ಆಹಾರ ವಸತಿ ಅವಶ್ಯಕತೆ ಇರುವವರು ನೆರವು ಕೇಂದ್ರಕ್ಕೆ ಬನ್ನಿ: ಶಾಸಕ ರಾಜುಗೌಡ

ಸುರಪುರ: ಕೊರೊನಾ ವೈರಸ್ ಹರಡದಂತೆ ತಡೆಯಲು ಭಾರತ ಲಾಕ್‌ಡೌನ್ ಆಚರಿಸಲಾಗುತ್ತಿದ್ದು,ಇದರಿಂದಾಗಿ ಅನೇಕರಿಗೆ ಸಮಸ್ಯೆಯುಂಟಾಗಿದೆ.ನಗರದಲ್ಲಿ ಆಹಾರದ ಅವಶ್ಯವಿರುವ ನಿರ್ಗತಿಕರು,ವಲಸಿಗರು ಮತ್ಯಾರಿಗಾದರೂ ಸಮಸ್ಯೆ ಇದ್ದಲ್ಲಿ ಈ ನೆರವಿನ ಕೇಂದ್ರಕ್ಕೆ ಬಂದು ಆಹಾರ ಮತ್ತು ವಸತಿ ಸೌಲಭ್ಯ ಪಡೆಯಬಹುದು ಎಂದು ಶಾಸಕ ನರಸಿಂಹ ನಾಯಕ (ರಾಜುಗೌಡ) ಮಾತನಾಡಿದರು.

ನಗರದ ದರಬಾರ ಶಾಲೆಯಲ್ಲಿ ತಾಲೂಕು ಆಡಳಿತದಿಂದ ತೆರೆಯಲಾದ ನೆವಿನ ಕೇಂದ್ರಕ್ಕೆ ಆಹಾರ ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ,ಕೊರೊನಾ ಎನ್ನುವುದು ಮಹಾಮಾರಿಯಾಗಿದ್ದು ಎಲ್ಲರು ತಮ್ಮ ಮನೆಗಳಲ್ಲಿದ್ದು ವೈರಸ್‌ನಿಂದ ದೂರವಿರಿ,ಅನಾವಶ್ಯಕವಾಗಿ ಹೊರಗಡೆ ಬರದಂತೆ ಸಾರ್ವಜನಿಕರು ಮತ್ತು ವಿಶೇಷವಾಗಿ ಯುವಕರಲ್ಲಿ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ತಹಸೀಲ್ದಾರ ನಿಂಗಣ್ಣ ಬಿರಾದಾರ್ ಮಾತನಾಡಿ,ನೆರವಿನ ಕೇಂದ್ರದಲ್ಲಿ ನಿರ್ಗತಿಕರಿಗೆ ಮತ್ತು ವಲಸಿಗರಿಗೆ ಆಹಾರ ಮತ್ತು ವಸತಿ ನೆರವಿಗಾಗಿ ಕೇಂದ್ರ ತೆರೆದಿದ್ದು ನಾಳೆಯಿಂದ ನಗರಸಭೆ ವಾಹನದ ಮೂಲಕ ನಗರದಾದ್ಯಂತ ಪ್ರಚಾರ ನಡೆಸಲಾಗುವುದು.ಅಲ್ಲದೆ ಗ್ರಾಮೀಣ ಭಾಗದಲ್ಲೂ ಪರಿಹಾರ ಕೇಂದ್ರದ ಅವಶ್ಯಕತೆ ಕಂಡುಬಂದಲ್ಲಿ ಅಲ್ಲಿಯೂ ಆರಂಭಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಮುಖಂಡ ಭೀಮಣ್ಣ ಬೇವಿನಾಳ,ಚುನಾವಣಾ ವಿಭಾಗದ ಅಧಿಕಾರಿ ಅಶೋಕ ಸುರಪುರಕರ್,ನಗರಸಭೆ ಸದಸ್ಯ ನಾಸೀರ್ ಕುಂಡಾಲೆ, ಶಿಕ್ಷಕ ಸೋಮರಡ್ಡಿ ಮಂಗಿಹಾಳ,ಶರಣು ನಾಯಕ,ಪ್ರದೀಪ ನಾಲ್ವಡೆ,ಭೀಮು ಯಾದವ ಇತರರಿದ್ದರು.

emedialine

Recent Posts

ಮಣಿಕಂಠ ರಾಠೋಡ ಆರೋಪ ಸತ್ಯಕ್ಕೆ ದೂರ | ಅಕ್ರಮ‌ವಾಗಿ ಅಕ್ಕಿ ಸಾಗಾಟವಾಗಿಲ್ಲ: ಆಹಾರ ಇಲಾಖೆ ಸ್ಪಷ್ಟನೆ

ಕಲಬುರಗಿ: ಕಳೆದ‌ ಅಕ್ಟೋಬರ್ 2 ರಂದು‌ ನಗರದ ಹೊರವಲಯದ ನಂದೂರ ಕೈಗಾರಿಕಾ ಪ್ರದೇಶದ ದಾಲ್ ಮಿಲ್ ವೊಂದರಲ್ಲಿ ಅಕ್ರಮ ಅಕ್ಕಿ…

4 hours ago

ರುಕ್ಮಾಪುರ: ಶ್ರೀ ದೇವಿ ಪಾರಾಯಣ ನಾಳೆಯಿಂದ

ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದ ಬಣಗಾರ ಮನೆಯಲ್ಲಿ ಬನ್ನಿಮಹಾಂಕಾಳಿ ನವರಾತ್ರಿ ಉತ್ಸವದ ಅಂಗವಾಗಿ ೪೪ನೇ ವರ್ಷದ ಶ್ರೀ ದೇವಿ ಪಾರಾಯಣ…

7 hours ago

ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ರಾಜಶೇಖರ್ ತಲಾರಿಗೆ ಮಾಧ್ಯಮ ರತ್ನ ಪ್ರಶಸ್ತಿ

ಕಲಬುರಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘ ಜಿಲ್ಲಾಮಟ್ಟದ ಪತ್ರಕರ್ತರ ಸಮಾವೇಶ ಸೆಪ್ಟೆಂಬರ್ 16ರಂದು ಅಫಜಲಪೂರ ಪಟ್ಟಣದಲ್ಲಿ ನಡೆದ ಸಂದರ್ಭದಲ್ಲಿ…

12 hours ago

24 ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ

ಕಲಬುರಗಿ; ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಖ್ಯಾತಿ ಪಡೆದ ಜಿಲ್ಲೆಯ ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ವತಿಯಿಂದ…

12 hours ago

ಚಿಂಚೋಳಿ: ಪ್ರವಾದಿ ಅವಹೇಳನ ಖಂಡಿಸಿ ಪ್ರತಿಭಟನೆ

ಚಿಂಚೋಳಿ : ಪ್ರವಾದಿ ಮಹ್ಮದ ಪೈಗಂಬರ್ ಅವರನ್ನು ಅವಮಾನಿಸಿದ ನರಸಿಂಹಾನಂದ ಸರಸ್ವತಿ ಸ್ವಾಮಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ…

14 hours ago

ಗುರುರಾಜ ಕರ್ಜಗಿಯನ್ನು ಶೈಕ್ಷಣಿಕ ಗುಣಮಟ್ಟ ಸುಧಾರಣಾ ಸಮಿತಿಯಿಂದ ಕೈಬಿಡಲು ಎಸ್ಎಫ್ಐ ಆಗ್ರಹ

ಕಲಬುರಗಿ: ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಕೆ.ಕೆ.ಆರ್.ಡಿ.ಬಿ ಯು ಸಮಿತಿಯೊಂದನ್ನು ರಚಿಸಿ, ಗುರುರಾಜ ಕರ್ಜಗಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿರುವ…

1 day ago

Notice: ob_end_flush(): Failed to send buffer of zlib output compression (0) in /home3/emedixap/public_html/wp-includes/functions.php on line 5420