯಕತೆಯಿಂದ ಬರುವವರಿಗೆ ಮಾತ್ರ ನಗರಕ್ಕೆ ಬರಲು ಅವಕಾಶ ಮಾಡಿಕೊಟ್ಟರು.ಅಲ್ಲದೆ ಜಿ.ಪಂ ಮಾಜಿ ಅಧ್ಯಕ್ಷರಾದ ರಾಜಾ ಹನಮಪ್ಪ ನಾಯಕ (ತಾತಾ) ನೇತೃತ್ವದಲ್ಲಿ ಬಿಜೆಪಿಯ ಅನೇಕ ಮುಖಂಡರು ನಗರದೆಲ್ಲೆಡೆ ಸಂಚರಿಸಿ ಕೊರೊನಾ ಕುರಿತು ಮುಂಜಾಗ್ರತೆ ಮೂಡಿಸಿದರು ಅಲ್ಲದೆ ಜನರು ಲಾಕ್‌ಡೌನ್‌ಗೆ ಸಹಕರಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ವೇಣು ಮಾಧವ ನಾಯಕ,ನರಸಿಂಹಕಾಂತ ಪಂಚಮಗಿರಿ,ವಿಷ್ಣು ಗುತ್ತೇದಾರ,ನಗರಸಭೆ ಪೌರಾಯುಕ್ತ ಜೀವನ ಕಟ್ಟಿಮನಿ, ಶಂಕರ ನಾಯಕ,ಭೀಮಣ್ಣ ಬೇವಿನಾಳ, ಗಫರ್ ಸಾಬ್ ಸೇರಿದಂತೆ ಅನೇಕರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…