ಬೀದರ: ಕೊರೊನಾ ಮಹಾಮಾರಿ ದಿನೆ ದಿನೆ ಉಲ್ಬಣಿಸುತ್ತಿದೆ. ಇಂಥ ಸಂಕಷ್ಟ ಸಮಯದಲ್ಲಿ ದೇಶವಾಸಿಗಳೆಲ್ಲ ಜಾತಿ-ಧರ್ಮ ಮರೆತು ಒಗ್ಗಟ್ಟಿನಿಂದ ಈ ಮಹಾಮಾರಿ ವಿರುದ್ಧ ಹೋರಾಡಬೇಕಿದೆ. ಇದರಲ್ಲಿ ಆಲಸ್ಯತನ ಅಥವಾ ನಿರ್ಲಕ್ಷತನ ಸಲ್ಲದು. ಕೊರೊನಾ ವೈರಸನ ಸರಪಳಿ ತುಂಡರಿಸುವುದೊಂದೇ ಪರಿಹಾರವಾದ್ದರಿಂದ ಭಾರತ ಲಾಕಡೌನನಲ್ಲಿ ಸರ್ವರೂ ಮನಯಲ್ಲಿಯೇ ಇರುವ ಮೂಲಕ ಸಹಕರಿಸಬೇಕು. ಜಿಲ್ಲಾಡಳಿತ, ರಾಜ್ಯ ಮತ್ತು ಕೇಂದ್ರ ಸರಕಾರಗಳ ಆದೇಶಗಳನ್ನು ಪಾಲಿಸಬೇಕು ಎಂದು ಬೀದರ ಲಿಂಗಾಯತ ಮಹಾಮಠದ ಪೂಜ್ಯಶ್ರೀ ಅಕ್ಕ ಅನ್ನಪೂರ್ಣತಾಯಿ ತಿಳಿಸಿದ್ದಾರೆ.
ಪ್ರಧಾನಿಯವರ ಕರೆಯ ಮೇರಗೆ ಎಪ್ರಿಲ್ 5ರ ಭಾನುವಾರದಂದು ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ದೇಶವಾಸಿಗಳೆಲ್ಲ ತಮ್ಮ ತಮ್ಮ ಮನೆಯ ಮುಂದೆ ಅಥವಾ ಬಾಲ್ಕನಿಗಳಲ್ಲಿ ಹಣತೆ ಬೆಳಗಿಸಿ ಮಾನವ ಕುಲಕ್ಕೆ ಆವರಿಸಿರುವ ಅಂಧಕಾರ ತೊಡೆಯುವ ಮನಸ್ಸು ಮಾಡಬೇಕು. ಜೊತೆಗೆ ಇಷ್ಟಲಿಂಗಧಾರಿಗಳು ದೀಪ ಬೆಳಗಿಸಿ. ಇಷ್ಟಲಿಂಗದಲ್ಲಿ ದೃಷ್ಟಿಯಿಟ್ಟು ಧ್ಯಾನಿಸಿ, 5 ವಚನಗಳನ್ನು ಪಠಣ ಮಾಡಿ ಕೊರೊನಾ ನಿರ್ಮೂಲನೆ ಮತ್ತು ಸಧೃಢ ಭಾರತ ನಿರ್ಮಾಣದ ಸಂಕಲ್ಪ ತೊಡಬೇಕಾಗಿ ವಿನಂತಿ. ಯಾವುದೇ ಸಂಧರ್ಭದಲ್ಲಿಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯದಿರಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…
ಕಲಬುರಗಿ; ಹೈದ್ರಾಬಾದ್- ಕರ್ನಾಟಕ ಶಿಕ್ಷಣ ಸಂಸ್ಥೆಯ PDACE ಸಭಾಂಗಣದಲ್ಲಿ ನಡೆದ ಕಲ್ಯಾಣ ಕರ್ನಾಟಕ startup conclave ಇಂದು ದಕ್ಷಣ ಶಾಸಕ…