ಕಲಬುರಗಿ: ಕೇಂದ್ರ ಸರಕಾರ ಘೋಷಿಸಿರುವ 500 ರೂ.ವೃದ್ದಾಪ್ಯಾ ವೇತನ ಬದಲಾಯಿಸಿ ಕನಿಷ್ಠ 3 ಸಾವಿರ ಮಾಡಿ ದೇಶದ ವೃದ್ದರ ಮತ್ತು ವಿಧವೆಯರ ಅಲ್ಲದೆ 60 ವರ್ಷ ಮೀರಿದ ಎಲ್ಲ ಬಿ.ಪಿ.ಎಲ್ ಕಾರ್ಡದಾರರಿಗೆ ನೀಡಿ ಅವರ ಕಷ್ಠ ಬಗೆಹರಿಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಸಮಿತಿಯ ಉಪಾಧ್ಯಕ್ಷರಾದ ಮಾರುತಿ ಮಾನಪಡೆ ಇತ್ತಾಯಿಸಿದ್ದಾರೆ.
ಕೇಂದ್ರ ಸರಕಾರ ಮಾಹಾತ್ಮ ಗಾಂಧಿ ರಾಷ್ಟ್ರಿಯಾ ಗ್ರಾಮೀಣ ಉದ್ಯೋಗ ಖಾತ್ರಿ ಯೊಜನೆ ಸರಕಾರವೆ ಎಲ್ಲ ಕಾರ್ಖಾನೆ ಮತ್ತಿತರ ಉದ್ದಿಮೆಗಳಲ್ಲಿ ದುಡಿಯುವ ಕಾರ್ಮಿಕರಿಗೆ ವೇತನಸಹೀತ ರಜೆ ನೀಡಬೆಕೆಂದು ಆದೇಶ ನೀಡಿದೆ. ತನ್ನಡಿಯಲ್ಲಿ ಬರುವ ಮಾಹಾತ್ಮ ಗಾಂಧಿ ರಾಷ್ಟ್ರಿಯಾ ಗ್ರಾಮೀಣ ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಿಗೆ ಕೇಲಸಮಾಡಿದರೆ ಮಾತ್ರ ಕೂಲಿ ಕೊಡಲಾಗುವದೆಂದು ಹೆಳುವದು ವಿಪರ್ಯಸವಾಗಿದೆ. ಪ್ರತಿ ಕೂಲಿ ಕಾರ್ಮಿಕರ ಜಾಬಕಾರ್ಡಗೆ ಪ್ರತಿದಿನದ ಸಂಪೂರ್ಣ ಕೂಲಿ ಕೊಟ್ಟು ಅವರ ಹಸಿವು ನೀಗಿಸುವ ಕೆಲಸ ಮಾಡಬೇಕೆಂದು ಆಗ್ರಹಿಸಿದರು.
ಕೋವಿಡ್-19 ಸಾಂಕ್ರಮಿಕ ರೋಗದಿಂದ ತತ್ತರಿಸುತ್ತಿರುವಾಗ, ಶೇಕಡ ೬೫ರಷ್ಟು ಇರುವ ರೈತ ಸಮುದಾಯ ತೀವ್ರ ತೊಂದರೆಗೆ ಒಳಗಾಗಿದೆ, ರೈತರು ಬೆಳೆದ ತರಕಾರಿ, ಆಹಾರದಾನ್ಯ ಮತ್ತು ಹಣ್ಣುಹಂಪಲುಗಳನ್ನು ಮಾರಟಮಾಡಲು ಸಾದ್ಯವಾಗುತಿಲ್ಲ, ರೈತರ ಒಂದು ಸಲ ಸಂಪೂರ್ಣ ಸಾಲ ಮನ್ನಾ ಮಾಡುವ ಮೂಲಕ ರೈತರ ಸಂಕಷ್ಟ ಪರಿಹಾರ ಮಾಡಬೇಕಾಗಿತ್ತು ಅದರ ಬದಲು ೧೪.೦೬ ಕೋಟಿ ರೈತರಿಗೆ ಕಳೆದ ಸಾಲಿನ ಕಿಸಾನ್ ಸಮ್ಮಾನ್ ಧನ ವಿತರಿಸಲಾಗಿತ್ತು ಅದನ್ನು ೮.೫ ಕೋಟಿ ರೈತರಿಗೆ ಮಾತ್ರ ವಿತರಿಸಲಾಗುವದೆಂದು ಸರಕಾರ ಹೇಳಿದೆ. ಕೊರೊನಾ ಪರಿಹಾರ ಘೋಷಣೆಯಲ್ಲಿ ರೈತರನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದರು.
ಕೇರಳದ ಕಮ್ಯೂನಿಷ್ಠ ಸರಕಾರವು ಕುಟುಂಬಕ್ಕೆ ತಿಂಗಳಿಗೆ ಸರಿಹೊಗುವಂತೆ ೫೦ ಕೆಜಿ ಆಹಾರದಾನ್ಯ ಪ್ರತಿತಿಂಗಳಿನಂತೆ ೩ತಿಂಗಳಿಗೆ ಸಾಕಾಗುವಷ್ಟು ಕೊಟ್ಟು ಆದರ್ಶಪ್ರಯಾವಾಗಿದೆ. ಪ್ರತಿತಿಂಗಳಿಗೆ ಒಬ್ಬ ವ್ಯಕ್ತಿ ಕನಿಷ್ಠ ೧೫ಕೆಜಿ ಆಹಾರಧಾನ್ಯ ಬೇಕಿರುವಾಗ ಸರಕಾರ ಪ್ರತಿಯೊಬ್ಬರಿಗೆ ೫ಕೆಜಿ ಯಂತೆ ನೀಡುವದಾಗಿ ಘೋಷಿಸಿರುವದು ಜನರಹಸಿವು ನಿಗಿಸುದಂತಾಗಲ್ಲ ಆದ್ದರಿಂದ ಸರಕಾರ ತಮ್ಮ ನಿರ್ಧಾರವನ್ನು ಪೂನರ್ ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ.