ಸುರಪುರ: ಕೊರೊನಾ ಕಾರಣದಿಂದ ಭಾರತ ಲಾಕ್‌ಡೌನ್ ಘೋಷಣೆಯಿಂದಾಗಿ ನಾಡಿನ ಎಲ್ಲಾ ಕೂಲಿ ಕಾರ್ಮಿಕರು ದೊಡ್ಡ ಮಟ್ಟದಲ್ಲಿ ಸಂಕಷ್ಟಕ್ಕೆ ಸಿಕ್ಕಿದ್ದು ಜೀವನ ನಡೆಸುವುದು ಕಷ್ಟಕರವಾಗಿದೆ.ಆದ್ದರಿಂದ ಎಲ್ಲಾ ಉದ್ಯೋಗ ಖಾತ್ರಿಯ ಕೂಲಿ ಕಾರ್ಮಿಕರಿಗೆ ದಿನದ ಭತ್ಯೆಯಾಗಿ ೫೦೦ ರೂಪಾಯಿಗಳು ನೀಡುವಂತೆ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡರು ಒತ್ತಾಯಿಸಿದರು.
ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡಿರುವ ಅವರು ಕೃಷಿ ಕೂಲಿಕಾರರ ಖಾತೆಗಳಿಗೆ ಮತ್ತು ಬಿಪಿಎಲ್ ಮತ್ತು ಕಡುಬಡವರ ಜನಧನ್ ಖಾತೆ ಹೊಂದಿದವರಿಗೆ ೫೦೦೦ ರೂಪಾಯಿಗಳ ಸಹಾಯ ಧನ ನೀಡಬೇಕು.ಸಣ್ಣ ಸಣ್ಣ ರೈತರ ಜಮೀನುಗಳಲ್ಲಿ ಪ್ರತಿ ಜಮೀನಲ್ಲಿ ಐದು ಜನರಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡಲು ಉದ್ಯೋಗ ನೀಡಬೇಕು.
ತಾಲೂಕಿನ ನಾಗರಾಳ, ಆಲ್ದಾಳ, ಬೊನ್ಹಾಳ,ಮಂಗಿಹಾಳ,ಜಾಲಿಬೆಂಚಿ,ಕನ್ನೆಳ್ಳಿ,ಬಾಚಿಮಟ್ಟಿ, ದೇವಾಪುರ,ಅರಳಹಳ್ಳಿ, ಕವಡಿಮಟ್ಟಿ,ಏವೂರ ಸೇರಿದಂತೆ ಎಲ್ಲಾ ಗ್ರಾಮಗಳ ಕಾರ್ಮಿಕರಿಗೆ ಫಾರಂ ನಂಬರ್ ೬ರಡಿ ನೊಂದಣಿ ಮಾಡಿಕೊಳ್ಳಬೇಕು, ಕೆಲಸ ಮಾಡುವ ಎಲ್ಲಾ ಕಾರ್ಮಿಕರಿಗೆ ಮಾಸ್ಕ್ ಮತ್ತಿತರೆ ಸಲಕರಣೆ ನೀಡಬೇಕು ಹಾಗು ನಾಡಿನ ಎಲ್ಲಾ ಜನತೆಗೆ ಉಚಿತವಾಗಿ ಮಾಸ್ಕ್ ಸ್ಯಾನಿಟೈಜರ್ ನೀಡಬೇಕೆಂದು ಆಗ್ರಹಿಸಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಂಬ್ರೇಶ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಬರೆದ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ನಭಿ ರಸೂಲ್ ನದಾಫ್,ಕಾರ್ಯದರ್ಶಿ ರಾಜು ದೊಡ್ಡಮನಿ,ಮುಖಂಡ ಖಾಜೆಸಾಬ್ ದಳಪತಿ ನಾಗರಾಳ ಇತರರಿದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…