ಬಿಸಿ ಬಿಸಿ ಸುದ್ದಿ

ಅಭಿಯಂತರ ನಾರಾಯಣ ಭಗವಂತಿ ಸೇವಾ ನಿವೃತ್ತಿ

ಕಲಬುರಗಿ: ಸಣ್ಣ ನೀರಾವರಿ ಇಲಾಖೆಯ ಸೇಡಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿದ್ದು ನಾರಾಯಣ ಮಾಣಿಕಪ್ಪ ಭಗವಂತಿ ಇಂದು ಸೇವಾ ನಿವೃತ್ತಿ ಹೊಂದಿದರು.

ನಗರದ ಸಣ್ಣ ನೀರಾವರಿ ವಿಭಾಗೀಯ ಕಛೇರಿಯಲ್ಲಿ ನಡೆದ ಅತ್ಯಂತ ಸರಳ ಸಮಾರಂಭದಲ್ಲಿ ಸಹುದ್ಯೋಗಿಗಳು
ನಿವೃತ್ತಿ ಜೀವನಕ್ಕೆ ಹಾಗೂ ಸೇವಾವಾಧಿಯಲ್ಲಿ ಸರಕಾರದ ನೀರಾವರಿ ಯೋಜನೆಗಳಿಗೆ ಸಲ್ಲಿಸಿದ ಸೇವೆಯನ್ನು ಶ್ಲಾಘೀಸಿ ಆತ್ಮೀಯವಾಗಿ ಬಿಳ್ಕೊಡಲಾಯಿತು.

ನಗರದ ಸಣ್ಣ ನೀರಾವರಿ ಇಲಾಖೆಯ ವಿಭಾಗೀಯ ಕಛೇರಿಯಲ್ಲಿ ನಡೆದ ಸರಳ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಶೋಕ ಅಂಬಲಗಿ, ಭಗವಂತಿ ಅವರು ಸೇವೆಯನ್ನು ಶ್ಲಾಘಿಸಿ ಕಿರಿಯ ಇಂಜನೀತರಗಳಿಗೆ ಅತ್ಯುತ್ತಮ ಮಾರ್ಗದರ್ಶಕರಾಗಿದ್ದರು,ಅವರ ನೇತೃತ್ವದಲ್ಲಿ ನಡೆದ ಕಾಮಗಾರಿಗಳು ನೂತನ ಇಂಜನೀಯರಗಳಿಗೆ ಮಾದರಿಗಳಾಗಿದ್ದು,ಯೋಜನೆಗಳ ನೀಲನಕ್ಷೆ ನಮ್ಮ ವಿಭಾಗದ ಅಮೂಲ್ಯ ದಾಖಲೆಗಳು ಬೇರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇವರ ರಚಿಸಿದ ನೀಲನಕ್ಷೆಗಳನ್ನು ಅನುಸರಿಸಿ ಸಾಕಷ್ಟು ಕಾಮಗಾರಿಗಳು ಕೈಗೊಂಡಿದ್ದು ಇನ್ನೂ ಕೆಲವೊಂದು ಪ್ರಗತಿಯಲ್ಲಿವೇ,ನಿವೃತ್ತಿಯಾದರೂ ನಾನು ಸೇವೆಗೆ ಲಭ್ಯ ಎಂದು ಭರವಸೆ ನೀಡಿದ್ದು ಅವರಲ್ಲಿ ಇನ್ನೂ ಉತ್ಸಾಹ ಕುಗ್ಗಿಲ್ಲವೆಂಬುದಕ್ಕೆ ಸಾಕ್ಷಿ ಎಂದು ನಾರಾಯಣ ಭಗವಂತಿ ಅವರ ಸೇವೆಯನ್ನು ಸ್ಮರಿಸಿದರು.

ಹಿನ್ನಲೆ:-ಕಲಬುರಗಿ ತಾಲೂಕಿನ ಚಿಂಚೋಳಿ ಗ್ರಾಮದ ಮಾಣಿಕಪ್ಪ ಹಾಗೂ ಶ್ರೀಮತಿ ಸಾಯಮ್ಮ ಅವರ ದ್ವೀತಿಯ ಪುತ್ರರಾಗಿ ದಿನಾಂಕ ೨೪-೦೩-೧೯೬೦ ರಂದು ಜನಿಸಿದ ನಾರಾಯಣ ಭಗವಂತಿ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿ ಪಿಯುಸಿಯನ್ನು ಶರಣಬಸವೇಶ್ವರ ಕಾಲೇಜಿನಲ್ಲಿ ಹಾಗೂ ಬಿ.ಇ. ಸಿವಿಲ್ ಪದವಿಯನ್ನು ನಗರದ ಪಿಡಿಎ ಕಾಲೇಜಿನಲ್ಲಿ ೧೯೭೮-೮೪ ರವರೆಗೆ ಪ್ರಥಮ ದರ್ಜೆಯಲ್ಲಿ ಪಾಸಾಗಿ ೧೯೮೪ರಲ್ಲಿಯೇ ದಿನಗೂಲಿ ನೌಕರರಾಗಿ ಸರಕಾರಿ ಸಹಾಯಕ ಇಂಜನೀಯರ್ ಹುದ್ದೆಯಿಂದ ಸೇವೆಗೆ ಸೇರ್ಪಡೆಗೊಂಡು ೧೦ ವರ್ಷಗಳ ನಂತರ ಖಾಯಂ ನೌಕರರಾಗಿ ಸೇವೆಯನ್ನು ಮುಂದುವರೆಸಿದರು.

ಜಿಲ್ಲೆಯ ಅಫಜಲಪೂರ,ಆಳಂದ,ಚಿಂಚೋಳಿ ಹಾಗೂ ಸೇಡಂ ತಾಲೂಕುಗಳಲ್ಲಿ ಸೇವೆ ಸಲ್ಲಿಸಿದ್ದು ವಿವಿಧ ರೀತಿಯ ನೀರಾವರಿ ಯೋಜನೆಗಳನ್ನು ಸಮರ್ಪಕವಾಗಿ ಪೂರ್ಣಗೊಳಿಸಿ ಜನರಿಗೆ ಮತ್ತು ರೈತರಿಗೆ ಸಮರ್ಪಿಸಿದ್ದಾರೆ.ಆಳಂದ ತಾಲೂಕಿನ ಸಾಲೆಗಾಂವ ಗ್ರಾಮದ ಕೆರೆಯ ೧೭ ಮೀಟರ್ ಎತ್ತರ ಹಾಗೂ ೪೫೦ ಉದ್ದದ ಬಂಡ ಜಾರಿದ್ದನ್ನು ದಾಖಲೆ ಸಮಯದಲ್ಲಿ ವೈಜ್ಞಾನಿಕವಾಗಿ ಮರು ನಿರ್ಮಾಣ ಮಾಡಿದ್ದನ್ನು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರಾದ ಪ್ರೊ.ಶ್ರೀಧರನ್ ಹಾಗೂ ಶಿವಪುಲ್ಲಯ್ಯಾ ಅವರಿಂದ ಪ್ರಶಂಸೆಯನ್ನು ಪಡೆಯಿತು.

ಲಾಡ್ ಚಿಂಚೋಳಿಯ ಬಾಂದಾರು ಸೇತುವೆ,ಅಫಜಲಪೂರ ತಾಲೂಕಿನ ದೇವಲಗಾಣಗಾಪೂರದಲ್ಲಿ ಭೀಮಾ ನದಿಗೆ ಅಡ್ಡಲಾಗಿ ಬಾಂದಾರು ಸೇತುವೆ, ತಾಲೂಕಿನ ಡೋಗಿನಾಲಾ,ಮೇಡಕ ಬಾಂದಾರು ಸೇತುವೆ, ಆಣಿಕಟ್ಟೆ, ಸಿರಾಲಕೋಟ್ ಕಾಲ್ಕಾಮ ಆಣಿಕಟ್ಟುಗಳು, ಕುರುಕುಂಟಾ-ಸಂಗಾವಿ ಬಾಂದಾರು ಸೇತುವೆ,ಜೀಲದಪ್ಲಲಿ ಬಾಂದಾರು ಸೇತುವೆ, ಅನಂತಪುರ,ಕುಕುಂದಾ,ಕಡತಾಲ,ಭೀಮನಗರ,ಹಂಗನಳ್ಳಿ,ಬಂಡೆಪಲ್ಲಿ,ಕೊಲಕುಂದಾ ಗಳಲ್ಲಿ ಆಣಿಕಟ್ಟೆಗಳ ನಿರ್ಮಾಣ ಹಾಗೂ ಇಟಕಲ್ ಮತ್ತು ನಾಡೆಪಲ್ಲಿಯಲ್ಲಿ ನೂತನ ಕೆರೆಗಗಳನ್ನು ನಿರ್ಮಿಸಿದ್ದು ಇಲ್ಲಿಯವರೆಗಿನ ದಾಖಲೆ ಎಂದೇ ಹೇಳಬೇಕು.

ಸರಕಾರದ ಸೇವೆಯಲ್ಲಿದ್ದು ಕೂಡಾ ಸರಕಾರಿ ದಿನಗೂಲಿ ನೌಕರರ ಖಾಯಂಗಾಗಿ ರಾಜ್ಯವ್ಯಾಪಿ ಹೋರಾಟದಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು ಮುಂದಾಳತ್ವ ವಹಿಸಿ ೧೯೯೧ ರಲ್ಲಿ ೨೫೦೦೦ ಕ್ಕೂ ಅಧಿಕ ಇಂಜನೀಯರಗಳು ಖಾಯಂ ನೌಕರರಾಗುವಲ್ಲಿ ಮಹ್ವತದ ಪಾತ್ರವಹಿಸಿದ್ದರು,ಆಷ್ಟೇ ಅಲ್ಲದೇ ಬಡ್ತಿ ಮೀಸಲಾತಿ ಹೋರಾಟದಲ್ಲಿಯೂ ಮುಂಚೂಣಿಯಲ್ಲಿದ್ದು ಪ್ರಕರಣವನ್ನು ಸುಪ್ರೀಂಕೋರ್ಟ ವರೆಗೆ ಹೋರಾಟದಲ್ಲಿ ಮೂಲ ದಾವೆದಾರ ಇಂಜನೀಯರ್‌ಗಳಾದ ನಾಗರಾಜ್ ಮತ್ತು ಪವಿತ್ರಾ ಅವರಿಗೆ ಬೆನ್ನೆಲುಬಾಗಿ ನಿಂತು ಹೋಋಆಟ ನಡೆಸಿದ್ದಾರೆ.

ಸಮಾರಂಭದಲ್ಲಿ ಅಫಜಲಪೂರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಜಾಧವ, ಚಿಂಚೋಳಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಕೇಶ್ವಾರ,ಸೇಡಂ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ರೇವಣಸಿದ್ದಪ್ಪ,ಸೇಡಂ,ಅಫಜಲಪೂರ,ಚಿಂಚೋಳಿ,ಜೇವರ್ಗಿ,ಕಲಬುರಗಿ ಉಪ ವಿಭಾಗಗಳ ಹಾಗೂ ವಿಭಾಗೀಯ ಮತ್ತು ವೃತ್ತ ಕಛೇರಿ ಸಿಬ್ಬಂದಿ ಹಾಗೂ ಸ್ನೇಹಿತರು ಪಾಲ್ಗೊಂಡಿದ್ದರು.

emedialine

Recent Posts

ತೊಗರಿ ಬೆಳೆ‌ ಹಾನಿ ಪ್ರದೇಶ ವೀಕ್ಷಿಸಿದ ಶಾಸಕ ಅಲ್ಲಮಪ್ರಭು ಪಾಟೀಲ

ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…

9 hours ago

ಕಷ್ಟಗಳಿಗೆ ಕುಗ್ಗದೇ ಸವಾಲಾಗಿ ಸ್ವಿಕರಿಸಿ

ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…

9 hours ago

ಕಲಬುರಗಿ: ಹಾಸ್ಯ ಕಲಾವಿದ ರೇವಣಸಿದ್ಧ ಸ್ವಾಮಿ ದಂಪತಿಗೆ ಗೆಳೆಯರ ಬಳಗದಿಂದ ಸತ್ಕರಿಸಲಾಯಿತು.

ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…

9 hours ago

ಸಾವಿರ ಸೀರೆ ವಿತರಿಸಿ ಸಚಿವ ಪ್ರಿಯಾಂಕ್ ಜನ್ಮದಿನ ಆಚರಣೆ

  ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…

1 day ago

ಮೂರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು: ಕಾರ್ಯಕರ್ತರಿಂದ ವಿಜಯೋತ್ಸವ

ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…

1 day ago

ಸಿದ್ದಸಿರಿ ಹೋರಾಟ ಪ್ರಾಯೋಜಿತ: ಶರಣು ಪಾಟೀಲ್

ಚಿಂಚೋಳಿ: ಕಾನೂನು ತೊಡಕಿನಿಂದ ಸ್ಥಗಿತಗೊಂಡ ಸಿದ್ದಸಿರಿ ಎಥೆನಾಲ್ ಕಾರ್ಖಾನೆ ಪ್ರಾರಂಭಕ್ಕೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಬೇಕೆಂದು ಒತ್ತಾಯಿಸಿ…

1 day ago