ಕೂಲಿ ವಂಚಿತ ಬಡ ಕುಟುಂಬಗಳಿಗೆ ಧಾನ್ಯ ನೀಡಿ ನೆರವು

0
122

ವಾಡಿ: ಕೊರೊನಾ ರೋಗದ ವಿರುದ್ಧ ಗೆಲುವು ಸಾಧಿಸಲು ಘೋಷಿಸಲಾಗಿರುವ ಲಾಕ್‌ಡೌನ್ ಆದೇಶಕ್ಕೆ ತಲೆಬಾಗಿ ಕೂಲಿ ಕೆಲಸದಿಂದ ವಂಚಿತರಾಗುವ ಮೂಲಕ ಕಳೆದ ಹತ್ತಾರು ದಿನಗಳಿಂದ ಗೃಹ ಬಂಧನದಲ್ಲಿರುವ ವಾಡಿ ಪುರಸಭೆ ವ್ಯಾಪ್ತಿಯ ವಾರ್ಡ್ ೧೩ರ ಮಲ್ಲಿಕಾರ್ಜುನ ದೇವಸ್ಥಾನ ಬಡಾವಣೆಯ ಕಡುಬಡ ಕುಟುಂಬಗಳಿಗೆ ಪುರಸಭೆ ಸದಸ್ಯ ಬಿಜೆಪಿಯ ಭೀಮಶಾ ಜಿರೊಳ್ಳಿ ಅವರು ಆಹಾರ ಸಾಮಾಗ್ರಿ ವಿತರಿಸುವ ಮೂಲಕ ನೆರವಾದರು.

ಮಂಗಳವಾರ ಬಡಾವಣೆಯ ಬಡ ಕುಟುಂಬಗಳಿಗೆ ೫ ಕೆ.ಜಿ ಅಕ್ಕಿ, ಎಣ್ಣಿ, ಬೇಳೆ, ಖಾರಾ ಸೇರಿದಂತೆ ಇತರ ಗ್ರಹಬಳಕೆ ಸಾಮಾಗ್ರಿಗಳನ್ನು ಸುಮಾರು ೧೦೦ ಕುಟುಂಬಗಳಿಗೆ ವಿತರಿಸುವ ಮೂಲಕ ಬಡವರ ಹಸಿವು ನೀಗಿಸುವ ಪ್ರಯತ್ನ ಮಾಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಕೊರೊನಾ ವೈರಸ್ ವ್ಯಾಪಿಸದಂತೆ ಎಚ್ಚರ ವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಭಾರತ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ.

Contact Your\'s Advertisement; 9902492681

ದೇಶದ ಜನರ ಆರೋಗ್ಯದ ದೃಷ್ಠಿಯಿಂದ ಉತ್ತಮ ತೀರ್ಮಾನವನ್ನು ನಾವು ಸ್ವಾಗತಿಸಬೇಕಿದೆ. ಈ ಮಧ್ಯೆ ಕೂಲಿ ಕೆಲಸ ಕಳೆದುಕೊಂಡು ಮನೆಯಲ್ಲಿಯೇ ಉಳಿದಿರುವ ಬಡ ಕುಟುಂಬಗಳು ಊಟದಿಂದ ವಂಚಿತರಾಗಿ ಉಪವಾಸ ಮಲಗಬಾರದು ಎಂಬ ಕಾರಣಕ್ಕೆ ಮಾನವೀಯತೆಯ ದೃಷ್ಠಿಯಿಂದ ಆಹಾರ ಸಾಮಾಗ್ರಿ ವಿತರಿಸಿ ಜನರ ಸೇವೆ ಮಾಡಿದ್ದೇನೆ ಎಂದು ವಾರ್ಡ್ ಸದಸ್ಯ ಭೀಮಶಾ ಜಿರೊಳ್ಳಿ ಪ್ರತಿಕ್ರೀಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here