ಶಹಾಬಾದ: ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ನಗರದವನ್ನು ಲಾಕ್‌ಡೌನ್ ಮಾಡಿದ್ದರಿಂದ ಕಡುಬಡವರಿಗೆ ಆಹಾರ ಸಮಸ್ಯೆಯಾಗಿದ್ದರೇ ಅವರಿಗೆ ಆಹಾರ ಪದಾರ್ಥಗಳನ್ನು ಅವರ ಮನೆಗೆ ತಲುಪಿಸುವ ಕಾರ್ಯ ಮಾಡಲಾಗುವುದೆಂದು ನಗರಸಭೆ ಸದಸ್ಯ ರವಿ ರಾಠೋಡ ಹೇಳಿದರು.
ಅವರು ನಗರದಲ್ಲಿ ರೇಲ್ವೆ ಹಳಿ ಆಚೇ ಇರುವ ಬಡಾವಣೆಗಳಲ್ಲಿನ ಸುಮಾರು ೨೦೦ ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ವಿತರಿಸಿ ಮಾತನಾಡಿದರು. ಇದ್ದವರು ಬಂದು ಆಹಾರ ಪಡೆಯಲು ಬರಬೇಡಿ, ಯಾರಿಗೆ ಆಹಾರದ ಸಮಸ್ಯೆಯಿದೆ ಅವರು ಬಂದರೆ ಅಥವಾ ಅವರ ಬಗ್ಗೆ ತಿಳಿಸಿದರೂ ಅವರಿಗೆ ತಲುಪಿಸಲಾಗುವುದು. ಈ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಅನೇಕ ಸಂಗಡಿಗರು ಸಹಾಯ ಹಸ್ತ ಚಾಚಿದ್ದಾರೆ.ಅದರ ಸದುಪಯೋಗವಾಗಬೇಕು ಎನ್ನುವುದೇ ನಮ್ಮ ಉದ್ದೇಶ. ಮನೆಗೆ ಬೇಕಾದ ಸಕ್ಕರೇ, ಚಹಾಪುಡಿ, ಅರಿಷಿಣ, ಕಾರದಪುಡಿ, ಎಣ್ಣೆ ಪಾಕೆಟ್, ಗೋಧಿ ಹಿಟ್ಟು, ಅಕ್ಕಿ, ತೊಗರಿ ಬೇಳೆ ಸೇರಿದಂತೆ ಅನೇಕ ಪದಾರ್ಥಗಳನ್ನು ನೀಡಲಾಗುತ್ತಿದೆ.ಅದಕ್ಕೆ ಅನೇಕ ಜನರು ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು.
ನರೇಂದ್ರ ವರ್ಮಾ, ದತ್ತಾಫಂಡ್, ಫಾರುಕ್ ಸೇಠ,ಅವಿನಾಶ ಗಾಯಕ್‌ವಾಡ, ಬಬಲು ಮೋಹಿತೆ,ಪ್ರಮೋದ, ಯಲ್ಲಾಲಿಂಗ,ಯುವರಾಜ, ಸುನೀಲ, ಅನೀಲ, ವೀರಮಣಿ,ಪ್ರೀತಮ್, ರವಿ, ಮಹೇಶ, ಅಮೋಲ್, ರೋಹಿದಾಸ, ಅಭಿನವ, ಸಯ್ಯದ್, ಸಚಿನ್ ಪಾಟೀಲ ಸಾಗರ, ಗಣೇಶ, ಶ್ರವಣ,ಶಕೀಲ್, ದೀಪಕ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…