ಶಹಾಬಾದ: ಕೊರೊನಾ ವೈರಸ್ ಹರಡದಂತೆ ತಿಳುವಳಿಕೆ ಮೂಡಿಸಿದರೂ, ತಿಳುವಳಿಕೆ ಇಲ್ಲದ ಜನರು ತಮ್ಮ ಮನಸ್ಸಿಗೆ ಬಂದಂತೆ ರಸ್ತೆಗಳಲ್ಲಿ ಅನಾವಶ್ಯಕವಾಗಿ ಬರುತ್ತಿದ್ದಾರೆ. ಆದ್ದರಿಂದ ರಸ್ತೆಯ ಮೇಲೆ ಕಂಡವರನ್ನು ಲಾಠಿ ರುಚಿ ತೋರಿಸುವುದಲ್ಲದೇ, ಕ್ರಿಮಿನಲ್ ಕೇಸ್ ಹಾಕಲಾಗುವುದೆಂದು ತಹಸೀಲ್ದಾರ ಸುರೇಶ ವರ್ಮಾ ಹೇಳಿದರು.
ಅವರು ಮಂಗಳವಾರ ನಗರಸಭೆಯ ಸಭಾಂಗಣದಲ್ಲಿ ತಾಲೂಕಾಡಳಿತ ವತಿಯಿಂದ ಕೊರೊನಾ ವೈರಸ್ ತಡೆಗಟ್ಟಲು ಆಯೋಜಿಸಲಾದ ಸಭೆಯಲ್ಲಿ ಮಾತನಾಡಿದರು.
ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ನಗರದ ಎಲ್ಲಾ ವ್ಯಾಪಾರಸ್ಥರು ಅಂಗಡಿಗಳನ್ನು ಮಾರ್ಚ 31ರವರೆಗೆ ಮುಚ್ಚತಕ್ಕದ್ದು. ಮೆಡಿಕಲ್, ಪೆಟ್ರೋಲ್ ಬಂಕ್ ಹೊರತುಪಡಿಸಿ ನಗರದ ಎಲ್ಲಾ ಅಂಗಡಿಗಳು ಬಂದಾಗಿವೆ. ಆದರೆ ಹಾಲು, ಕಿರಾಣಿ ಅಂಗಡಿ, ತರಕಾರಿ, ಹಣ್ಣು ಮಾರಾಟ ಮಾಡಲು ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಮಾತ್ರ ಸಮಯ ನಿಗದಿ ಮಾಡಿ ಬಿಗಿಯಾದ ಕ್ರಮ ಕೈಗೊಂಡಿದ್ದೆವೆ.ಈ ವೇಳೆ ಜನರು ಒಬೊಬ್ಬರಾಗಿ ಆಹಾರ ಪದಾರ್ಥಗಳನ್ನು ಖರೀದಿಸಿ. ಆರೋಗ್ಯದ ದೃಷ್ಟಿಯಿಂದ ಯಾರು ಮನೆಯಿಂದ ಹೊರಗೆ ಬರಬೇಡಿ. ಬಡತನದ ಸಮಸ್ಯೆಯಿರುವ ಯಾರಿಗೆ ಆಹಾರದ ಕೊರತೆಯಿದೆಯೋ ಅಂತಹವರು ಕರೆ ಮಾಡಿದರೇ, ನಿಮ್ಮ ಮನೆ ಬಾಗಿಲಿಗೆ ಆಹಾರ ಪದಾರ್ಥಗಳನ್ನು ಮುಟ್ಟಿಸುವ ಕೆಲಸ ಮಾಡಲಾಗುವುದು. ಹತ್ತಾರು ದಿನ ಮನೆಯಲ್ಲಿದ್ದರೇ ಯಾರಿಗೂ ಅಪಾಯವಿಲ್ಲ. ಆದರೆ ಮನೆಯಿಂದ ಹೊರಗೆ ಬಂದು ನಿಮಗೂ, ನಿಮ್ಮ ಕುಟುಂಬಕ್ಕೂ ಕುತ್ತು ತರುವ ಕೆಲಸ ಮಾಡದಿರಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಕೊರೊನಾ ವೈರಸ್ ಹರಡದಂತೆ ತಡೆಗಟ್ಟಲು ಸಿಬ್ಬಂದಿಯ ಕೊರತೆ ಉಂಟಾಗುತ್ತಿರುವುದನ್ನು ಮನಗಂಡು, ನಗರದಲ್ಲಿರುವ ಸ್ವಯಂ ಸೇವಕರನ್ನು ಸ್ವಯಂಪ್ರೇರಿತರಾಗಿ ಬರುವಂತೆ ಹೇಳಲಾಗಿತ್ತು.ಅದರಂತೆ 50 ಜನ ಸ್ವಯಂ ಸೇವಕರು ಬಂದಿದ್ದು, ಅವರು ಪೊಲೀಸ್ ಸಿಬ್ಬಂದಿಯ ಜತೆ ಸೇರಿಕೊಂಡು ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು. – ಸುರೇಶ ವರ್ಮಾ ವರ್ಮಾ ತಹಸೀಲ್ದಾರ
ಡಿವಾಯ್‍ಎಸ್‍ಪಿ ವೆಂಕನಗೌಡ.ಎನ್.ಪಾಟೀಲ ಮಾತನಾಡಿದರು. ಪಿಐ ಅಮರೇಶ.ಬಿ, ಪೌರಾಯುಕ್ತ ವೆಂಕಟೇಶ, ಆರೋಗ್ಯ ನಿರೀಕ್ಷರಾದ ಶಿವರಾಜಕುಮಾರ, ರಾಜೇಶ, ಶರಣು, ಮುಖಂಡ ಬಸವರಾಜ ಮಯೂರ, ಸಾಮಾಜಿಕ ಚಿಂತಕ ಲೋಹಿತ್ ಕಟ್ಟಿ,ರವಿಕುಮಾರ, ಉಪನ್ಯಾಸಕ ಗುರುಲಿಂಗ ತುಂಗಳ ಸೇರಿದಂತೆ ನಗರದ ಅನೇಕ ಜನರು ಹಾಜರಿದ್ದರು.
ಸೇವೆಗೆ ಹಾಜರಾಗದಿದ್ದರೇ ಕಠಿಣ ಕ್ರಮ ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಈ ಸಂದರ್ಭದಲ್ಲಿ ರಜೆ ನೀಡಲಾಗುವುದಿಲ್ಲ. ಅಲ್ಲದೇ ದಿನದ 24 ಗಂಟೆಗಳಲ್ಲಿ ಯಾವುದೇ ಸಮಯದಲ್ಲಿ ಕರೆ ನೀಡಿದರೇ ಸೇವೆಗೆ ಹಾಜರಾಗಲೇಬೇಕು.ಒಂದು ವೇಳೆ ನಿರಾಕರಿಸಿದರೇ ಅಥವಾ ಅಸಡ್ಡೆ ತೋರಿದರೇ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಶಿವಯೋಗೇಶ್ವರ ಜಾತ್ರೆ ರದ್ದು ತಾಲೂಕಿನ ದೇವನತೆಗನೂರ ಗ್ರಾಮದ ಶಿವಯೋಗೇಶ್ವರ ಜಾತ್ರಾ ಮಹೋತ್ಸವವನ್ನು ನಾವು ಮಾಡುತ್ತೆವೆ ಎಂದು ಯಾರೋ ಹೇಳಿಕೆ ನೀಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ತಹಸೀಲ್ದಾರ ಸುರೇಶ ವರ್ಮಾ, ಡಿವಾಯ್‍ಎಸ್‍ಪಿ ವೆಂಕನಗೌಡ.ಎನ್.ಪಾಟೀಲ, ಪಿಐ ಅಮರೇಶ.ಬಿ, ಪೌರಾಯುಕ್ತ ವೆಂಕಟೇಶ,ತಾಪಂ ಇಓ ಲಕ್ಷ್ಮಣ ಶೃಂಗೇರಿ ಅವರು ಗ್ರಾಮಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಇಬ್ಬರು ಮಾತ್ರ ಕಂಡರು. ಯಾವುದೇ ರೀತಿ ಜಾತ್ರೆ ಮಾಡುವುದು, ಜನರು ಸೇರುವುದು ಕಂಡು ಬಂದರೆ ಕ್ರಮಕೈಗೊಳ್ಳುವುದು ಖಚಿತ.ದೇವಸ್ಥಾನ ಕಮಿಟಿಯವರು ಸಹಕಾರ ನೀಡಬೇಕೆಂದು ತಿಳಿಸಿದರು.ದೇವಸ್ಥಾನದವರು ಯಾವುದೇ ಕಾರಣಕ್ಕೂ ಮಾಡುವುದಿಲ್ಲ ಎಂದು ಭರವಸೆ ನೀಡಿದರು.ಅಲ್ಲದೇ ಗ್ರಾಮಕ್ಕೆ ಹೊರಗಿನವರು ಬರದಂತೆ ಕಾವಲು ಹಾಕಲಾಗಿದೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…