ಬಿಸಿ ಬಿಸಿ ಸುದ್ದಿ

ಕೇಂದ್ರ ಸರಕಾರದ ಪ್ಯಾಕೇಜ್ ನಲ್ಲಿ ರೈತರ ಕಡೆಗಣನೆ: ಮಾರುತಿ ಮಾನ್ಪಡೆ

ಕಲಬುರಗಿ: ಕೇಂದ್ರ ಸರಕಾರ ಘೋಷಿಸಿರುವ 500 ರೂ.ವೃದ್ದಾಪ್ಯಾ ವೇತನ ಬದಲಾಯಿಸಿ ಕನಿಷ್ಠ 3 ಸಾವಿರ ಮಾಡಿ ದೇಶದ ವೃದ್ದರ ಮತ್ತು ವಿಧವೆಯರ ಅಲ್ಲದೆ 60 ವರ್ಷ ಮೀರಿದ ಎಲ್ಲ ಬಿ.ಪಿ.ಎಲ್ ಕಾರ್ಡದಾರರಿಗೆ ನೀಡಿ ಅವರ ಕಷ್ಠ ಬಗೆಹರಿಬೇಕೆಂದು  ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿಯ ಉಪಾಧ್ಯಕ್ಷರಾದ ಮಾರುತಿ ಮಾನಪಡೆ ಇತ್ತಾಯಿಸಿದ್ದಾರೆ.

ಕೇಂದ್ರ ಸರಕಾರ ಮಾಹಾತ್ಮ ಗಾಂಧಿ ರಾಷ್ಟ್ರಿಯಾ ಗ್ರಾಮೀಣ ಉದ್ಯೋಗ ಖಾತ್ರಿ ಯೊಜನೆ ಸರಕಾರವೆ ಎಲ್ಲ ಕಾರ್ಖಾನೆ ಮತ್ತಿತರ ಉದ್ದಿಮೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ವೇತನಸಹೀತ ರಜೆ ನೀಡಬೆಕೆಂದು ಆದೇಶ ನೀಡಿದೆ. ತನ್ನಡಿಯಲ್ಲಿ ಬರುವ ಮಾಹಾತ್ಮ ಗಾಂಧಿ ರಾಷ್ಟ್ರಿಯಾ ಗ್ರಾಮೀಣ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಿಗೆ ಕೇಲಸಮಾಡಿದರೆ ಮಾತ್ರ ಕೂಲಿ ಕೊಡಲಾಗುವದೆಂದು ಹೆಳುವದು ವಿಪರ್ಯಸವಾಗಿದೆ. ಪ್ರತಿ ಕೂಲಿ ಕಾರ್ಮಿಕರ ಜಾಬಕಾರ್ಡಗೆ ಪ್ರತಿದಿನದ ಸಂಪೂರ್ಣ ಕೂಲಿ ಕೊಟ್ಟು ಅವರ ಹಸಿವು ನೀಗಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

ಕೋವಿಡ್-19 ಸಾಂಕ್ರಮಿಕ ರೋಗದಿಂದ ತತ್ತರಿಸುತ್ತಿರುವಾಗ, ಶೇಕಡ ೬೫ರಷ್ಟು ಇರುವ ರೈತ ಸಮುದಾಯ ತೀವ್ರ ತೊಂದರೆಗೆ ಒಳಗಾಗಿದೆ, ರೈತರು ಬೆಳೆದ ತರಕಾರಿ, ಆಹಾರದಾನ್ಯ ಮತ್ತು ಹಣ್ಣುಹಂಪಲುಗಳನ್ನು ಮಾರಟಮಾಡಲು ಸಾದ್ಯವಾಗುತಿಲ್ಲ, ರೈತರ ಒಂದು ಸಲ ಸಂಪೂರ್ಣ ಸಾಲ ಮನ್ನಾ ಮಾಡುವ ಮೂಲಕ ರೈತರ ಸಂಕಷ್ಟ ಪರಿಹಾರ ಮಾಡಬೇಕಾಗಿತ್ತು ಅದರ ಬದಲು ೧೪.೦೬ ಕೋಟಿ ರೈತರಿಗೆ ಕಳೆದ ಸಾಲಿನ ಕಿಸಾನ್ ಸಮ್ಮಾನ್ ಧನ ವಿತರಿಸಲಾಗಿತ್ತು ಅದನ್ನು ೮.೫ ಕೋಟಿ ರೈತರಿಗೆ ಮಾತ್ರ ವಿತರಿಸಲಾಗುವದೆಂದು ಸರಕಾರ ಹೇಳಿದೆ. ಕೊರೊನಾ ಪರಿಹಾರ ಘೋಷಣೆಯಲ್ಲಿ ರೈತರನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದರು.

ಕೇರಳದ ಕಮ್ಯೂನಿಷ್ಠ ಸರಕಾರವು ಕುಟುಂಬಕ್ಕೆ ತಿಂಗಳಿಗೆ ಸರಿಹೊಗುವಂತೆ ೫೦ ಕೆಜಿ ಆಹಾರದಾನ್ಯ ಪ್ರತಿತಿಂಗಳಿನಂತೆ ೩ತಿಂಗಳಿಗೆ ಸಾಕಾಗುವಷ್ಟು ಕೊಟ್ಟು ಆದರ್ಶಪ್ರಯಾವಾಗಿದೆ. ಪ್ರತಿತಿಂಗಳಿಗೆ ಒಬ್ಬ ವ್ಯಕ್ತಿ ಕನಿಷ್ಠ ೧೫ಕೆಜಿ ಆಹಾರಧಾನ್ಯ ಬೇಕಿರುವಾಗ ಸರಕಾರ ಪ್ರತಿಯೊಬ್ಬರಿಗೆ ೫ಕೆಜಿ ಯಂತೆ ನೀಡುವದಾಗಿ ಘೋಷಿಸಿರುವದು ಜನರಹಸಿವು ನಿಗಿಸುದಂತಾಗಲ್ಲ ಆದ್ದರಿಂದ ಸರಕಾರ ತಮ್ಮ ನಿರ್ಧಾರವನ್ನು ಪೂನರ್ ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ.

emedialine

Recent Posts

ಮಹಿಳಾ ಸಹಭಾಗಿತ್ವ ಇಲ್ಲದೆ ದೇಶದ ಅಭಿವೃದ್ಧಿ ಅಸಾಧ್ಯ: ಮಾತೋಶ್ರೀ ಡಾ. ಅವ್ವಾಜಿ

ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…

5 hours ago

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

14 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

14 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

15 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago