ವಾಡಿ: ಕೊರೊನಾ ರೋಗದ ವಿರುದ್ಧ ಗೆಲುವು ಸಾಧಿಸಲು ಘೋಷಿಸಲಾಗಿರುವ ಲಾಕ್‌ಡೌನ್ ಆದೇಶಕ್ಕೆ ತಲೆಬಾಗಿ ಕೂಲಿ ಕೆಲಸದಿಂದ ವಂಚಿತರಾಗುವ ಮೂಲಕ ಕಳೆದ ಹತ್ತಾರು ದಿನಗಳಿಂದ ಗೃಹ ಬಂಧನದಲ್ಲಿರುವ ವಾಡಿ ಪುರಸಭೆ ವ್ಯಾಪ್ತಿಯ ವಾರ್ಡ್ ೧೩ರ ಮಲ್ಲಿಕಾರ್ಜುನ ದೇವಸ್ಥಾನ ಬಡಾವಣೆಯ ಕಡುಬಡ ಕುಟುಂಬಗಳಿಗೆ ಪುರಸಭೆ ಸದಸ್ಯ ಬಿಜೆಪಿಯ ಭೀಮಶಾ ಜಿರೊಳ್ಳಿ ಅವರು ಆಹಾರ ಸಾಮಾಗ್ರಿ ವಿತರಿಸುವ ಮೂಲಕ ನೆರವಾದರು.
ಮಂಗಳವಾರ ಬಡಾವಣೆಯ ಬಡ ಕುಟುಂಬಗಳಿಗೆ ೫ ಕೆ.ಜಿ ಅಕ್ಕಿ, ಎಣ್ಣಿ, ಬೇಳೆ, ಖಾರಾ ಸೇರಿದಂತೆ ಇತರ ಗ್ರಹಬಳಕೆ ಸಾಮಾಗ್ರಿಗಳನ್ನು ಸುಮಾರು ೧೦೦ ಕುಟುಂಬಗಳಿಗೆ ವಿತರಿಸುವ ಮೂಲಕ ಬಡವರ ಹಸಿವು ನೀಗಿಸುವ ಪ್ರಯತ್ನ ಮಾಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಕೊರೊನಾ ವೈರಸ್ ವ್ಯಾಪಿಸದಂತೆ ಎಚ್ಚರ ವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಭಾರತ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ.
ದೇಶದ ಜನರ ಆರೋಗ್ಯದ ದೃಷ್ಠಿಯಿಂದ ಉತ್ತಮ ತೀರ್ಮಾನವನ್ನು ನಾವು ಸ್ವಾಗತಿಸಬೇಕಿದೆ. ಈ ಮಧ್ಯೆ ಕೂಲಿ ಕೆಲಸ ಕಳೆದುಕೊಂಡು ಮನೆಯಲ್ಲಿಯೇ ಉಳಿದಿರುವ ಬಡ ಕುಟುಂಬಗಳು ಊಟದಿಂದ ವಂಚಿತರಾಗಿ ಉಪವಾಸ ಮಲಗಬಾರದು ಎಂಬ ಕಾರಣಕ್ಕೆ ಮಾನವೀಯತೆಯ ದೃಷ್ಠಿಯಿಂದ ಆಹಾರ ಸಾಮಾಗ್ರಿ ವಿತರಿಸಿ ಜನರ ಸೇವೆ ಮಾಡಿದ್ದೇನೆ ಎಂದು ವಾರ್ಡ್ ಸದಸ್ಯ ಭೀಮಶಾ ಜಿರೊಳ್ಳಿ ಪ್ರತಿಕ್ರೀಯಿಸಿದ್ದಾರೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…