ವಿಜಯಪುರ: ವಿಜಯಪುರ-ಬಾಗಲಕೋಟ ಜಿಲ್ಲೆಗಳಲ್ಲಿ ಸಾಕಷ್ಟು ಕೋಲ್ಡ್ ಸ್ಟೋರೆಜ್‍ಗಳು ಇದ್ದು, ರೈತರು ತಾವು ಬೆಳೆದ ಟೊಮ್ಯಾಟೊ, ಕಲ್ಲಂಗಡಿ ಇತರೆ ಹಣ್ಣು-ಹಂಪಲಗಳನ್ನು ಅಲ್ಲಿ ಇರಿಸಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲರ ಹೇಳಿಕೆ ವಾಸ್ತವ ಸಂಗತಿಗಳಿಗೆ ದೂರವಾಗಿದೆ ಎಂದು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ವಿಜಯಪುರ-ಬಾಗಲಕೋಟ ಜಿಲ್ಲೆಗಳಲ್ಲಿ ತೋಟಗಾರಿಕಾ ಬೆಳೆಗಳನ್ನು ಹೇರಳವಾಗಿ ಬೆಳೆಯುತ್ತಿದ್ದು, ಕೊರೊನಾ ಸಂಕಷ್ಟದ ಸಮಯದಲ್ಲಿ ರೈತರಿಗೆ ಅತೀವ ತೊಂದರೆ ಉಂಟಾಗಿದೆ. ಕೇವಲ ವಿಜಯಪುರ ಜಿಲ್ಲೆಯನ್ನು ಉದಾಹರಿಸುವದಾದರೆ ಸರಕಾರಿ, ಸಹಕಾರಿ ಹಾಗೂ ಖಾಸಗಿ ಮಾಲಿಕತ್ವದ ಎಲ್ಲ ಕೋಲ್ಡ್ ಸ್ಟೋರೆಜ್ ಗಳ ಒಟ್ಟು ಸಾಮರ್ಥ್ಯ 40ಸಾವಿರ ಟನ್ ಆಗಿದೆ. ಆದರೆ ಈ ಬಾರಿ ವಿಜಯಪುರ ಜಿಲ್ಲೆಯಲ್ಲಿ 80ಸಾವಿರ ಟನ್ ಕೇವಲ ಒಣದ್ರಾಕ್ಷಿ ಉತ್ಪಾದನೆ ಆಗಿದೆ.
ಹಾಗಿದ್ದಾಗ ಉಳಿದ 40ಸಾವಿರ ಟನ್ ಒಣದ್ರಾಕ್ಷಿಯನ್ನು ಎಲ್ಲಿ ಇಡುವದು? ನೆರೆಯ ರಾಜ್ಯಗಳ ಕೋಲ್ಡ್ ಸ್ಟೋರೆಜ್‍ಗಳನ್ನು ಹಿಂದಿನಂತೆ ಈ ವರ್ಷವೂ ಅವಲಂಬಿಸಲೇಬೇಕಿದೆ. ಇದು ರೈತರಿಗೆ ಅತೀ ಹೆಚ್ಚು ಆದಾಯ ತರುವ ಒಣ ದ್ರಾಕ್ಷಿ ಬೆಳೆಗಾರರ ಪರಿಸ್ಥಿತಿ ಹೀಗಿದೆ. ಇದಲ್ಲದೆ ಉಳಿದ ಕಲ್ಲಂಗಡಿ, ಕರಬೂಜ, ಪಪ್ಪಾಯ ಸೇರಿದಂತೆ ವಿವಿಧ ಹಣ್ಣು-ಹಂಪಲಗಳ, ತರಕಾರಿ ಬೆಳೆಗಾರರ ಸ್ಥಿತಿ ಅಧೋಗತಿಯಾಗಿದೆ.
ಕೊರೊನಾ ಹಿನ್ನಲೆಯಲ್ಲಿ ಅನುಸರಿಸಿದ ಅವೈಜ್ಞಾನಿಕ ಕ್ರಮಗಳಿಂದಾಗಿ ಮಾರುಕಟ್ಟೆಯಲ್ಲಿ ವ್ಯತ್ಯಾಸವಾಗಿ, ರೈತರಿಗೆ ಅತೀ ಹೆಚ್ಚು ಹಾನಿಯಾಗುತ್ತಿದೆ. ಈ ಕುರಿತು ಪರಿಹಾರ ಸೂಚಿಸುವ ಜವಾಬ್ದಾರಿಯುತ ಸ್ಥಾನದಲ್ಲಿರುವ ಕೃಷಿ ಸಚಿವರು ವಸ್ತುಸ್ಥಿತಿಯನ್ನು ಅರಿತುಕೊಂಡು, ಸಂಕಷ್ಟದಲ್ಲಿರುವ ರೈತರ ಕಣ್ಣಿರು ಒರೆಸುವ ಕಾರ್ಯವನ್ನು ಮಾಡಲಿ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…