ಸುರಪುರ: ಕೊರೊನಾ ಎಂಬುದು ಮಹಾಮಾರಿಯಾಗಿ ಇಂದು ಜಗತ್ತನ್ನು ಕಾಡುತ್ತಿದೆ.ಇದರ ನಿರ್ಮೂಲನೆ ಮದ್ದಿನಿಂದಾಗದು,ಆದ್ದರಿಂದ ಎಲ್ಲರು ಮನೆಗಳಲ್ಲಿಯೆ ಇರುವ ಮೂಲಕ ಕೊವಿಡ್-೧೯ ನಿರ್ಮೂಲನೆಗೆ ಸಹಕರಿಸಲು ಶಾಸಕ ನರಸಿಂಹ ನಾಯಕ (ರಾಜುಗೌಡ) ಸಾರ್ವಜನಿಕರಲ್ಲಿ ಮನವಿ ಮಾಡಿದರು.
ನಗರದ ಆರೋಗ್ಯ ಕೇಂದ್ರದಲ್ಲಿ ತೆರೆಯಲಾದ ಫಿವರ್ ಸೆಂಟರ್‌ಗೆ ಭೇಟಿ ನೀಡಿ ಗ್ರಾಮೀಣ ಭಾಗದಿಂದ ಕೊರೊನಾ ಸೊಂಕು ತಪಾಸಣೆಗೆ ಬಂದವರನ್ನು ವೀಕ್ಷಿಸಿ ಮಾತನಾಡಿ,ತಾಲೂಕಿನಲ್ಲಿ ಹೆಚ್ಚಿನ ಜನ ಗೋವಾ ಮಹಾರಾಷ್ಟ್ರಕ್ಕೆ ಹೋದವರು ಬಂದಿದ್ದರಿಂದ ಎಲ್ಲರ ಪರೀಕ್ಷೆಗೆ ಸಮಸ್ಯೆಯಾಗದಿರಲೆಂದು ಮುಖ್ಯಂತ್ರಿಗಳಿಗೆ ಮನವಿ ಮಾಡಿ ಇನ್ನೂ ಹೆಚ್ಚಿನ ಆರೋಗ್ಯ ಸಿಬ್ಬಂದಿ ಮತ್ತು ಸಲಕರಣೆಗಳನ್ನು ನೀಡಲು ವಿನಂತಿಸಲಾಗಿದೆ ಎಂದರು.ಎಲ್ಲರಿಗೂ ಮಾಸ್ಕ್ ವಿತರಿಸಲು ಈಗಾಗಲೆ ಇಪ್ಪತ್ತು ಸಾವಿರ ಮಾಸ್ಕ್ ತರಿಸಲಾಗುತ್ತಿದೆ ಒಂದೆರಡು ದಿನಗಳಲ್ಲಿ ವಿತರಿಸುವುದಾಗಿ ತಿಳಿಸಿದರು.ಯುವಕರು ವಿನಾಕಾರಣ ಮನೆಯಿಂದ ಹೊರಗೆ ಬರಬೇಡಿ ಒಮ್ಮೆ ಸೊಂಕು ತಗುಲಿದರೆ ಅದರ ಪರಿಣಾಮ ಇಡೀ ಕುಟುಂಬಕ್ಕೆ ಆಗಲಿದೆ ಎಚ್ಚರ ಎಂದರು.ಯಾರೂ ಕೊರೊನಾ ಬಗ್ಗೆ ಸುಳ್ಳು ಮಾಹಿತಿಯನ್ನು ಜಾಲತಾಣಗಳಲ್ಲಿ ಹರಡಬೇಡಿ,ಸುಳ್ಳು ಸುದ್ದಿ ಹರಡುವವರು ನನ್ನ ಫಾಲೊವರ್‌ಗಳಾದರು ಕೇಸು ದಾಖಲಿಸುವಂತೆ ಪೊಲೀಸರಿಗೆ ತಿಳಿಸಿದರು.
ತಾಲೂಕು ಆರೋಗ್ಯಾಧಿಕಾರಿ ಡಾ:ಆರ್.ವಿ.ನಾಯಕ ಮಾತನಾಡಿ,ತಾಲೂಕಿನಲ್ಲಿ ಸುಮಾರು ಹತ್ತು ಸಾವಿರದಷ್ಟು ಜನ ಬಂದಿದ್ದಾರೆ.ಎಲ್ಲರನ್ನು ಪರೀಕ್ಷಿಸಲಾಗುವುದು ಎಂದರು.ಈಗಾಗಲೆ ನಿತ್ಯವು ಒಂದರಿಂದ ಒಂದುವರೆ ಸಾವಿರ ಜನರನ್ನು ಪರೀಕ್ಷಿಸಲಾಗುತ್ತಿದೆ.ಯಾರಲ್ಲೂ ಕೊರೊನಾ ಲಕ್ಷಣ ಕಂಡುಬಂದಿಲ್ಲ ಎಂದರು.ಜನರು ತುಂಬಾ ಮುಂಜಾಗ್ರತೆ ವಹಿಸಬೇಕು.ನಿಮಗೆ ಯಾವುದೆ ರೀತಿಯ ಆರೋಗ್ಯದ ಸಮಸ್ಯೆ ಅನಿಸಿದಲ್ಲಿ ತಕ್ಷಣ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ನಿಂಗಣ್ಣ ಬಿರಾದಾರ್,ಮುಖಂಡ ಭೀಮಣ್ಣ ಬೇವಿನಾಳ ಸೇರಿದಂತೆ ಅನೇಕ ಜನ ಆರೋಗ್ಯ ಇಲಾಖೆ ಸಿಬ್ಬಂದಿಗಳು ಮತ್ತು ನೂರಾರು ಜನರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…