ಶಹಾಬಾದ: ಕರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ನಗರದವನ್ನು ಲಾಕ್‌ಡೌನ್ ಮಾಡಿದ್ದರಿಂದ ಕಡುಬಡವರಿಗೆ ಆಹಾರ ಸಮಸ್ಯೆಯಾಗಿದ್ದರೇ ಅವರಿಗೆ ಆಹಾರ ಪದಾರ್ಥಗಳನ್ನು ಅವರ ಮನೆಗೆ ತಲುಪಿಸುವ ಕಾರ್ಯ ಮಾಡಲಾಗುವುದೆಂದು ನಗರಸಭೆ ಸದಸ್ಯ ರವಿ ರಾಠೋಡ ಹೇಳಿದರು.
ಅವರು ನಗರದಲ್ಲಿ ರೇಲ್ವೆ ಹಳಿ ಆಚೇ ಇರುವ ಬಡಾವಣೆಗಳಲ್ಲಿನ ಸುಮಾರು ೨೦೦ ಬಡ ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ವಿತರಿಸಿ ಮಾತನಾಡಿದರು.
ಇದ್ದವರು ಬಂದು ಆಹಾರ ಪಡೆಯಲು ಬರಬೇಡಿ, ಯಾರಿಗೆ ಆಹಾರದ ಸಮಸ್ಯೆಯಿದೆ ಅವರು ಬಂದರೆ ಅಥವಾ ಅವರ ಬಗ್ಗೆ ತಿಳಿಸಿದರೂ ಅವರಿಗೆ ತಲುಪಿಸಲಾಗುವುದು. ಈ ಆಹಾರ ವಿತರಣೆ ಕಾರ್ಯಕ್ರಮದಲ್ಲಿ ಅನೇಕ ಸಂಗಡಿಗರು ಸಹಾಯ ಹಸ್ತ ಚಾಚಿದ್ದಾರೆ.ಅದರ ಸದುಪಯೋಗವಾಗಬೇಕು ಎನ್ನುವುದೇ ನಮ್ಮ ಉದ್ದೇಶ. ಮನೆಗೆ ಬೇಕಾದ ಸಕ್ಕರೇ, ಚಹಾಪುಡಿ, ಅರಿಷಿಣ, ಕಾರದಪುಡಿ, ಎಣ್ಣೆ ಪಾಕೆಟ್, ಗೋಧಿ ಹಿಟ್ಟು, ಅಕ್ಕಿ, ತೊಗರಿ ಬೇಳೆ ಸೇರಿದಂತೆ ಅನೇಕ ಪದಾರ್ಥಗಳನ್ನು ನೀಡಲಾಗುತ್ತಿದೆ.ಅದಕ್ಕೆ ಅನೇಕ ಜನರು ಸಹಾಯ ಮಾಡಲು ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು.
ನರೇಂದ್ರ ವರ್ಮಾ, ದತ್ತಾಫಂಡ್, ಫಾರುಕ್ ಸೇಠ,ಅವಿನಾಶ ಗಾಯಕ್‌ವಾಡ, ಬಬಲು ಮೋಹಿತೆ,ಪ್ರಮೋದ, ಯಲ್ಲಾಲಿಂಗ,ಯುವರಾಜ, ಸುನೀಲ, ಅನೀಲ, ವೀರಮಣಿ,ಪ್ರೀತಮ್, ರವಿ, ಮಹೇಶ,ಅಮೋಲ್,ರೋಹಿದಾಸ, ಅಭಿನವ, ಸಯ್ಯದ್, ಸಚಿನ್ ಪಾಟೀಲ ಸಾಗರ, ಗಣೇಶ, ಶ್ರವಣ,ಶಕೀಲ್, ದೀಪಕ ಇತರರು ಇದ್ದರು.
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…
ಕಲಬುರಗಿ : ಒತ್ತಡದ ಬದುಕಿನಲ್ಲಿ ಸಂಗೀತ ಆಲಿಸುವುದರಿಂದ ಮಾನಸಿಕ ನೆಮ್ಮದಿ, ಶಾಂತಿ ದೊರೆಯಲು ಸಾಧ್ಯವಿದೆ. ಅನೇಕ ಜನ ಸಂಗೀತ ಕಲಾವಿದರಿಂದು…