ಕಲಬುರಗಿ: ವರ್ಷಂಪ್ರತಿ ಜಗಜ್ಯೋತಿ ಬಸವೇಶ್ವರ ಜಯಂತಿ ಜಿಲ್ಲಾಡಳಿತ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಸಂಯುಕ್ತ ಆಶ್ರಯದಲ್ಲಿ ಏಪ್ರೀಲ್ 26ರಂದು ಆಚರಿಸಲಿರುವ ಬಸವ ಜಯಂತಿ 887ನೇ ಉತ್ಸವ ಕೊರೋನಾ ತಡೆಗಟ್ಟುವ ನೀಟ್ಟಿನಲ್ಲಿ ಸಮಾಜದ ಮುಖಂಡರ, ಹಿರಿಯರ ಹಾಗೂ ಮಹಾಸಭಾ ಕಾರ್ಯಕಾರಿಣಿಯೊಂದಿಗೆ ಚರ್ಚಿಸಿ ಜಯಂತಿ ರದ್ದುಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ, ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ ಮೋದಿ ತಿಳಿಸಿದ್ದಾರೆ.
ಇಂದು ಜಿಲ್ಲಾಧಿಕಾರಿಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ವಿಶ್ವವೇ ಮಹಾಮಾರಿ ಕೊರೊನಾ ವೈರಸ್ ತಲ್ಲಣಗೊಳಿಸಿದ್ದು, ಎಲ್ಲರೂ ಆತಂಕದಲ್ಲಿದ್ದೇವೆ. ನಾವೆಲ್ಲರೂ ಮನೆಯಲ್ಲಿದ್ದು, ಕೊರೊನಾ ವಿರುದ್ಧ ಹೋರಾಡಿ ನೆಲ ಸಮೇತ ಕಿತ್ತು ಹಾಕಬೇಕಿದೆ. ಹೀಗಾಗಿ ಪ್ರಸಕ್ತ ಸಾಲಿನ ಇದೇ 26ರ 887ನೇ ಬಸವ ಜಯಂತಿ ಆಚರಿಸದೇ ರದ್ದುಪಡಿಸಲು ತೀರ್ಮಾನಿಸಿದ್ದು, ಮುಂದಿನ ದಿನಗಳಲ್ಲಿ ಇಲ್ಲವೇ ಮುಂದಿನ ವರ್ಷ ಬಸವ ಜಯಂತಿ ಅದ್ಧೂರಿಯಾಗಿ ಆಚರಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಕೊರೊನಾ ಸಂಪೂರ್ಣ ನಿಯಂತ್ರಣಗೊಳ್ಳಲಿ ಎಂಬುದೇ ಮಹಾಸಭಾದ ಬಯಕೆಯಾಗಿದೆ. ಹೀಗಾಗಿ ಪ್ರಸಕ್ತದ ಬಸವ ಜಯಂತಿಯನ್ನು ಜಿಲ್ಲಾಡಳಿತವೇ ಸಾಂಕೇತಿಕವಾಗಿ ಆಚರಿಸಲಿ. ಬಹು ಮುಖ್ಯವಾಗಿ ಬಸವ ಜಯಂತಿಗೆಂದು ಸರ್ಕಾರ ನೀಡುವ ಅನುದಾನ ಕೊವಿಡ್-19 ನಿಯಂತ್ರಿಸಲು ಉಪಯೋಗಿಸಬೇಕು. ಮಹಾಸಭಾವಲ್ಲದೇ ಇತರರೆಲ್ಲರೂ ಬಸವ ಜಯಂತಿ ಆಚರಿಸುತ್ತಿದ್ದರು. ಅವರೂ ಕೂಡಾ ಆಚರಿಸದೇ ತಮ್ಮ ಕೈಲಾದ ಮಟ್ಟಿಗೆ ಪರಿಹಾರ ನಿಧಿಗೆ ಸಹಾಯ ಸಲ್ಲಿಸುವರು ಈ ವೇಳೆಯಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಡಾ. ಶರಣ ಪಾಟೀಲ್ ಇತರರು ಇದ್ದರು.
ಕಲಬುರಗಿ: ಮಹಿಳೆಯರ ಸಹಭಾಗಿತ್ವ ಮತ್ತು ಕೊಡುಗೆಯಿಲ್ಲದೆ ದೇಶದ ಸರ್ವಾಂಗೀಣ ಅಭಿವೃದ್ಧಿ ಅಸಾಧ್ಯ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಮಾತೋಶ್ರೀ…
ಕಲಬುರಗಿ: ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಶನಿವಾರ ಸಂಜೆ ಕ್ಷೇತ್ರದ ಭೀಮಳ್ಳಿ ಗ್ರಾಮದ ರೈತರ ಹೊಲಗಳಿಗೆ…
ಕಲಬುರಗಿ: ಕಷ್ಟಗಳು ಬಂದಾಗ ಕುಗ್ಗದೆ, ಆ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಮೇಲೇಳಬೇಕು ಎಂದು ತಾಜ್ ನಗರದ ಆರೋಗ್ಯ ಕೇಂದ್ರದ ಹಿರಿಯ…
ಪರೋಪಕಾರ ಸೇವೆಯಿಂದ ಆತ್ಮತೃಪ್ತಿ: ಹಿರೇಮಠ ಕಲಬುರಗಿ: ನಗರ ಹೊರವಲಯದ ಸೈಯದ್ ಚಿಂಚೋಳಿ ರಸ್ತೆಯ ಬಳಿ ಇರುವ ಕೆವಿಪಿ ದಣ್ಣೂರ ಪಿಯು…
ವಾಡಿ (ಕಲಬುರಗಿ): ಪುರಸಭೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸೂರ್ಯಕಾಂತ ರದ್ದೇವಾಡಿ ಅವರು ಶುಕ್ರವಾರ…
ಕಲಬುರಗಿ: ಸಂಡೂರ, ಶಿಗ್ಗಾವಿ ಹಾಗೂ ಚನ್ನಪಟ್ಟಣ ಸೇರಿದಂತೆ ಮೂರು ವಿಧಾಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಭರ್ಜರಿ…