ಕಲಬುರಗಿ: ಕೊರೋನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಾಗಿ ಕಲಬುರಗಿ ಜಿಲ್ಲೆಯಾದ್ಯಂತ ಈಗಾಗಲೇ ಮದ್ಯ ಉತ್ಪಾದನೆ, ಸಾಗಾಣಿಕೆ ಹಾಗೂ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಅಬಕಾರಿ ಇಲಾಖೆಯ ಅಧಿಕಾರಿಗಳು 2020ರ ಮಾರ್ಚ್ 16 ರಿಂದ ಏಪ್ರಿಲ್ 6 ರವರೆಗೆ ಒಟ್ಟು 663 ಅಬಕಾರಿ ದಾಳಿ ನಡೆಸಿ 34 ಪ್ರಕರಣ ದಾಖಲಿಸಲಾಗಿದೆ ಎಂದು ಕಲಬುರಗಿ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ 279.840 ಲೀಟರ್ ಮದ್ಯ, 221.480 ಲೀ. ಬೀಯರ್, 524 ಲೀ, ಸೇಂಧಿ, 16 ಲೀ, ಕಳ್ಳಭಟ್ಟಿ ಸಾರಾಯಿ, 260 ಲೀ. ಬೆಲ್ಲದ ಕೊಳೆ ಮತ್ತು 1.750 ಸಿ.ಹೆಚ್. ಮತ್ತು 07 ವಾಹನಗಳನ್ನು ಜಪ್ತು ಮಾಡಲಾಗಿದೆ. 02 ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ. ಇದುವರೆಗೆ 220 ಲೀಟರ್ ಸ್ಯಾನಿಟೈಸರ್‍ನ್ನು ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ವಿತರಿಸಲಾಗಿದೆ.
ಅಕ್ರಮವಾಗಿ ಕಳ್ಳಭಟ್ಟಿ ಸರಾಯಿ, ಸೇಂದಿ ಮತ್ತು ನಕಲಿ ಮದ್ಯ ತಯಾರಿಕೆ, ಶೇಖರಣೆ, ಸಾಗಾಣಿಕೆ ಮತ್ತು ಮಾರಾಟ ಮಾಡುವ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ನೇರವಾಗಿ ಆಯಾ ತಾಲೂಕುಗಳ ಸಂಬಂಧಪಟ್ಟ ಅಬಕಾರಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ. ತಾಲೂಕಿನ ಹೆಸರು, ಸಂಬಂಧಪಟ್ಟ ತಾಲೂಕಿನ ಅಧಿಕಾರಿಗಳ ಹೆಸರು ಹಾಗೂ ಅವರ ಮೊಬೈಲ್ ಸಂಖ್ಯೆ ವಿವರ ಇಂತಿದೆ.
ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಸಂಬಂಧಿಸಿದಂತೆ-ಅಬಕಾರಿ ನಿರೀಕ್ಷಕ ಗೋಪಾಳೆ ಪಂಡಿತ ಇವರ ಮೊಬೈಲ್ ಸಂಖ್ಯೆ 9449597145 ಹಾಗೂ ಅಬಕಾರಿ ಉಪ ನಿರೀಕ್ಷಕ ರಮೇಶ ಬಿರಾದಾರ ಇವರ ಮೊಬೈಲ್ ಸಂಖ್ಯೆ 9945369528. ಕಲಬುರಗಿ, ಆಳಂದ, ಅಫಜಲಪುರ ಹಾಗೂ ಜೇವರ್ಗಿ ತಾಲೂಕು: ಅಬಕಾರಿ ಉಪ ಅಧೀಕ್ಷಕ ವಿಠ್ಠಲರಾವ ವಾಲಿ ಇವರ ಮೊಬೈಲ್ ಸಂಖ್ಯೆ 9449597146. ಕಲಬುರಗಿ ತಾಲೂಕಿನ ವಲಯ-1ಕ್ಕೆ (ಕಲಬುರಗಿ ತಾಲೂಕಿಗೆ ಸಂಬಂಧಿಸಿದಂತೆ)- ಅಬಕಾರಿ ನಿರೀಕ್ಷಕ ಬಾಲಕೃಷ್ಣ ಮುದುಕಣ್ಣ ಇವರ ಮೊಬೈಲ್ ಸಂಖ್ಯೆ 9449618814. ಕಲಬುರಗಿ ತಾಲೂಕಿನ ವಲಯ-2ಕ್ಕೆ (ಕಲಬುರಗಿ ತಾಲೂಕಿಗೆ ಸಂಬಂಧಿಸಿದಂತೆ)- ಅಬಕಾರಿ ನಿರೀಕ್ಷಕ ಮಲ್ಲಿಕಾರ್ಜುನ ಇವರ ಮೊಬೈಲ್ ಸಂಖ್ಯೆ 9036944439.
ಆಳಂದ ಹಾಗೂ ಅಫಜಲಪುರ ತಾಲೂಕು: ಅಬಕಾರಿ ನಿರೀಕ್ಷಕ ಶ್ರೀಶೈಲ್ ಆವಜಿ ಇವರ ಮೊಬೈಲ್ ಸಂಖ್ಯೆ 9742872011. ಜೇವರ್ಗಿ ತಾಲೂಕು: ಅಬಕಾರಿ ನಿರೀಕ್ಷಕ ವನೀತಾ ಸೀತಾಳೆ ಇವರ ಮೊಬೈಲ್ ಸಂಖ್ಯೆ 8095955545. ಚಿತ್ತಾಪೂರ, ಸೇಡಂ ಮತ್ತು ಚಿಂಚೋಳಿ ತಾಲೂಕು: ಅಬಕಾರಿ ಉಪ ಅಧೀಕ್ಷಕ ಗ್ಲಾಡಸನ್ ಸಂಜಯಕುಮಾರ ಇವರ ಮೊಬೈಲ್ ಸಂಖ್ಯೆ 9449597149. ಚಿತ್ತಾಪೂರ ತಾಲೂಕು: ಅಬಕಾರಿ ನಿರೀಕ್ಷಕ ಓಂ ಪ್ರಕಾಶ ಇವರ ಮೊಬೈಲ್ ಸಂಖ್ಯೆ 9972921188. ಸೇಡಂ ತಾಲೂಕು: ಅಬಕಾರಿ ನಿರೀಕ್ಷಕ ಗೋಪಾಳೆ ಪಂಡಿತ ಇವರ ಮೊಬೈಲ್ ಸಂಖ್ಯೆ 9731287156. ಚಿಂಚೋಳಿ ತಾಲೂಕು: ಅಬಕಾರಿ ನಿರೀಕ್ಷಕ ಮಲ್ಲಿಕಾರ್ಜುನ ಹನಗಂಡಿ ಇವರ ಮೊಬೈಲ್ ಸಂಖ್ಯೆ 9035897229.
ವಾಡಿ (ಕಲಬುರಗಿ): ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಅವರ ವೃತ್ತದಲ್ಲಿರುವ ಬಾಬಾಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಂವಿಧಾನ ಪೂರ್ವ ಪೀಠಿಕೆ ಓದುವ ಮೂಲಕ…
ಕಲಬುರಗಿ: ಕಾಂಗ್ರೆಸ್ ಪಕ್ಷದ ಅಂಗ ಸಂಖ್ಯೆ ಸೇವಾದಳ ಯಂಗ್ ಬ್ರಿಗೇಡ್ ಸದಸ್ಯತ್ವ ಅಭಿಯಾನ ನ.20ರಿಂದ ರಾಜ್ಯವ್ಯಾಪಿ ಆರಂಭ ಮಾಡಲಾಗಿದ್ದು, ಆಸಕ್ತರು…
ಕಲಬುರಗಿ: ಜೀವನದಲ್ಲಿ ಹತ್ತನೇ ಮತ್ತು ಪಿಯುಸಿ ಬಹಳ ಮಹತ್ವದ ಘಟ್ಟಗಳು. ಇವೆರಡು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತವೆ. ವಿದ್ಯಾರ್ಥಿಗಳು ಅಚಲವಾದ ಆತ್ಮವಿಶ್ವಾಸದಿಂದ…
ಸೇಡಂ : ತಮ್ಮ ಬೌದ್ಧಿಕ ವಿಕಾಸದಲ್ಲಿಯೇ ಮಹಿಳೆಯರ ಅಸ್ತಿತ್ವವಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಸವರಾಜ ಸಾದರ ಹೇಳಿದರು.…
ಕಲಬುರಗಿ: ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ ನಿವಾಸಿ ಆನಂದಪ್ಪ ಶರಣಪ್ಪ ಉಮ್ಮನಗೋಳ್(೮೦) ಅವರು ಸೋಮವಾರ ಬೆಳಗ್ಗೆ ವಯೋಸಹಜವಾಗಿ ನಿಧನರಾದರು. ಮೃತರು…
ಕಲಬುರಗಿ: ಸಂಘಸಂಸ್ಥೆಗಳು ಸಾದಕರನ್ನು ಗುರುತಿಸಿ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಮುಖಾಂತರಾ ಅವರ ಜವಾಬ್ದಾರಿ ಹೆಚ್ಚಿಸುವುದರಜೋತೆಯಲ್ಲಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಿರುವುದು ಸಮಾಜಕ್ಕೆ…