ಸುರಪುರ: ನಗರದ ರಂಗಂಪೇಟೆಯಲ್ಲಿರುವ ಮಹರ್ಷಿ ಭಗಿರಥ ವೃತ್ತದಲ್ಲಿ ತಾಲ್ಲೂಕಿನ ಉಪ್ಪಾರ ಸಮುದಾಯದಿಂದ ಭಗಿರಥ ಜಯಂತಿ ಆಚರಿಸಲಾಯಿತು.ಬೆಳಿಗ್ಗೆ ಒಂಬತ್ತು ಗಂಟೆಗೆ ಭಗಿರಥ ವೃತ್ತದಲ್ಲಿ ಸೇರಿದ ಅನೇಕರು ಮಹರ್ಷಿ ಭಗಿರಥರ ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಸಿಹಿ ಹಂಚಿ ಪಟಾಕಿ ಸಿಡಿಸಿ ಜಯಘೋಷ ಕೂಗಿದರು.
ಈ ಸಂದರ್ಭದಲ್ಲಿ ಉಪ್ಪಾರ ಸಮುದಾಯದ ರಾಜ್ಯ ಉಪಾಧ್ಯಕ್ಷ ಅಮರೇಶ ಯಡಹಳ್ಳಿ ಮಾತನಾಡಿ,ನಮ್ಮ ಉಪ್ಪಾರ ಸಮುದಾಯದ ಉಧ್ದಾರಕ ಮಹರ್ಷಿ ಭಗಿರಥರು.ಇವರು ಮಹನ್ ತಪಸ್ವಿಗಳಾಗಿದ್ದರು,ತಮ್ಮ ತಪಸ್ಸಿನಿಂದ ಗಂಗೆಯನ್ನು ಧರೆಗೆ ತಂದು ನಮ್ಮೆಲ್ಲರ ಉಧ್ದರಿಸಿದ ಮಹಾತ್ಮರಾಗಿದ್ದಾರೆ.ಇಂತಹ ಪುಣ್ಯ ಪುರುಷ ನಮ್ಮ ಉಪ್ಪಾರ ಸಮುದಾಯದ ಮಹನಿಯರು ಎಂಬುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ.ನಮ್ಮ ಸಮುದಾಯದ ಪುಣ್ಯ ಪುರುಷನ ಜಯಂತಿಯನ್ನು ನಾವೆಲ್ಲರು ಅಧ್ದೂರಿಯಾಗಿ ಆಚರಿಸುವ ಮೂಲಕ ಅವರನ್ನು ಸ್ಮರಿಸೋಣ ಎಂದರು.
ಈ ಸಂದರ್ಭದಲ್ಲಿ ಸಮುದಾಯ ತಾಲ್ಲೂಕು ಅಧ್ಯಕ್ಷ ಭೀಮಣ್ಣ ಚಿಕ್ಕನಹಳ್ಳಿ, ರಾಮಚಂದ್ರ ದೇವಿಕೇರಾ, ಡಾ: ಮುಕುಂದ ಯಾನಗುಂಟಿ, ಶಂಕರ ಸಾಹು ಹಸನಾಪುರ, ದೇವಿಂದ್ರಪ್ಪ ಸಾಹು ವಾಗಣಗೇರಾ, ಗಂಗಾಧರ ಲಕ್ಷ್ಮೀಪುರ, ಜಗದೀಶ ನಂಬಾ, ವೆಮಕಟೇಶ ಗದ್ವಾಲ, ಗೋವಿಂದರಾಜ ಶಹಾಪುರಕರ್, ಮಂಜುನಾಥ ಧರಣಿ, ಮಾನಪ್ಪ ದೇವರಗೋನಾಲ, ಬಸವರಾಜ ರುಕ್ಮಾಪುರ ಸೇರಿದಂತೆ ಅನೇಕರಿದ್ದರು.
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…
ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…
ಚಿಂಚೋಳಿ: ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ಉತ್ತರ ಬಳಿ ಧರಣಿಯಲ್ಲಿ ಹೋರಾಟ ಮಾಡುತ್ತಿದ್ದು.…
ಕಲಬುರಗಿ: ನವೆಂಬರ್ 29 ರಿಂದ 2 ಡಿಸೇಂಬರ್ ವರೆಗೆ ತಮಿಳುನಾಡಿನ ಅಲಗಪ್ಪ ವಿಶ್ವವಿದ್ಯಾಲಯ ಕರೈಕುಡಿಯಲ್ಲಿ ನಡೆಯುವ ದಕ್ಷಿಣ ಭಾರತ ಅಂತರ…
ಕಲಬುರಗಿ: ನಗರದ ವಾರ್ಡ ನಂ.51.ರ ಜೇವರ್ಗಿ ಕಾಲೋನಿ ವಾಟರ್ ಟ್ಯಾಂಕ್ ಹತ್ತಿರದ ಉದ್ಯವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ…